Israel War ಯುದ್ಧಪೀಡಿತ ಗಾಜಾಗೆ ಜಗತ್ತಿನಾದ್ಯಂತ ನೆರವಿನ ಮಹಾಪೂರ ಹರಿದು ಬರುತ್ತಿದ್ದು, ಇಂದು ಭಾರತವು ಮಾನವೀಯ ಆಧಾರದ ಮೇಲೆ ವೈದ್ಯಕೀಯ ಅಗತ್ಯಗಳು ಮತ್ತು ವಿಪತ್ತು ಪರಿಹಾರ ವಸ್ತುಗಳನ್ನು ಕಳುಹಿಸಿಕೊಟ್ಟಿದೆ.
ಇದಕ್ಕೆ ಇಸ್ರೇಲ್ ಹಮಾಸ್ ಉಗ್ರರರ ವಿರುದ್ಧ ಸಮರ ಸಾರಿದ್ದು, ಗಾಜಾ ಒಳಗೆ ನುಗ್ಗಿ ಧ್ವಂಸ ಮಾಡುತ್ತಿದೆ. ಯುದ್ಧದ ಪರಿಣಾಮ ಲಕ್ಷಾಂತರ ನಾಗರಿಕರು ನಿರ್ಗತಿಕರಾಗಿದ್ದು, ತನ್ನ ಮಿತ್ರ ಅಮೆರಿಕದ ಮನವಿ ಮೇರೆಗೆ ಅಲ್ಲಿನ ಜನರಿಗೆ ನೆರವು ಒದಗಿಸಲು ಇಸ್ರೇಲ್ ಒಪ್ಪಿಕೊಂಡಿದೆ.
Israel War ಅ. 7ರಂದು ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ನ ಹಮಾಸ್ ಉಗ್ರರು ಗಾಜಾದಿಂದ 5 ಸಾವಿರ ರಾಕೆಟ್ಗಳ ಮೂಲಕ ದಾಳಿ ಮಾಡಿ ಇಸ್ರೇಲ್ನಲ್ಲಿ ಮಾರಣಹೋಮ ಸೃಷ್ಟಿಸಿದರು.