Wednesday, April 23, 2025
Wednesday, April 23, 2025

Sports News ವಿಕಲಚೇತನರಿಗೆ ಜಿಲ್ಲಾಮಟ್ಟದ ಕ್ರೀಡೆ & ಸಾಂಸ್ಕೃತಿಕ ಸ್ಪರ್ಧೆ

Date:

Sports News 2023 ರ ಡಿಸೆಂಬರ್ 3ರಂದು ನಡೆಸಲಿರುವ ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಪೂರ್ವಭಾವಿಯಾಗಿ ವಿಕಲಚೇತನರಿಗೆ ಜಿಲ್ಲಾ ಮಟ್ಟದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ನ.24ರಂದು ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.

ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವವರ ವಯೋಮಿತಿ 1 ರಿಂದ 10 ವರ್ಷದೊಳಗೆ, 11ರಿಂದ 15 ವರ್ಷದೊಳಗೆ, 16 ರಿಂದ 25 ವರ್ಷದೊಳಗೆ, 26 ರಿಂದ 40 ವರ್ಷದೊಳಗೆ ಮತ್ತು 40 ವರ್ಷ ಮೇಲ್ಪಟ್ಟು. ದೈಹಿಕ ವಿಕಲಚೇತನ ಕ್ರೀಡಾಪಟುಗಳ ಸ್ಪರ್ಧೆಯಲ್ಲಿ ಒಂದು ಕಾಲಿಲ್ಲದ ಕ್ರೀಡಾಪಟುಗಳಿಗೆ ೫೦ಮೀ ಓಟದ ಸ್ಪರ್ಧೆ ಮತ್ತು ಚೆಂಡು ಎಸೆತ, ಎರಡು ಕಾಲಿಲ್ಲದ ಕ್ರೀಡಾಪಟುಗಳಿಗೆ ಸಾಧ ತ್ರಿಚಕ್ರವಾಹನ 100ಮೀ ಓಟದ ಸ್ಪರ್ಧೆ ಮತ್ತು ಚೆಂಡು ಎಸೆತ, ಒಂದು ಕೈ ಮತ್ತು ಎರಡು ಕೈ ಇಲ್ಲದ ಕ್ರೀಡಾಪಟುಗಳಿಗೆ 100 ಮೀಟರ್ ಓಟದ ಸ್ಪರ್ಧೆ ಮತ್ತು ಕೆರೆ ದಡ, ಒಂದು ಕೈ ಮತ್ತು ಒಂದು ಕಾಲು ಇಲ್ಲದ ಕ್ರೀಡಾಪಟುಗಳಿಗೆ 50 ಮೀಟರ್ ನಡಿಗೆ ಸ್ಪರ್ಧೆ ಮತ್ತು ಬಕೆಟ್‌ಗೆ ಚೆಂಡು ಹಾಕುವುದು, ಕುಬ್ಜ ಕ್ರೀಡಾಪಟುಗಳಿಗೆ 100 ಮೀಟರ್ ಓಟ ಮತ್ತು ಚೆಂಡು ಎಸೆತ. ಅಂಧ ವಿಕಲಚೇತನ ಕ್ರೀಡಾಪಡುಗಳ ಸ್ಪರ್ಧೆಯಲ್ಲಿ 5 ರಿಂದ 10ವರ್ಷದವರಿಗೆ ಚೆಂಡು ಎಸೆತ,50 ಮೀಟರ್ ಓಟದ ಸ್ಪರ್ಧೆ ಮತ್ತು 11 ವರ್ಷ ಮೇಲ್ಪಟ್ಟವರಿಗೆ ಶಾಟ್‌ಪುಟ್, 100 ಮೀಟರ್ ಓಟದ ಸ್ಪರ್ಧೆ. ಬುದ್ಧಿಮಾಂದ್ಯ ಕ್ರೀಡಾಪಟುಗಳಿಗೆ ಬಕೆಟ್‌ಗೆ ಚೆಂಡು ಹಾಕುವುದು, 50 ಮೀಟರ್ ಓಟದ ಸ್ಪರ್ಧೆ. ಕಿವುಡ ಮತ್ತು ಮೂಕ ಕ್ರೀಡಾಪಟುಗಳಿಗೆ 50 ಮೀಟರ್ ಓಟದ ಸ್ಪರ್ಧೆ ಆಯೋಜಿಸಲಾಗಿದೆ.

ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ 6 ರಿಂದ 15 ಮತ್ತು 16 ವರ್ಷ ಮೇಲ್ಪಟ್ಟವರಿಗೆ ಎರಡು ವಿಭಾಗಗಳಲ್ಲಿ ಅಂಧರಿಗಾಗಿ ಭಾವಗೀತೆ ಸ್ಪರ್ಧೆ, ದೈಹಿಕ ವಿಕಲಚೇತನರಿಗಾಗಿ ಜಾನಪದ ಗೀತೆ ಸ್ಪರ್ಧೆ ಬುದ್ಧಿಮಾಂದ್ಯರಿಗಾಗಿ ಗುಂಪು ನೃತ್ಯ ಏರ್ಪಡಿಸಲಾಗಿದೆ. ಕಿವುಡ ಮತ್ತು ಮೂಕರಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು 6ರಿಂದ 10 ವರ್ಷದವರಿಗೆ ತರಕಾರಿ ಚಿತ್ರ, 11ರಿಂದ 40 ವರ್ಷದವರಿಗೆ ಪ್ರಕೃತಿ ಮತ್ತು ಪರಿಸರ ಚಿತ್ರ ವಿಷಯವನ್ನು ನೀಡಲಾಗಿದೆ.

ಅಭ್ಯರ್ಥಿಗಳಿಗೆ ಇಲಾಖೆಯಿಂದ ಡ್ರಾಯಿಂಗ್ ಶೀಟ್‌ನ್ನು ಮಾತ್ರ ನೀಡಲಾಗುವುದು. ಚಿತ್ರ ಬಿಡಿಸಲು ಬೇಕಾದ ಪರಿಕರಗಳನ್ನು ಅಭ್ಯರ್ಥಿಗಳೇ ತರತಕ್ಕದು, ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ವಯಸ್ಸು ಮತ್ತು ಶಾಲೆಯ ಹೆಸರನ್ನು ಸ್ಪಷ್ಟವಾಗಿ ಬರೆಯುವುದು. ನಿಮ್ಮ ಆಕೃತಿಯನ್ನು ಕಾಗದದ ಪ್ರಮಾಣಕ್ಕನುಸಾರವಾಗಿ ಅಂದವಾಗಿ ಕಾಣುವಂತೆ ರಚಿಸಿ. ಅಭ್ಯರ್ಥಿಗಳು ಪೆನ್ಸಿಲ್ ಶೇಡ್, ಕ್ರಯಾನ್ಸ್, ವಾಟರ್ ಕಲರ್, ಪೋಸ್ಟರ್ ಕಲರ್ ಯಾವುದಾದರೂ ಮಾಧ್ಯಮವನ್ನು ಬಳಸಬಹುದು. ಅಂದವಾದ ಮತ್ತು ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುವುದು. ಚಿಕ್ಕ ಹಾಗೂ ಅಪೂರ್ಣ ಚಿತ್ರಗಳನ್ನು ಮಾನ್ಯ ಮಾಡಲಾಗುವುದಿಲ್ಲ.

Sports News ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೈಹಿಕ ಶಿಕ್ಷಕರು ಮಂಜಯ್ಯ ಮೊ.ನಂ:7411579167೭೪ ಸಂಗೀತ ಶಿಕ್ಷಕಿ ಮೊ.ನಂ:9845327635 ಮತ್ತು ಚಿತ್ರಕಲಾ ಶಿಕ್ಷಕರು ಮಾದವಮೂರ್ತಿ ಮೊ.ನಂ: 9964179749 ನ್ನು ಸಂಪರ್ಕಿಸುವ0ತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...