Karnataka University ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಚಿನ್ನದ ಪದಕ ನೀಡಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ದತ್ತಿ ನಿಧಿಯ ಠೇವಣಿ ನೀಡಲಾಗಿದೆ ಎಂದು ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸಕ್ತ ಸಾಲಿನಿಂದ ಚಿನ್ನದ ಪದಕ ಸ್ಥಾಪಿಸಲಾಗಿದ್ದು, ಕವಿವಿ 73ನೇ ಘಟಿಕೋತ್ಸವದಲ್ಲಿ ಈ ಚಿನ್ನದ ಪದಕ ಪ್ರದಾನ ನೆರವೇರಲಿದೆ. ಉಪಮುಖ್ಯಮಂತ್ರಿ ಆಗಿರುವ ಡಿ.ಕೆ.ಶಿವಕುಮಾರ್ ಅವರ ಆಸಕ್ತಿ, ಇಚ್ಛೆಯ ಅನುಸಾರವೇ ಅವರೇ ತಮ್ಮ ಹೆಸರಿನಲ್ಲಿ ಈ ಚಿನ್ನದ ಪದಕಕ್ಕಾ ಠೇವಣಿ ಇಟ್ಟಿದ್ದಾರೆ,” ಎಂದರು.
Karnataka University 173ನೇ ಘಟಿಕೋತ್ಸವದಲ್ಲಿ ಸಿಂದಗಿ ತಾಲೂಕಿನ ಅಲಮೇಲಾ ದಾದಾಗೌಡ ಪಾಟೀಲ ಅವರಿಗೆ ಈ ಪದಕವನ್ನು ಪ್ರದಾನ ಮಾಡಲಾಗುವುದು. ಶಿಕ್ಷಣ ಪ್ರೇಮಿಯೂ ಆಗಿರುವ ಡಿ.ಕೆ.ಶಿವಕುಮಾರ ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಈ ಸುವರ್ಣ ಪದಕವನ್ನು ಇಟ್ಟಿದ್ದಾರೆ, ಎಂದರು.