Friday, June 26, 2026
Friday, June 26, 2026

Grant Registration ಸಹಾಯ ಧನ ನೋಂದಣಿಗೆ ಅರ್ಜಿ ಆಹ್ವಾನ

Date:

Grant Registration 2023-24ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಕಾರ್ಯಕ್ರಮ, ಎಸ್‍ಎಂಎಎಂ ಯೋಜನೆಯಡಿ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮಗಳಡಿ ಸಹಾಯಧನ ನೊಂದಣಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಆಸಕ್ತ ರೈತರು ನ.16 ರಿಂದ 24ನೇ ತಾರೀಖಿನೊಳಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದಾಗಿರುತ್ತದೆ. ಹನಿ ನೀರಾವರಿ ಕಾರ್ಯಕ್ರಮದಡಿ 5 ಹೆಕ್ಟೇರ್‍ವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ. ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮದಡಿ ಪ್ರಥಮ ಆದ್ಯತೆಯಲ್ಲಿ ಅಡಿಕೆ ದೋಟಿಯನ್ನು ಪರಿಗಣಿಸಲಾಗುವುದು. ತೀರ್ಥಹಳ್ಳಿ ತಾಲ್ಲೂಕಿಗೆ ಲಭ್ಯವಾಗುವ ಅನುದಾನ, ಮೀಸಲಾತಿ ನಿಯಮಾವಳಿ ಮತ್ತು ಯೋಜನೆಯ ಮಾರ್ಗಸೂಚಿಯನ್ವಯ ಜೇಷ್ಠತೆ ಅರ್ಜಿಗಳನ್ನು ಕಾರ್ಯಾದೇಶ ನೀಡುವ ಮುಂದಿನ ಕ್ರಮಗಳಿಗಾಗಿ ಪರಿಗಣಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕುಶಾವತಿಯಲ್ಲಿನ ತೋಟಗಾರಿಕೆ ಇಲಾಖಾ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಹೋಬಳಿವಾರು Grant Registration ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಬಹುದೆಂದು ತೀರ್ಥಹಳ್ಳಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kodachadri Chits Pvt. Ltd ಗ್ರಾಹಕರೇ ಕೊಡಚಾದ್ರಿಚಿಟ್ಸ್ ನ ಹಿಂದಿರುವ ಶಕ್ತಿ- ಪರಶುರಾಮ್

Kodachadri Chits Pvt. Ltd ಕೊಡಚಾದ್ರಿ ಚಿಟ್ಸ್‌ನ ಯಶಸ್ಸಿನ ಹಿಂದಿನ ನಿಜವಾದ...

Rotary Club Shivamogga ಮಲೇರಿಯಾವನ್ನ ವೈಜ್ಞಾನಿಕ ಕ್ರಮಗಳಿಂದ ನಿರ್ಮೂಲನೆ ಮಾಡಲು ಸಾಧ್ಯ. ಈ ಕಾರ್ಯದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅನಿವಾರ್ಯ- ಡಾ.ಗುಡದಪ್ಪ ಕಸಬಿ

Rotary Club Shivamogga "ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಉಲ್ಬಣಗೊಳ್ಳುವುದರಿಂದ ಸಾರ್ವಜನಿಕರಲ್ಲಿ...

Bhadravati Social Welfare Department ಪ್ರೋತ್ಸಾಹಧನ ಪಡೆಯಲು ಆನ್ ಲೈನ್ ಅರ್ಜಿ ಆಹ್ವಾನ. ಭದ್ರಾವತಿ ಸಮಾಜ ಕಲ್ಯಾಣ ಇಲಾಖೆ ಮಾಹಿತಿ.

Bhadravati Social Welfare Department ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ 2025-26ನೇ...