B.Y.Vijayendra ಈ ನೆಲದ ಪ್ರತಿ ಭಾಷೆ, ಸಂಸ್ಕೃತಿಯೂ ಭಾರತೀಯ ಪರಂಪರೆಯ ಮಹಾವೃಕ್ಷದ ಬೇರುಗಳಾಗಿವೆ. ಈ ಹಿನ್ನಲೆಯಲ್ಲಿಯೇ ವಿಶ್ವದಲ್ಲೇ ‘ಭಾರತ’ ಅತ್ಯಂತ ಶ್ರೀಮಂತ ಪರಂಪರೆಯ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿದೆ.
ರಾಷ್ಟ್ರದ ಭಾಷೆಗಳೆಲ್ಲವನ್ನೂ ಬೆಳಸಿ ಗೌರವಿಸುವ ಬದ್ಧತೆಯೇ ನೈಜ ಭಾರತೀಯತೆಯ ರಕ್ಷಣೆ ಎಂದು ನಂಬಿರುವ ಮಾನ್ಯ ಪ್ರಧಾನಿ ನರೇಂದ್ರ ಮೋದಿ
ಅವರ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಲೋಕ ಸಭೆಯಲ್ಲಿ ನಮ್ಮ ಹೆಮ್ಮೆಯ ಕನ್ನಡವೂ ಸೇರಿದಂತೆ 21 ಭಾಷೆಗಳ ಭಾಷಾಂತರಕ್ಕೆ ವ್ಯವಸ್ಥೆ ಮಾಡುವ ಮೂಲಕ ವಿವಿಧೆತೆಯಲ್ಲಿ ಏಕತೆಯ ಸಂದೇಶ ಸಾರಿದೆ.
B.Y.Vijayendra ಮುಂದಿನ ಸೋಮವಾರದಿಂದಲೇ ಸಂಸತ್ ನಲ್ಲಿ ‘ಕನ್ನಡ ಡಿಂಡಿಮ’ ಸದ್ದು ಮಾಡಲಿದೆ.
ಸಮಸ್ತ ಕನ್ನಡ ಜನತೆಯ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನಾಪೂರ್ವಕ ಪ್ರಣಾಮಗಳನ್ನು ಸಲ್ಲಿಸೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.