Friday, April 18, 2025
Friday, April 18, 2025

Dinesh Gundu Rao ಡಯಾಲಿಸಿಸ್ ಕೇಂದ್ರಗಳನ್ನ ಸುವ್ಯವಸ್ಥೆಗೆ ತರುವತ್ತ ಗಮನ ಹರಿಸಿದ್ದೇನೆ- ಸಚಿವ ದಿನೇಶ್ ಗುಂಡೂರಾವ್

Date:

Dinesh Gundu Rao ಡಯಾಲಿಸಿಸ್ ಸಮಸ್ಯೆಗೆ ಹಿಂದಿನ ಸರ್ಕಾರದಲ್ಲಾದ ಎಡವಟ್ಟುಗಳು ಕಾರಣವೇ ಹೊರತು, ನಮ್ಮ ಸರ್ಕಾರದಿಂದ ಆಗಿದ್ದಲ್ಲ. ಸಾರ್ವಜನಿಕರಿಗೆ ತಪ್ಪು ಮಾಹಿತಿ ಹೋಗಬಾರದು ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.

ಡಯಾಲಿಸಿಸ್ ಕೇಂದ್ರಗಳನ್ನು ಸುವ್ಯವಸ್ಥೆಗೆ ತರುವತ್ತ ಹೆಚ್ಚಿನ ಗಮನ ಹರಿಸಿದ್ದೇನೆ. ಪಿಪಿಪಿ ಮಾದರಿಯಲ್ಲಿ ರಾಜ್ಯಾದ್ಯಂತ 800 ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಿಬ್ಬಂದಿಗಳ ವೇತನ, ಹಾಗೂ ಇಎಸ್ಐ ಪಿಎಫ್ ಹಿಂದಿನ ಸರ್ಕಾರದ ಅವಧಿಯಲ್ಲಿ ಬಿಆರ್ ಎಸ್ ಮತ್ತು ಇಎಸ್ ಕೆಎಜಿ ಸಂಸ್ಥೆಯವರು ಬಾಕಿ ಉಳಿಸಿಕೊಂಡಿದ್ದಾರೆ. ಈ ಎರಡು ಸಂಸ್ಥೆಗಳ‌ ಬಗ್ಗೆ ಸಾರ್ವಜನಿಕರು, ಸಿಬ್ಬಂದಿಗಳಿಂದ ಸಾಕಷ್ಟು ದೂರುಗಳು ಬಂದಿದ್ದವು. ಜಿಲ್ಲಾ ಪ್ರವಾಸದ ವೇಳೆ ಹಲವು ಕಡೆ ಡಯಾಲಿಸಿಸ್ ಕೇಂದ್ರಗಳು ಸರಿಯಾಗಿ ನಿರ್ವಹಣೆ ಆಗದಿರುವುದನ್ನ ಗಮನಿಸಿದ್ದೆ ಎಂದಿದ್ದಾರೆ.

Dinesh Gundu Rao ಹೀಗಾಗಿ ಡಯಾಲಿಸಿಸ್ ಕೇಂದ್ರಗಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ನಾಲ್ಕು ವಿಭಾಗವಾರು ಟೆಂಡರ್ ಆಹ್ವಾನಿಸಿ ಬಹುತೇಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದಿದ್ದಾರೆ.

ಎಲ್ಲೆಡೆ ಸೊಂಕು ರಹಿತ ಏಕಬಳಕೆಯ ಡಯಾಲಿಸಿಸ್ ಯಂತ್ರಗಳು ಬರಲಿವೆ. ಉತ್ತಮ ಡಯಾಲಿಸಿಸ್ ಸೇವೆ ಜನಸಾಮಾನ್ಯರಿಗೆ ದೊರೆಯಲಿದೆ.‌ ವ್ಯವಸ್ಥೆ ಸರಿಪಡಿಸಲು ಸಿಬ್ಬಂದಿಗಳು ಸಹಕರಿಸಬೇಕೆಂದು ಕೋರಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sonia Gandhi ಸೋನಿಯಾ & ರಾಹುಲ್ ಮೇಲೆ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ- ಶಿವಮೊಗ್ಗ ಎನ್ಎಸ್ ಯು ಐ ಆರೋಪ- ಪ್ರತಿಭಟನೆ

ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್...

MESCOM ಏಪ್ರಿಲ್ 18 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ...

ದತ್ತಿ ನಿಧಿ ಕಾರ್ಯಕ್ರಮಗಳು ಸಮಾಜಮುಖಿಯಾಗಿರಲಿ-ಮಾನಸ ಶಿವರಾಮಕೃಷ್ಣ

ವಮೊಗ್ಗ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದಿಂದ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು....