Saturday, April 19, 2025
Saturday, April 19, 2025

Kannada Literary and Cultural Forum ರೋಗಮುಕ್ತ ಜೀವನಕ್ಕೆ ಕ್ರೀಡೆ ಬಹಳ ಮುಖ್ಯ- ಡಿ.ಎಸ್.ಶಂಕರ ಶೇಟ್

Date:

Kannada Literary and Cultural Forum ಶಾಲಾ ಮತ್ತು ಕಾಲೇಜು ಶಿಕ್ಷಣದ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಅಂಕಗಳಿಕೆಗೆ ಸೀಮಿತಗೊಳಿಸದೇ ಕ್ರೀಡಾ ಕೂಟಗಳಲ್ಲಿಯೂ ತೊಡಗುವಂತೆ ಮಾಡುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರ ಮೇಲಿದೆ ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಹೇಳಿದರು.

ಸೊರಬ ಪಟ್ಟಣದ ಜ್ಯೂಮಿಯರ್ ಕಾಲೇಜ್ ಮೈದಾನದಲ್ಲಿ ಬಿ.ಸಿ.ಸಿ. ಕಾನುಕೊಪ್ಪ ವತಿಯಿಂದ ಹಮ್ಮಿಕೊಂಡ ರಾಜ್ಯ ಮಟ್ಟದ ಮೂರನೇ ವರ್ಷದ ವಿದ್ಯುತ್ ನಗರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಅನೇಕ ಕ್ರೀಡಾಪಟುಗಳಿದ್ದಾರೆ. ಅವರನ್ನು ಗುರುತಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಸಮಾಜದಲ್ಲಿನ ತಿರುಳನ್ನ ಅರಿತುಕೊಳ್ಳಲು ನಮಗೆ ಶಿಕ್ಷಣ ಎಷ್ಟು ಮುಖ್ಯವಾಗಿದೆಯೋ ಅದರಂತೆ ರೋಗಮುಕ್ತ ಜೀವನ ಸಾಗಿಸಲು ಕ್ರೀಡೆ ಅಷ್ಟೆ ಮುಖ್ಯವಾಗಿದೆ ಎಂದರು.

ಉದ್ಯಮಿ ಮಲ್ಲಿಕಾರ್ಜುನ ಮಾತನಾಡಿ, ಯುವಕರು ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಆಟಗಾರರು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವವನ್ನು ವೃದ್ಧಿಸಿಕೊಳ್ಳಬೇಕು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

Kannada Literary and Cultural Forum ಡಿ.17 ರವರೆಗೂ ಕ್ರೀಡಾಕೂಟಗಳು ನಡೆಯಲಿದ್ದು, ಕ್ರೀಡಾಭಿಮಾನಿಗಳ ಪ್ರೋತ್ಸಾಹ ಅಗತ್ಯವಿದೆ ಎಂದರು.

ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜ ಗೌಡ ಚಿಕ್ಕಾವಲಿ, ಉದ್ಯಮಿಗಳಾದ ಅಜಿತ್ ಮಹಾಮಾಯಿ, ಹರ್ಷಾ ರಾಮ್, ಪ್ರಾಂಶುಪಾಲ ಸುರೇಶಪ್ಪ, ಗ್ರಾಪಂ ಮಾಜಿ ಉಪಾಧ್ಯಕ್ಷ ಕೃಷ್ಣಮೂರ್ತಿ, ಮಾಜಿ ಸದಸ್ಯ ನೆಹರು ಕೊಡಕಣ , ಗೃಹರಕ್ಷಕದಳದ ಘಟಕಾಧಿಕಾರಿ ಬಿ. ರೇವಣಪ್ಪ, ತಂಡದ ಪ್ರಮುಖರಾದ ಎಚ್.ಎಸ್. ಪವನ್, ಕೆ.ಮಹೇಶ್, ಎಸ್. ಸಂತೋಷ್. ಕೆ.ಇ.ಬಿ. ಮಹೇಶ್, ಎಂ.ಕೆ. ಪ್ರೀತಂ, ವಿನಾಯಕ, ಜಿ. ಸುಮಂತ, ಚಿನ್ನು ಸೇರಿದಂತೆ ಇತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Karnataka Sports Karate Association ಕರಾಟೆ ತೀರ್ಪುಗಾರರ ಪರೀಕ್ಷೆಯಲ್ಲಿ ಶಿವಮೊಗ್ಗದ ಶ್ರೀಹರ್ಷ ಉತ್ತೀರ್ಣ

Akhila Karnataka Sports Karate Association ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಅಖಿಲ...

ಶಿವಮೊಗ್ಗದಲ್ಲಿ ಯಶಸ್ವಿಯಾಗಿ ನಡೆದ ಕನಕದಾಸರ ಕೀರ್ತನೆ ಗಾಯನ ಸ್ಪರ್ಧೆ

ಶಿವಮೊಗ್ಗ ಕನಕ ಭಜನಾ ಮಂಡಳಿಯವರು ದಶಮಾನೋತ್ಸವ ಕಾರ್ಯಕ್ರಮವನ್ನು ಜಯಂತಿ ಪರಮೇಶ್ವರ್ ರವರ...

Madhu Bangarappa ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣ ಖಂಡನೀಯ- ಸಚಿವ‌ ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ...