Karnataka Forest Department ಸೊರಬ ತಾಲೂಕಿನ ಉಳವಿ ಗ್ರಾಮದ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಕಾಡುಕೋಣದ ಮಾಂಸವನ್ನು ಆರೋಪಿ ಸಮೇತ ಮಂಗಳವಾರ ಸೊರಬ ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಉಳವಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡುಕೋಣವನ್ನು ಬೇಟೆಯಾಡಿ ಅಕ್ರಮವಾಗಿ ಅದರ ಮಾಂಸವನ್ನು ಸಂಗ್ರಹಿಸಿ ಇಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.
ಅರಣ್ಯಾಧಿಕಾರಿಗಳ ತಂಡ ಉಳವಿ ಗ್ರಾಮದ ವಿವಿಧಡೆ ಸುಮಾರು 23 ಕೆ.ಜಿ. ಕಾಡು ಕೋಣದ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸದಂತೆ ಉಳವಿಯ ಇಬ್ರಾಹಿಂ ಸಾಬ್ ಮುನೀರ್ ಸಾಬ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳಾದ ತಸ್ವಿರ್ ಆಹ್ಮದ್ ಸೈಫುಲ್ಲಾ, ನವೀದ್ ಶೇಖ್ ಅಹ್ಮದ್, ಫರೂಕ್ ಇಸ್ಮಾಯಿಲ್ ಪತ್ತೆಗೆ ಬಲೆ ಬೀಸಲಾಗಿದೆ.
Karnataka Forest Department ಸಾಗರದ ಡಿಸಿಎಫ್ ಸಂತೋಷ ಕೆಂಚಪ್ಪನವರ ಹಾಗೂ ಸೊರಬ ಎಸಿಎಫ್ ಸಿ.ಕೆ. ಯೋಗೀಶ್ ಅವರ ಮಾರ್ಗದರ್ಶನದಲ್ಲಿ ಸೊರಬ ವಲಯದ ವಲಯ ಅರಣ್ಯಾಧಿಕಾರಿ ಜಾವೇದ್ ಭಾಷಾ ಅಂಗಡಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಉಪ ವಲಯಾರಣ್ಯಧಿಕಾರಿಗಳಾದ ಮುತ್ತಣ್ಣ, ರಾಮಪ್ಪ, ಮೋಹನ್, ಯೋಗರಾಜ್, ಪರಶುರಾಮ್, ಶರಣಪ್ಪ ಹಾಗೂ ಅರಣ್ಯ ರಕ್ಷಕರಾದ ಮಂಜು, ದೇವರಾಜ್, ಕಸ್ತೂರಮ್ಮ, ಆನಂದ್, ಹರಿ, ಅಶೋಕ್ ಪಾಲ್ಗೊಂಡಿದ್ದರು.