Ukraine War ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಯುದ್ಧದಲ್ಲಿ ಭಾಗಿಯಾಗಿರುವುದು ಗಂಭೀರ ಅಪಾಯವನ್ನು ಸೃಷ್ಟಿಸಿದೆ ಎಂದು ರಶ್ಯ ಮತ್ತು ಚೀನಾ ಎಚ್ಚರಿಕೆ ನೀಡಿವೆ.
ಚೀನಾದ ಮಿಲಿಟರಿ ರಾಜತಾಂತ್ರಿಕತೆಯ ಅತೀ ದೊಡ್ಡ ವಾರ್ಷಿಕ ಪ್ರದರ್ಶನ ‘ದಿ ಬೀಜಿಂಗ್ ಕ್ಸಿಯಾಂಗ್ಶಾನ್ ಫೋರಂ’ನ ಸಭೆಯಲ್ಲಿ ಮಾತನಾಡಿದ ರಶ್ಯದ ರಕ್ಷಣಾ ಸಚಿವ ಸೆರ್ಗೆಯ್ ಶೊಯಿಗು, ಉಕ್ರೇನ್ ಯುದ್ಧದಲ್ಲಿ ಶಾಮೀಲಾಗುವುದು ಭಾರೀ ಅಪಾಯ ಸೃಷ್ಟಿಸಿದೆ ಎಂದು ಪಾಶ್ಚಿಮಾತ್ಯ ದೇಶಗಳಿಗೆ ಎಚ್ಚರಿಕೆ ನೀಡಿದರು.
ರಶ್ಯ-ಉಕ್ರೇನ್ ಸಂಘರ್ಷವನ್ನು ನಿರಂತರ ಉಲ್ಬಣಗೊಳಿಸುವ ಪಾಶ್ಚಿಮಾತ್ಯರ ಕೃತ್ಯವು, ಪರಮಾಣು ಶಕ್ತಿಗಳ ನಡುವಿನ ನೇರ ಮಿಲಿಟರಿ ಸಂಘರ್ಷದ ಅಪಾಯವೊಡ್ಡಿದೆ ಮತ್ತು ಇದು ದುರಂತ ಪರಿಣಾಮವನ್ನು ಹೊಂದಿದೆ’ ಎಂದು ಹೇಳಿದರು.
Ukraine War ಚೀನಾವು ಅಮೆರಿಕದ ಜತೆಗಿನ ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸಲು ಬಯಸುತ್ತದೆ. ರಶ್ಯದ ಜತೆಗಿನ ಕಾರ್ಯತಂತ್ರದ ಸಹಕಾರ ಮತ್ತು ಸಮನ್ವಯವನ್ನು ಗಾಢವಾಗಿಸುವ ಜತೆಗೆ, ಪರಸ್ಪರ ಗೌರವ, ಶಾಂತಿಯುತ ಸಹಬಾಳ್ವೆ ಮತ್ತು ಇಬ್ಬರಿಗೂ ಪ್ರಯೋಜನವಾಗುವ ಸಹಕಾರದ ಆಧಾರದ ಮೇಲೆ ಅಮೆರಿಕದ ಜತೆಗಿನ ಮಿಲಿಟರಿ ಸಂಬಂಧವನ್ನು ಅಭಿವೃದ್ಧಿಪಡಿಸಲು ಸಿದ್ಧರಿದ್ದೇವೆ’ ಎಂದು ಝಾಂಗ್ ಯೂಕ್ಸಿಯಾ ಹೇಳಿದರು.