Karnikotsava ರಾಜ್ಯದ ಐತಿಹಾಸಿಕ ಶ್ರೀ ಕ್ಷೇತ್ರ ದೇವರಗುಡ್ಡದಲ್ಲಿ ದಸರಾ ಹಬ್ಬದ ವೇಳೆ ನಡೆಯುವ ಕಾರ್ಣಿಕೋತ್ಸವದಲ್ಲಿ ನುಡಿಯುವ ಗೊರವಪ್ಪ “ಮುಕ್ಕೋಟಿ ಚೆಲ್ಲೀತಲೇ ಕಲ್ಯಾಣ ಕಟ್ಟೀತಲೇ ಪರಾಕ್” ಎಂದು ಕಾರ್ಣಿಕ ನುಡಿದಿದ್ದಾರೆ
ರಾಣೆ ಬೆನ್ನೂರು ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಮಾಲತೇಶ ಸ್ವಾಮಿ ಕಾರ್ಣಿಕೋತ್ಸವ ಸೋಮವಾರ ನಡೆದಿದ್ದು, ’ ಮುಕ್ಕೋಟಿ ಚಲ್ಲಿತಲೆ ಕಲ್ಯಾಣ ಕಟ್ಟಿತಲೆ ಪರಾಕ್ ’ ಎಂದು ಗೊರವಪ್ಪ ವರ್ಷದ ಐತಿಹಾಸಿಕ ಕಾರ್ಣಿಕ ಭವಿಷ್ಯವಾಣಿ ನುಡಿದು ಬಿಲ್ಲಿನಿಂದ ದುಮುಕಿದ್ದಾರೆ. ಗೊರವಯ್ಯ ನಾಗಪ್ಪಜ್ಜ ಆಯುಧ ಪೂಜೆ ದಿನದಂದು ಈ ವರ್ಷದ ಭವಿಷ್ಯವಾಣಿ ನುಡಿದಿದ್ದಾರೆ.
ಡೆಂಕಣಮರಡಿಯಲ್ಲಿ ಕಾರ್ಣಿಕ ನುಡಿ ಆಲಿಸಲು ಸುಮಾರು 30 ಸಾವಿರಕ್ಕೂ ಭಕ್ತರು ನೆರೆದಿದ್ದರು. ಮಾಲತೇಶ ಸ್ವಾಮಿಯೇ ಗೊರವಯ್ಯನಿಂದ ವರ್ಷದ ಭವಿಷ್ಯ ತಿಳಿಸುತ್ತಾನೆಂದು ಉತ್ತರ ಕರ್ನಾಟಕದ ಸಾವಿರಾರು ಭಕ್ತರು ನಂಬುತ್ತಾರೆ ಇನ್ನು ಕಾರ್ಣಿಕೋತ್ಸವ ಕೇಳಲು ರಾಜ್ಯದ ವಿವಿಧಡೆಯಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು.
ಗೊರವಯ್ಯ ನಾಗಪ್ಪಜ್ಜ ಅವರು ನುಡಿದಿರುವ ಪ್ರಸಕ್ತ ವರ್ಷದ ಭವಿಷ್ಯವಾಣಿಯ ವಿಶ್ಲೇಷಣೆ ಮಾಡಿದ ಪ್ರಧಾನ ಅರ್ಚಕರಾದ ಅರ್ಚಕ ಸಂತೋಷಭಟ್ಟ ಗೂರುಜಿಯಿಂದ ವಿಶ್ಲೇಷಣೆ ಮಾಡಲಿದ್ದಾರೆ.ಕಾರ್ಣಿಕ ದೈವವಾಣಿಯನ್ನು ರಾಜಕೀಯ, ಕೃಷಿ ಹಾಗೂ ಆರ್ಥಿಕ ಬೆಳವಣಿಗೆಗೆ ಸಂಬಂಧಪಟ್ಟಂತೆ ಒಂದು ವರ್ಷದ ಭವಿಷ್ಯವೆಂದೇ ಉತ್ತರ ಕರ್ನಾಟಕದ ಕೋಟ್ಯಾಂತರ ಮಂದಿ ನಂಬುತ್ತಾರೆ.
ಪ್ರಧಾನ ಅರ್ಚಕ ಸಂತೋಷಭಟ್ಟ ಪ್ರಸಕ್ತ ವರ್ಷದ ಭವಿಷ್ಯವಾಣಿಯ ವಿಶ್ಲೇಷಣೆ ಮಾಡಿದ್ದಾರೆ. ಮುಕ್ಕೋಟಿ ಚಲ್ಲಿತಲೆ ಕಲ್ಯಾಣ ಕಟ್ಟಿತಲೆ ಅಂದರೆ, ಮುಕ್ಕೋಟಿ ರೈತರು ನೀರಿಗಾಗಿ ಹಣ ಚಲ್ಲಿದ್ದಾರೆ. ಮಳೆ ಬೆಳೆಯಲ್ಲಿದೆ ನಷ್ಟವಾಗುವ ಸಾಧ್ಯತೆ ಇದೆ. ರಾಜ್ಯಕ್ಕೆ ವರುಣನ ಅವಕೃಪೆಯಿಂದಾಗಿ ಬೀಕರ ಬರಗಾಲ ಎದುರಾಗಬಹುದು ಎಂದು ವಿಶ್ಲೇಷಣೆ ಮಾಡಿದ್ದಾರೆ.
Karnikotsava ಈ ಭವಿಷ್ಯವನ್ನು ರಾಜಕೀಯವಾಗಿ ವಿಶ್ಲೇಷಣೆ ಮಾಡಿದರೆ, ಮುಕ್ಕೋಟಿ ಮತದಾರರ ಮತದ ಆಶೀರ್ವಾದದಿಂದ ರಾಜ್ಯದಲ್ಲಿ ಒಮ್ಮತದ ಸರ್ಕಾರ ರಚನೆಯಾಗಿದೆ. ಒಂದು ಹೆಣ್ಣಿನ ಹಸ್ತಕ್ಷೇಪದಿಂದ ಸರ್ಕಾರ ಏರುಪೇರಾಗುವ ಸಂಭವವಿದೆ. ರಾಜ್ಯದಲ್ಲಿ ಸರ್ಕಾರವು ಅದಲು ಬದಲಾಗಬಹುದು. ಕಲ್ಯಾಣಿ ಅಂದರೆ ಕಮಲ ಅಂತಾ ಹೀಗಾಗಿ ಕಮಲ ಅರಳುತ್ತದೆ.