Tuesday, August 25, 2026
Tuesday, August 25, 2026

Indian Space Research Organisation ಗಗನ್ ಯಾನ್ ಮಿಷನ್ ಪರೀಕ್ಷಾ ಉಡಾವಣೆ ಯಶಸ್ವಿ: ಭಾರತದ ವಿಜ್ಞಾನಿಗಳ ಹೆಮ್ಮೆಯ ಸಾಧನೆ

Date:

Indian Space Research Organisation ಶ್ರೀಹರಿಕೋಟ (ಆಂಧ್ರಪ್ರದೇಶ) ಆರಂಭದಲ್ಲಿ ಕಂಡುಬಂದ ತೊಂದರೆಗಳನ್ನು ಸಮರ್ಥವಾಗಿ ನಿವಾರಿಸಿದ ಇಸ್ರೋ, ಮಾನವ ಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ಕೈಗೊಳ್ಳುವ ಸರಣಿ ಪರೀಕ್ಷೆಗಳ ಪೈಕಿ ಮೊದಲ ಪರೀಕ್ಷಾ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿತು.

ಇತ್ತೀಚೆಗಷ್ಟೆ ಚಂದ್ರಯಾನ-3ರ ಯಶಸ್ವಿನಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆ ದಾಖಲಿಸಿದ್ದ ಭಾರತವು ಮತ್ತೊಂದು ‘ವಿಕ್ರಮ’ದತ್ತ ಮುನ್ನಡೆದಿರುವುದನ್ನು ಪರೀಕ್ಷಾ ಉಡಾವಣೆ ಸಾರಿದಂತಾಗಿದೆ.

ರಾಕೆಟ್‌ನಿಂದ ಬೇರ್ಪಟ್ಟ ಕ್ರೂ ಮಾಡ್ಯೂಲ್ ಬೀಳಲಾರಂಭಿಸಿ, ಅದಕ್ಕೆ ಅಳವಡಿಸಿದ್ದ ಪ್ಯಾರಾಚೂಟ್‌ಗಳು ತೆರೆದುಕೊಳ್ಳುತ್ತಿದ್ದಂತೆಯೇ, ಇತ್ತ ನಿಯಂತ್ರಣ ಕೇಂದ್ರದಲ್ಲಿದ್ದ ವಿಜ್ಞಾನಿಗಳು ಹಾಗೂ ಇತರ ತಾಂತ್ರಿಕ ಸಿಬ್ಬಂದಿಯ ಹರ್ಷೋದ್ಗಾರಕ್ಕೆ ಪಾರವೇ ಇರಲಿಲ್ಲ.

ಗಗನಯಾನಿಗಳು ಪಯಣಿಸುವ ಕೋಶ’ವನ್ನು (ಕ್ರೂ ಮಾಡ್ಯೂಲ್) ಹೊತ್ತ ರಾಕೆಟ್ (ಜಿಎಸ್‌ಎಲ್‌ವಿ) ದಟ್ಟ ಹೊಗೆಯನ್ನು ಉಗುಳುತ್ತಾರಭಸದಿಂದ ನಭಕ್ಕೆ ಚಿಮ್ಮಿತು. 17 ಕಿ.ಮೀ.ನಷ್ಟು ಎತ್ತರ ತಲುಪಿದ್ದ ರಾಕೆಟ್‌ನಿಂದ ಪ್ರತ್ಯೇಕಗೊಂಡ ‘ಕ್ರೂ ಮಾಡ್ಯೂಲ್, ಕರತಾಡನವೂ ಮುಗಿಲುಮುಟ್ಟಿತ್ತು. ಬಂಗಾಳ ಕೊಲ್ಲಿಯಲ್ಲಿ ಪೂರ್ವ ನಿರ್ಧರಿತ ಸ್ಥಳದಲ್ಲಿ ಕರಾರುವಾಕ್ಕಾಗಿ ಇಳಿಯುವ ಮೂಲಕ ಇಸ್ರೋವಿಜ್ಞಾನಿಗಳ ಕುಶಾಗ್ರಮತಿ ಪ್ರಯತ್ನಗಳಿಗೆ ಸಾಕ್ಷಿಯಾಯಿತು.

Indian Space Research Organisation ಮೊದಲ ಪರೀಕ್ಷಾ ಉಡಾವಣೆಯು ದೇಶದ ಮೊದಲ ಮಾನವ ಸಹಿತ ಬಾಹ್ಯಾಕಾಶ ಸಾಧಿಸುವ ನಿಟ್ಟಿನಲ್ಲಿ ಇಟ್ಟ ಪ್ರಮುಖ ಹೆಜ್ಜೆಯಾಗಿದೆ. ಇಸ್ರೋ ವಿಜ್ಞಾನಿಗಳಿಗೆ ಶುಭಾಶಯಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...