Thursday, April 24, 2025
Thursday, April 24, 2025

Ramakrishna Vivekananda Ashram ಧರ್ಮ ಗ್ರಂಥಗಳ ಅಧ್ಯಯನವೂ ಇಂದಿನ ಜಂಜಡದ ಬದುಕಿನಲ್ಲಿ ಅತ್ಯುತ್ತಮ ಮಾರ್ಗ- ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ

Date:

Ramakrishna Vivekananda Ashram ರಾಮಕೃಷ್ಣ ವಿವೇಕಾನಂದ ಆಶ್ರಮದ,ತುಮಕೂರು ಶಾಖೆಯ ಅಧ್ಯಕ್ಷರಾದ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ಸತ್ಸಂಗಗಳೂ ಧರ್ಮ ಗ್ರಂಥಗಳ ಅಧ್ಯಯನವೂ ಇಂದಿನ ಜಂಜಡದ ಬದುಕಿನಲ್ಲಿ ಒತ್ತಡವನ್ನು ಹತ್ತಿಕ್ಕಲು ಅತ್ಯುತ್ತಮ ಮಾರ್ಗಗಳೆಂದು ವಿವರಿಸಿದರು.

ಪೂಜ್ಯರು ನಿನ್ನೆ IMA ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಈ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಾ ಹೋರಾಟವಿಲ್ಲದ ಬದುಕು ಕೆಚ್ಚಿನ ಕಿಚ್ಚು ಹಚ್ಚಲಾರದು; ಆರಾಮ ವಲಯದಿಂದ ಹೊರಬಂದು ಸೃಜನಶೀಲತೆಯನ್ನೂ ಸ್ವಾಭಾವಿಕತೆಯನ್ನೂ ಮೈಗೂಡಿಸಿಕೊಳ್ಳಲು ಕರೆ ನೀಡಿದರು.

ಧೃತಿಗೆಡದೆ ಮುನ್ನುಗ್ಗಲು ಸಮಾಜದಲ್ಲಿ ಯಾವುದೇ ಕಾರ್ಯಕ್ಕೂ ಮೊದಲು ಅಪಹಾಸ್ಯ ಕೊಂಕು, ಆನಂತರ ವಿರೋಧ, ಕಟ್ಟೆ
ಕಡೆಯಲ್ಲಿಯೇ ಸ್ವೀಕಾರವನ್ನು ನಾವು ನಿರೀಕ್ಷಿಸಬೇಕಾಗುತ್ತದೆ ಎಂದರು.

ಕಿಕ್ಕಿರಿದು ನೆರೆದಿದ್ದ ಸಭಾಂಗಣದಲ್ಲಿ ,ತಮಗೆ ನೀಡಿದ ಗೌರವಾರ್ಪಣೆ ಸ್ವೀಕರಿಸಿದ ಪೂಜ್ಯರು, ಹಿರಿಯ ತಲೆಮಾರಿನ ವೈದ್ಯರನ್ನು ಕಂಡು ಹರ್ಷ ವ್ಯಕ್ತಪಡಿಸುತ್ತಾ, ಇದೇ ಸನಾತನ ಧರ್ಮದ ದ್ಯೋ
ತಕವೆಂದರು.

Ramakrishna Vivekananda Ashram ಸಮಾರಂಭದ ಅಧ್ಯಕ್ಷತೆ ವಹಿಸಿದ ನೂತನ ಐಎಂಎ ಅಧ್ಯಕ್ಷ ಡಾ. ಸಿ ರಮೇಶ್ ಸ್ವಾಗತ ಕೋರಿದರು. ಉಪಾಧ್ಯಕ್ಷರಾದ ಡಾ. ಕೆ. ಆರ್. ರವೀಶ್ ರವರು I.M.A. ನಡೆದು ಬಂದ ಹಾದಿಯನ್ನು ಪ್ರಸ್ತುತಪಡಿಸಿದರು. ವೇದಿಕೆಯ ಮೇಲೆ ಪೂರ್ವಾಧ್ಯಕ್ಷ ಡಾ. ಅರುಣ್ ,ಹಾಲಿ ಕಾರ್ಯದರ್ಶಿ ಡಾ. ಅರವಿಂದ್, ಖಜಾಂಚಿ ಡಾ. ಶಶಿಧರ್ ಉಪಸ್ಥಿತರಿದ್ದರು. ಡಾ. ಅರವಿಂದ್ ವಂದನಾರ್ಪಣೆ ಮಾಡಿದರು. ಸಮಾರಂಭದ ನಿರ್ವಹಣೆಯನ್ನು ಡಾ. ವಿನಯ ಶ್ರೀನಿವಾಸ್ ಮತ್ತು ಡಾ. ಹಂಸವೇಣಿ ವಹಿಸಿದ್ದರು .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...