BMS Law College ಬಿ.ಎಂ.ಎಸ್ ಕಾನೂನು ಮಹಾವಿದ್ಯಾಲಯದಲ್ಲಿ “ಕಾನೂನು ಬೆಳಕು” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅದರ ಅಂಗವಾಗಿ ಪ್ರಥಮ ವರ್ಷದಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಕೊನೆಯ ವರ್ಷದ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಿಂದ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರೊ.(ಡಾ.) ಅನಿತಾ ಎಫ್.ಎನ್.ಡಿಸೋಜಾ, ಪ್ರಾಂಶುಪಾಲರು, ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರನ್ನು, ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಕುರಿತು ಸ್ವಾಗತ ಭಾಷಣವನ್ನು ಮಾಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಜಿ.ಎಲ್.ವಿಶ್ವನಾಥ್, ಹಿರಿಯ ವಕೀಲರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಪಠ್ಯಕ್ರಮದಿಂದ ಹೊರತಾದ ಯೋಚನೆಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಹೆಚ್ಚು ಒತ್ತು ಕೊಡಬೇಕು ಎಂದು ಕಿವಿಮಾತು ಹೇಳಿದರು.
BMS Law College ಶ್ರೀ ಅವಿರಾಮ್ ಶರ್ಮಾ, ದತ್ತಿಗಳು, ಬಿ.ಎಂ.ಎಸ್.ಇ.ಟಿ., ಅಧ್ಯಕ್ಷರು, ಬಿ.ಎಂ.ಎಸ್.ಸಿ.ಎಲ್. ಇವರು ಹೊಸ ವಿದ್ಯಾರ್ಥಿಗಳಿಗೆ ಮತ್ತು ಉತ್ತಮ ಶ್ರೇಣಿಯಿಂದ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ವಿಂಗ್ ಕಮಾಂಡರ್ ಆರ್.ಎ. ರಾಘವನ್, ನಿರ್ದೇಶಕರು, ಆಡಳಿತ, ಹಾಗೂ ಮಹಾವಿದ್ಯಾಲಯದ ಶಿಕ್ಷಕ ವರ್ಗ ಮತ್ತು ಆಡಳಿತ ವರ್ಗದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.