Sri Revanasiddeswara High School ಚಿಕ್ಕಮಗಳೂರು ತಾಲ್ಲೂಕಿನ ನಿಡಘಟ್ಟ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಪ್ರೌಢಶಾಲೆಯ ಎಂಟನೇ ತರಗತಿಯ ಸುಮಾರು ೯೨ ವಿದ್ಯಾರ್ಥಿಗಳಿಗೆ ಶಾಲೆಯ ಸಲಹಾ ಸಮಿತಿ ಪದಾಧಿಕಾರಿಗಳು ಈಚೆಗೆ ಉಚಿತವಾಗಿ ಸಮವಸ್ತçವನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಸಲಹಾ ಸಮಿತಿ ಅಧ್ಯಕ್ಷ ಮರಳಸಿದ್ದಪ್ಪ ಪದಾಧಿಕಾರಿಗಳ ಸಹಕಾರದೊಂದಿಗೆ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎರಡುಜೊತೆ ಸಮವಸ್ತç ವಿತರಿಸಿದ್ದು ಮಕ್ಕಳು ಉತ್ತಮ ಶಿಕ್ಷಣದೊಂದಿಗೆ ಶಿಸ್ತನ್ನು ಕಲಿತು ಉತ್ತಮ ನಾಗರೀಕರಾಗಬೇಕು ಎಂದು ಕರೆ ನೀಡಿದರು.
Sri Revanasiddeswara High School ಉಪಾಧ್ಯಕ್ಷ ಚಂದ್ರಶೇಖರಪ್ಪ ಮಾತನಾಡಿ ಬಡ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಲಹಾ ಸಮಿತಿ ಸದಸ್ಯರುಗಳು ವೈಯಕ್ತಿಕವಾಗಿ ದೇಣ ಗೆ ಸಂಗ್ರಹಿಸಿ ಮಕ್ಕಳಿಗೆ ಗುಣಮಟ್ಟದ ಸಮವಸ್ತ್ರ ವಿತರಿಸಿದ್ದು ಮಕ್ಕಳು ಸ್ವಚ್ಚ ಹಾಗೂ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸಲಹಾ ಸಮಿತಿ ಉಪಾಧ್ಯಕ್ಷ ಚಂದ್ರಶೇಖರಪ್ಪ, ಸದಸ್ಯರುಗಳಾದ ದಿನೇಶ್, ಶಾಚಿತ ಕುಮಾರ್, ಮಲ್ಲಿಕಾರ್ಜುನಪ್ಪ, ಎನ್.ವೈ.ರವಿ, ಶ್ರೀಯೋಗಿಶ್, ಬಸವರಾಜಯ್ಯ, , ಮತ್ತು ಶ್ರೀಮತಿ ಗೀತಾ ತಿರು ಮಲೆಗೌಡ, ಎನ್.ಸಿ.ಅರುಣ್‌ಕುಮಾರ್. ಮುಖ್ಯ ಶಿಕ್ಷಕ ಟಿ.ಇ.ಕೃಷ್ಣಮೂರ್ತಿ, ದೈಹಿಕ ಶಿಕ್ಷಕ ಎಮ್.ಎನ್. ನಾಗ ರಾಜ್, ಸಹ ಶಿಕ್ಷಕಿ ಕಲ್ಯಾಣಮ್ಮ, ಗೌರವ ಶಿಕ್ಷಕಿ ಚನ್ನಬಸವೇಶ್ವರ್, ಭರತ್ ಕುಮಾರ್, ಜಗದೀಶ್ ಹಾಗೂ ಕಾವ್ಯ ಮತ್ತಿತರರು ಉಪಸ್ಥಿತರಿದ್ದರು.