Saturday, May 23, 2026
Saturday, May 23, 2026

Crime News ಭದ್ರಾವತಿ ಪೊಲೀಸರ ಬಲೆಗೆ ಬಿದ್ದ ಮೈಸೂರಿನ ಹನಿಟ್ರ್ಯಾಪ್ ಗ್ಯಾಂಗ್

Date:

Crime News ಹನಿತ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ನ್ನು ಭದ್ರಾವತಿಯ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.

ಮೈಸೂರು ಮೂಲದ ಐದು ಜನರನ್ನ ಭದ್ರಾವತಿಯ ಹೊಸ ಮನೆ ಶಿವಾಜಿ ಸರ್ಕಲ್ ಪೊಲೀಸರು ಬಂಧಿಸಿದ್ದಾರೆ…
ಭದ್ರಾವತಿಯ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದ ಶರತ್ ಕುಮಾರ್ ಎಂಬವರ ದೂರಿನ ಮೇರೆಗೆ ಪೊಲೀಸರು ಶ್ವೇತಾ, ವಿನಾಯಕ, ಮಹೇಶ್, ಯಲ್ಲಪ್ಪ ಮತ್ತು ಅರುಣ್ ಕುಮಾರ್ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಬಳಿ ಇದ್ದ ಡಸ್ಟರ್ ಕಾರು ಹಾಗೂ 7 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಭದ್ರಾವತಿಯ ಶರತ್ ಎಂಬುವರಿಗೆ ಶ್ವೇತಾ ಅವರು ಪರಿಚಯವಾಗಿದ್ದರು. ಆಕೆ ಬೆತ್ತಲೆಯಾಗಿ ವಿಡಿಯೋ ಕಾಲ್ ಮಾಡಿ 20 ಲಕ್ಷ ಬೇಡಿಕೆ ಇಟ್ಟಿದ್ದಳು. ಬಳಿಕ ಶರತ್ ಹತ್ತಿರ ಒಂದು ಲಕ್ಷ ರೂಪಾಯಿ ಹಣವನ್ನು ಹೆದರಿಸಿ ಕಿತ್ತುಕೊಂಡಿದ್ದಳು.

ಶರತ್ ಹತ್ತಿರ ಒತ್ತಾಯಪೂರ್ವಕವಾಗಿ 25 ಲಕ್ಷ ಸಾಲ ಪಡೆಯುವುದು ಕೊಂಡಿರುವುದಾಗಿ ಸಹಿಯನ್ನು ಶ್ವೇತ ಹಾಗೂ ಆಕೆಯ ಗ್ಯಾಂಗ್ ಹಾಕಿಸಿಕೊಂಡಿದ್ದರು. ಮೈಸೂರಿನಲ್ಲಿ ಶರತ್ ಅವರನ್ನ ಎರಡು ದಿನಗಳ ಕಾಲ ಕೂಡಿಹಾಕಿ ಹಲ್ಲೆ ಕೂಡ ಮಾಡಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಶರತ್ ಅವರು ಭದ್ರಾವತಿಯ ಪೊಲೀಸರಿಗೆ ದೂರು ನೀಡಿದ್ದರು.

Crime News ಪೊಲೀಸರು, ಶರತ್ ದೂರಿನ ಮೆರೆಗೆ ಮೈಸೂರಿನಲ್ಲಿ ಹನಿ ಟ್ರ್ಯಾಪ್ ಗ್ಯಾಂಗ್ ನ ಲೀಡರ್ ಶ್ವೇತಾ ಹಾಗೂ ಅವರ ಗ್ಯಾಂಗ್ ಅನ್ನ ಪೊಲೀಸರು ಸೆರೆ ಹಿಡಿದಿದ್ದಾರೆ…

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನೇಪಾಳದಲ್ಲಿ ಶೃಂಗೇರಿ ಜಗದ್ಗುರುಗಳು.

ವಿಶೇಷ ವರದಿ: ಪ್ರಭಾಕರ ಕಾರಂತ Klive Special Article ಜಗದ್ಗುರು ಶ್ರೀ ವಿಧುಶೇಖರ ಭಾರತೀ...

Eshwara Khandre ಶ್ರಾವ್ಯಾ ಸಾಗರ್ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ಜೀವವೈವಿಧ್ಯ ಪ್ರಶಸ್ತಿ.

Eshwara Khandre ಕರ್ನಾಟಕ ಸರ್ಕಾರದ ಜೀವವೈವಿದ್ಯ ಮಂಡಳಿ ಕೊಡಮಾಡುವ ೨೦೨೫-೨೬ನೇ ಸಾಲಿನ...

Institute of International Finance ಐಐಎಫ್ ಶಿವಮೊಗ್ಗ ಚಾಪ್ಟರ್ ನ ನೂತನ ಪದಾಧಿಕಾರಿಳ ಆಯ್ಕೆ.

Institute of International Finance ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ (IIF)...