Rotary Club Shimoga ವಿಶ್ವದಲ್ಲಿಯೇ ಅತ್ಯಂತ ಇಷ್ಟಪಡುವ ಭಾಷೆ ಕನ್ನಡ. ಅದೂ ಇಂದಿಗೂ ಮತ್ತು ಮುಂದೆಯು ಕನ್ನಡ ಭಾಷೆ ಪ್ರಸ್ತುತ. ಮಾತೃಭಾಷೆ ಯಾವುದಾದರೂ ಸರಿ. ಆದರೆ ನಾಡಿನಲ್ಲಿ ಕನ್ನಡ ಮಾತನಾಡಬೇಕು ಎಂದು ರೇಣುಕಾರಾಧ್ಯ ಅವರು ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಮತ್ತು ವಿಕಾಸರಂಗ ವತಿಯಿಂದ ಆಜಾದ್ ಪ್ರೌಡಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯನ್ನು ಪ್ರತಿಯೊಬ್ಬರೂ ಮನೆಗಳಲ್ಲಿ ಹೆಚ್ಚಾಗಿ ಬಳಸಬೇಕು ಎಂದು ತಿಳಿಸಿದರು.
ಕಾರ್ಯದರ್ಶಿ ರೂಪಾ ಪುಣ್ಯಕೋಟಿ ಮಾತನಾಡಿ, ಆಜಾದ್ ಶಾಲಾ ಮಕ್ಕಳ ಶಿಸ್ತು ಮತ್ತು ಕನ್ನಡ ಪ್ರೀತಿ ತಮ್ಮನ್ನು ಮಂತ್ರ ಮುಗ್ದರನ್ನಾಗಿ ಮಾಡಿದೆ ಎಂದು ಹೇಳಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿಜೇತರ ಹೆಸರು ಪ್ರಬಂದ ಸ್ವರ್ಧೆ ನಿಶತ್ ಪ್ರಥಮ ಆಯಿಶಾ ದ್ವಿತಿಯ, ಬಿಬಿಆಯಿಶಾ ತೃತಿಯ, ಭಾಷಣ ಸ್ವರ್ಧೆ ರುಮಾನ ಖಾನಂ ಪ್ರಥಮ, ಅಕ್ಸಾ ಫಾತೀಮಾ ದ್ವಿತಿಯ, ಕನ್ನಡ ಹಾಡು ರೀಹಾ ಮುಸ್ಕಾನ್ ಪ್ರಥಮ, ಶಿಫಾ ದ್ವಿತಿಯ, ಸಮೂಹ ಗಾಯನ ಹಲೀಮಾ ಸಾದಿಯಾ ತಂಡ ಪ್ರಥಮ, ಮೀಝಾನ್ ತಂಡ ದ್ವಿತಿಯ, ಕವನ ವಾಚನ ಹೀನಾಖಾನಂ, ಹಫೀಝಾ, ಚಿತ್ರಕಲೆ ತಸ್ಮೀಯ ಪ್ರಥಮ, ಮುಝ್ನಬೀನ್ ದ್ವಿತಿಯ, ಸಿದ್ಧೀಖಾ ತೃತೀಯ ಸ್ಥಾನ ಪಡೆದರು.
Rotary Club Shimoga ಭಾಗವಹಿಸಿದ ಎಲ್ಲಾ ಮಕ್ಕಳ ಪ್ರತಿಭೆಗೆ ಮನ ಸೋತು ನಾಗರಾಜ್ ರವರು ನಗದು ಬಹುಮಾನ ಘೋಷಿಸಿ ಪಾವತಿಸಿದರು. ಮಿಸ್ಭಾ ಸಮೀನ್ ಪ್ರಾರ್ಥನೆ, ಶೋಭಾ ರವರ ಸ್ವಾಗತ, ನಿಖತಾ ಅಂಜು ಪ್ರಾಸ್ರಾವಿಕ ನುಡಿ, ಲಕ್ಷ್ಮೀನಾರಾಯಣ್ ವಂದನಾರ್ಪಣೆ ವಾಗೇಶ್ ಅವರು ನಿರೂಪಣೆ ನೆರವೇರಿಸಿದರು.