Saturday, October 10, 2026
Saturday, October 10, 2026

Missing Person ತೋಟಕ್ಕೆ ಹೋದ ವೃದ್ಧೆ ನಾಪತ್ತೆ

Date:

Missing Person ಹೊಸನಗರದ ಕರಿಮನೆ ಗ್ರಾ.ಪಂ ವ್ಯಾಪ್ತಿಯ ಸಾದಗಲ್‌ ಗ್ರಾಮದಲ್ಲಿ ಮನೆಯ ಪಕ್ಕದ ತೋಟಕ್ಕೆಂದು ಹೋಗಿದ್ದ ವೃದ್ಧೆ ನಾಪತ್ತೆಯಾಗಿದ್ದಾರೆ. ಚನ್ನಪ್ಪ ಗೌಡ ಅವರ ಪತ್ನಿ ಶಾರದಮ್ಮ (85) ಕಾಣಿಯಾದವರು. ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ತೋಟಕ್ಕೆ ದನಗಳು ಬಂದಿರಬಹುದೆಂದು ನೋಡಿಕೊಂಡು ಬರುವುದಾಗಿ ಹೇಳಿ ಶಾರದಮ್ಮ ಹೋಗಿದ್ದರು. ರಾತ್ರಿಯಾದರೂ ಮನೆಗೆ ಮರಳದಿದ್ದಾಗ ಮನೆಯವರು ತೋಟ, ಗದ್ದೆ, ಹಳ್ಳ, ಕೊಳ್ಳ, ಕಾಡಲ್ಲಿ ಹುಡುಕಾಡಿದ್ದಾರೆ. ಶಾರದಮ್ಮನ ಜೊತೆ ಹೋಗಿದ್ದ ಶ್ವಾನವೂ ಭಾನುವಾರ ಕಾಣಿಸಿರಲಿಲ್ಲ. ಆದರೆ ಸೋಮವಾರ ಬೆಳಗ್ಗೆ ಪ್ರತ್ಯಕ್ಷವಾಗಿದೆ. ಆದರೆ ಶಾರದಮ್ಮನ ಸುಳಿವು ಸಿಗದ ಕಾರಣ Missing Person ಕುಟುಂಬದವರಲ್ಲಿ ಆತಂಕ ಹೆಚ್ಚಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...