ಸೈಬರ್ ವಂಚನೆ ಪ್ರಕರಣ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಸೈಬರ್ ಕಳ್ಳರು ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆಯಿಂದ ಹಣ ದೋಚಲು ಬಳಸುವ ವಿಧಾನವೆಂದರೆ ಸಿಮ್ ಸ್ವಾಪ್. ಸ್ವಿಮ್ ಸ್ವಾಪ್ ಎಂದರೆ ಹ್ಯಾಕರುಗಳು ನಿಮ್ಮ ಸಿಮ್ ಕಾರ್ಡ್ನ ಮೇಲೆ ಸಂಪೂರ್ಣ ನಿಗಾವಹಿಸಿ ನಿಮ್ಮ ಮಾಹಿತಿಯನ್ನು ಕಲೆ ಹಾಕುವುದು…
ಕಸ್ಟಮರ್ ಕೇರ್ ಹೆಸರಿನಲ್ಲಿ ಕರೆ ಮಾಡಿ ನಿಮ್ ಕಾರ್ಡ್ನ ನಂಬರ್ ಪಡೆಯುತ್ತಾರೆ. ನಿಮ್ಮ ಸಿಮ್ ಸಂಖ್ಯೆಯನ್ನು ಹ್ಯಾಕರ್‌ಗಳಿಗೆ ನೀಡಿದ ತಕ್ಷಣ ಅದರ ನಕಲಿ ಸಿಮ್ ಅನ್ನು ಕ್ರಿಯೇಟ್ ಮಾಡುತ್ತಾರೆ.
ಹಾಗೆಯೇ , ನಿಮಗೆ ಸಂದೇಶವೊಂದು ಬರಲಿದ್ದು, ಅದಕ್ಕೆ ನೀವು ಪ್ರತ್ಯುತ್ತರ ನೀಡಬೇಕು ಎನ್ನುತ್ತಾರೆ. ಅದಕ್ಕೆ ನೀವು ಉತ್ತರ ನೀಡುತ್ತಿದ್ದಂತೆ, ನಿಮ್ಮ ಸಿಮ್ ಸ್ವಾಪ್ ಮಾಡಲಾಗಿರುತ್ತದೆ…
ನಂತರದಲ್ಲಿ ನಿಮ್ಮ ಬ್ಯಾಂಕ್ ಡೀಟೇಲ್ಸ್ಗಳನ್ನ ಪಡೆಯುತ್ತಾರೆ… ಮೂಲಕ ನಿಮ್ಮ ಬ್ಯಾಂಕ್ ಖಾತೆಯ ಹಣವನ್ನ ಹ್ಯಾಕರ್ಸ್ ಗಳು ಲಪಟಾಯಿಸಿಕೊಳ್ಳುತ್ತಾರೆ…
ಇಂತಹ ಕರೆಗಳು ಬಂದಾಗ ನೀವು ಏನೂ ಮಾಡಬೇಕು ಎಂದರೆ….?!
ನಿಮ್ಮ ಬ್ಯಾಂಕ್ ಖಾತೆಯ ಪಾಸ್ವರ್ಡ್ ಗಳನ್ನು ಬದಲಾಯಿಸಿ…
ನಿಮ್ಮ ಬ್ಯಾಂಕಿಂಗ್ ವೈವಾಟುಗಳಿಗೆ ನಿಯಮಿತ ಮತ್ತು ಇ-ಮೇಲ್ ಎಚ್ಚರಿಕೆಗಳನ್ನೂ ನೊಂದಾಯಿಸಿಕೊಳ್ಳಿ….
ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡ..
SIM Swap ಅಪರಿಚಿತ ಸಂಖ್ಯೆಗಳಿಂದ ಯಾವುದೇ ಅನುಮಾನಸ್ಪದ ಸಂದೇಶಗಳು ಅಥವಾ ಕರೆಗಳ ಬಗ್ಗೆ ಎಚ್ಚರಿಕೆವಹಿಸಿ…