Rotary East School ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕೆಂದು ನಗರದ ಪ್ರಖ್ಯಾತ ಮನೋವೈದ್ಯರಾದ ಡಾ. ಕೆ.ಎಸ್. ಪವಿತ್ರ ನುಡಿದರು.
ಅವರು ಇಂದು ಶಿವಮೊಗ್ಗದ ರಾಜೇಂದ್ರನಗರದಲ್ಲಿರುವ ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂರ‍್ಯಾಕ್ಟ್ ಕ್ಲಬ್‌ನವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಭಾವಾಭಿನಯ ಅಥವಾ ನೃತ್ಯಾಭಿನಯದ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯು ಮಾನಸಿಕವಾಗಿ ಸಧೃಡಗೊಳ್ಳಲು ಕಲೆ, ಸಾಹಿತ್ಯ ಸಂಸ್ಕೃತಿಯ ಅರಿವು ಬಹಳ ಮುಖ್ಯವಾಗಿರುತ್ತದೆಂದು ಹಾಗೂ ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಂಭ್ರಮಕ್ಕಾಗಿ ಶ್ರೀ ವಿಜಯ ಸಂಸ್ಥೆ ಆನಂದ, ಆರೋಗ್ಯ ಎನ್ನುವ ವಿಶಿಷ್ಟ ಪ್ರಾತ್ಯಾಕ್ಷಿಕಾ ಮಾಲಿಕೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸುತ್ತಿದ್ದೇವೆಂದು ಕರೆ ನೀಡುತ್ತಾ, ವಿದ್ಯಾರ್ಥಿಗಳ ಮನೋವಿಕಾಸಕ್ಕೆ ನೃತ್ಯ ಯಾವ ರೀತಿ ಸಹಕಾರಿಯಾಗುತ್ತದೆ ಎಂದು ತಿಳಿಸಿರುತ್ತಾರೆ.
ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ (ರಿ.,)ನ ಕಾರ್ಯದರ್ಶಿ ರೊ. ಎಸ್.ಸಿ. ರಾಮಚಂದ್ರ ಇವರು ಮಾತನಾಡುತ್ತಾ, ವೈದ್ಯೋ ನಾರಾಯಣೋ ಹರಿ ಎನ್ನುವ ನಾಣ್ಣುಡಿಯನ್ನು ಉಲ್ಲೇಖಿಸುತ್ತಾ, ಪ್ರಖ್ಯಾತ ಮನೋವೈದ್ಯೆಯಾಗಿದ್ದರೂ ಕಲೆ, ಸಂಸ್ಕೃತಿ, ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಂಡಿರುವ ಡಾ. ಕೆ.ಎಸ್. ಪವಿತ್ರರವರು ಈ ನಾಡಿನ ಸಾಂಸ್ಕೃತಿಕ ರಾಯಭಾರಿಯೆಂದು ಅವರಲ್ಲಿ ಅಡಗಿರುವ ಕಲಾ ಸರಸ್ವತಿಗೆ ಆಡಳಿತ ಮಂಡಳಿ ವತಿಯಿಂದ ಎಷ್ಟು ವಂದಿಸಿದರು ಸಾಲದೆಂದು ಮುಖ್ಯವಾಗಿ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿನಿಯಾಗಿ ರಾಷ್ಟçಮಟ್ಟಕ್ಕೆ ಸಾಂಸ್ಕೃತಿಕ ರಾಯಭಾರಿಯಾಗಿ ಬೆಳೆದಿರುವುದು ಹೆಮ್ಮೆಯ ವಿಷಯವೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಟ್ರಸ್ಟ್ನ ಖಜಾಂಚಿಯಾದ ಶ್ರೀ ವಿಜಯ್ ಕುಮಾರ್ ಇವರು ಮಾತನಾಡುತ್ತಾ, ಕಲೆ ಮತ್ತು ಸಂಸ್ಕೃತಿಯ ಮೈಗೂಡಿಸಿಕೊಳ್ಳುವುದರಿಂದ ಖಿನ್ನತೆ, ಉತ್ತಮ ಆರೋಗ್ಯ ಹಾಗೂ ಸಂಸ್ಕಾರಯುತ ವ್ಯಕ್ತಿಯಾಗಿ ಬೆಳೆಯಲು ಸಹಕಾರಿಯಾಗಿರುತ್ತಾರೆಂದು ತಿಳಿಸಿರುತ್ತಾರೆ.
Rotary East School ಇದೇ ಸಂದರ್ಭದಲ್ಲಿ ನಾಡಿನ ಹೆಸರಾಂತ ಕವಿಗಳು ರಚಿಸಿದ ಕವನಗಳಿಗೆ ತಮ್ಮ ಭಾವಾಭಿನಯದ ಮೂಲಕ ವಿದ್ಯಾರ್ಥಿಗಳ ಮನಸೂರೆಗೊಂಡರು. ಕಾರ್ಯಕ್ರಮದಲ್ಲಿ ಇಂರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷರಾದ ಕು. ಹರ್ಷಿತ್ ಆರ್.ಎಸ್., ಕಾರ್ಯದರ್ಶಿ ಕು. ಗಾನವಿ ಎಂ.ಪಿ., ಪ್ರಾಂಶುಪಾಲರಾದ ಶ್ರೀಯುತ ಸೂರ್ಯನಾರಾಯಣ್ ಆರ್. ಹಾಗೂ ಸಹ ಶಿಕ್ಷಕರುಗಳಾದÀ ಶ್ರೀಯುತ ನರಸಿಂಹಯ್ಯ, ಶ್ರೀಯುತ ಪ್ರಶಾಂತ್ ಬಿ.ಟಿ., ಕು. ರುಕ್ಕಯ್ಯ, ಶ್ರೀಮತಿ ಸುಷ್ಮಾ ಬಿ.ಎಸ್., ಕು. ದಿವ್ಯಾ, ಶ್ರೀಮತಿ ರೂಪ ರಾವ್ ಇವರುಗಳು ಉಪಸ್ಥಿತರಿದ್ದರು.