Shivamogga Airport ನ. 22ರಂದು ಸಂಜೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಇಂಡಿಗೋ ವಿಮಾನ ಸಂಸ್ಥೆಯ ಅಧಿಕಾರಿಗಳೊಂದಿಗೆ ಏರ್ಪಡಿಸಲಾದ ಸಭೆಯಲ್ಲಿ ಶಿವಮೊಗ್ಗದ ವಿವಿಧ ಕೈಗಾರಿಕಾ ಸಂಘಗಳು ಹಾಗೂ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಇಂಡಿಗೋ ವಿಮಾನ ಪ್ರಯಾಣ ದರದಲ್ಲಿ ಕಾರ್ಪೊರೇಟ್ ರಿಯಾಯಿತಿಗಾಗಿ ಸಂಸ್ಥೆಯ ಅಸಿಸ್ಟೆಂಟ್ ಮ್ಯಾನೇಜರ್ ಶ್ರೀ ಮನೋಜ್ ಪ್ರಭು, ಡೈರೆಕ್ಟರ್ ಟ್ರೇಡ್ ಸೇಲ್ಸ್, ಶ್ರೀ ಅಗ್ನೆಲ್ ಪಿಂಟೋ, ಸಹನಿರ್ದೇಶಕ ಸೇಲ್ಸ್, ಶ್ರೀ ಸೌರಬ್ ಸಚಿದೇವ್ ಅಧಿಕಾರಿಗಳ ಜೊತೆ ಸಭೆಯಲ್ಲಿ ಚರ್ಚಿಸಿ ಮನವಿಯನ್ನು ಸಲ್ಲಿಸಿಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗದಿಂದ ಸಿಂಗಾಪುರ, ಮುಂಬೈ, ಡೆಲ್ಲಿ, ರಾಜಸ್ಥಾನ, ಗುಜರಾತ್, ಅಹಮದಾಬಾದ್, ಡಿಯು ಡಾಮನ್, ಮುಂತಾದ ನಗರಗಳಿಗೆ ನೇರ ಸಂಪರ್ಕ ಕಲ್ಪಿಸಲು ಮಾಚೇನಹಳ್ಳಿ ಕೈಗಾರಿಕಾ ಅಸೋಷಿಯೇಶನ್‌ನ ಮನವಿಯನ್ನು ಅಧ್ಯಕ್ಷ ಎನ್. ಗೋಪಿನಾಥ್ ರವರು ಸಲ್ಲಿಸಿದರು.
ಇಂಡಿಗೋ ಸಂಸ್ಥೆಯ ಅಸಿಸ್ಟೆಂಟ್ ಮ್ಯಾನೇಜರ್ ಮನೋಜ್ ಪ್ರಭು ರವರು ಮಾತನಾಡಿ ಈಗಾಗಲೆ ಇಂಡಿಗೋ ಸಂಸ್ಥೆಯ ವಿಮಾನಯಾನ ಪ್ರಪಂಚದಾದ್ಯoತ ಮಂಚೂಣಿಯಲ್ಲಿದೆ ಹಾಗೂ ಸುರಕ್ಷತೆ ಮತ್ತು ಸಕಾಲದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ. ಬರುವ ದಿನಗಳಲ್ಲಿ ಮಾರ್ಚ್ 2024ರ ನಂತರ ಶಿವಮೊಗ್ಗಕ್ಕೆ ವಿವಿಧ ಸ್ಥಳದಿಂದ ಸ್ಥಳೀಯ, ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಡಿಗೋ ವಿಮಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾರಾಟ ಯಾವುದೇ ಅಡಚಣೆಗಳಿಲ್ಲದಂತೆ ಮುಂದುವರೆಯುತ್ತದೆ ಎಂದು ತಿಳಿಸಿದರು.
Shivamogga Airport ಈ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಬಿ. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹಕಾರ್ಯದರ್ಶಿ ಜಿ. ವಿಜಯಕುಮಾರ್, ನಿರ್ದೇಶಕರುಗಳಾದ ಕೆ.ಎಸ್ ಸುಕುಮಾರ್, ಪರಮೇಶ್ವರ ಈ, ಪ್ರದೀಪ್ ವಿ. ಯಲಿ, ಗಣೇಶ ಎಂ. ಅಂಗಡಿ, ಕೈಗಾರಿಕೋಧ್ಯಮಿಗಳಾದ ಡಿ.ಎಸ್. ಚಂದ್ರಶೇಖರ್, ಕಿರಣ್ ಕುಮಾರ್, ರವಿಪ್ರಕಾಶ್, ಸಂಯೋಜಿತ ಸಂಘಗಳ ಅಧ್ಯಕ್ಷರಾದ ಆರ್ ರಂಗಪ್ಪ, ವಿ.ಕೆ ಜೈನ್, ರಾಜೇಂದ್ರ ಪ್ರಸಾದ್, ಮೊದಲಾದವರು ಉಪಸ್ಥಿತರಿದ್ಧರು.
ಇಂಡಿಗೋ ಏರ್ಲೈನ್ಸ್ ಉನ್ನತ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಮುಂದಿನ ವಿಮಾನಗಳು ಯಾವ ಸ್ಥಳಗಳಿಗೆ ಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಶಿವಮೊಗ್ಗ ಟು ಚೆನ್ನೈ, ಶಿವಮೊಗ್ಗ ಟು ಬಾಂಬೆ ಈ ಸ್ಥಳಗಳಿಗೆ ವಿಮಾನಗಳನ್ನ ಬಿಡಲಾಗುತ್ತದೆ ಚರ್ಚಿಸಲಾಯಿತು ಎಂದು ಶಿವಮೊಗ್ಗ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಎನ್. ಗೋಪಿನಾಥ್ ಅವರು ಸಭೆಯ ಬಳಿಕ ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು.