Sri Ramasena ಹಿಂದೂ, ಮುಸ್ಲೀಂ ಭಾವೈಕ್ಯತಾ ಕೇಂದ್ರವಾಗಿರುವ ಬಾಬಾಬುಡನ್‌ಗಿರಿ ಪ್ರದೇಶದಲ್ಲಿ ಶ್ರೀರಾಮಸೇನೆ ಮುಖಂಡರು ಪ್ರಚೋದನಾ ಕೃತ್ಯಗಳನ್ನು ನಡೆಸಲು ಮುಂದಾಗುತ್ತಿರುವುದಕ್ಕೆ ಜಿಲ್ಲಾ ಹಜರಲ್ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಜಂಶೀದ್‌ಖಾನ್ ಖಂಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ದರ್ಗಾದಲ್ಲಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಅಧ್ಯಕ್ಷತೆಯಲ್ಲಿ ಸಾಧು, ಸಂತರ ಸಮ್ಮುಖದಲ್ಲಿ ಧಾರ್ಮಿಕ ಸಭೆ, ಹೋಮ-ಹವನ, ಧರ್ಮಸಭೆ ಹಾಗೂ ದತ್ತಮಾಲೆ ಅಭಿಯಾನವನ್ನು ನಡೆಸುವುದಾಗಿ ಜಿಲ್ಲಾಡಳಿತ ಅನುಮತಿ ನೀಡಿದ್ದು ಇದಕ್ಕೆ ಜಿಲ್ಲಾಡಳಿತ ಅವಕಾಶ ನೀಡಬಾರದು ಎಂದಿದ್ದಾರೆ.
1989ಕ್ಕಿಂತ ಹಿಂದೆ ಇದ್ದಂತಹ ಯಥಾಸ್ಥಿತಿಯನ್ನು ತಪ್ಪದೇ ಕಾಪಾಡಿಕೊಂಡು ಬರಬೇಕೆಂಬ ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಕಾನೂನುಗಳನ್ನು ಉಲ್ಲಂಘಿಸಿ ದತ್ತಮಾಲಾ ಅಭಿಯಾನ ಹೆಸರಿನಲ್ಲಿ ಶ್ರೀರಾಮಸೇನೆ ನಡೆಸಲು ಉದ್ದೇಶಿಸಿರುವ ಚಟುವಟಿಕೆಗಳನ್ನು ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಅದಲ್ಲದೇ ಗೋರಿಗಳನ್ನು ತೆರವು, ಇಸ್ಲಾಂ ಆಚರಣೆ ನಿಲ್ಲಿಸಬೇಕು ಎಮದು ಕೋಮುಸೌಹಾರ್ದತೆ ಕೆಡಿಸುವಂತಹ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಸೂಕ್ತವಲ್ಲ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಹಿಂದೆ ಮುಸ್ಲೀಂ ಸಂಘಟನೆಗಳ ಒಕ್ಕೂಟ ಡಿಸಿಗೆ ಮನವಿ ಸಲ್ಲಿಸಿ ದತ್ತಜಯಂತಿ, ಉರುಸ್ ಕಾರ್ಯಕ್ರಮಗಳನ್ನು ನಡೆಸಲು ತಾತ್ಕಾಲಿಕ ವ್ಯವಸ್ಥಾಪನ ಸಮಿತಿಯನ್ನು ರಚಿಸಲಾಗಿದೆ ಎಂದಿದ್ದಾರೆ.
Sri Ramasena ಆದರೆ ಇದನ್ನು ಹೊರತುಪಡಿಸಿ ಬೇರೆ ಸಂಘಟನೆಗಳಿಗೆ ಯಾವುದೇ ರೀತಿಯ ಧಾರ್ಮಿಕ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ. ಕೋಮುಸೌಹಾರ್ದತೆಗೆ ಭಂಗ ಉಂಟು ಮಾಡುವಂತಹ ಕಾರ್ಯಕ್ರಮಗಳಿಗೆ ಜಿಲ್ಲಾಡಳಿ ತ ಅವಕಾಶ ನೀಡಬಾರದು. ಎಲ್ಲಾ ಧರ್ಮ ಭಕ್ತರು, ಪ್ರವಾಸಿಗರಂತೆ ಅವಕಾಶ ಕಲ್ಪಿಸಿಕೊಡಬೇಕು. ಇದನ್ನು ಹೊರ ತುಪಡಿಸಿ ಬೇರೆ ಸಂಘಟನೆಗಳಿಗೆ ಅವಕಾಶ ನೀಡಿದರೆ ಪ್ರತಿಭಟನೆ ಮೂಲಕ ಎಚ್ಚರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.