Shivamogga Narayana Multi Speciality Hospital ಹೃದಯ ರಕ್ತನಾಳ ಛಿದ್ರಗೊಳ್ಳುವಿಕೆಯಂತಹ ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದರೂ ಹೀಗೆ ಶಿವಮೊಗ್ಗದ ನಾರಾಯಣ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆಯ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವೈದ್ಯರು,ಹೈ ರಿಸ್ಕ್ ಶಸ್ತ್ರ ಚಿಕಿತ್ಸೆ ನಮ್ಮ ಆಸ್ಪತ್ರೆಯ ತಂಡ ಸಿದ್ಧವಾಯಿತು. ಶಿರಸಿಯ 55 ವರ್ಷದ ಮಹಿಳೆಯೊಬ್ಬರು ಎದೆ ನೋವಿನಿಂದಾಗಿ ಆಸ್ಪತ್ರೆಗೆ ಬಂದಿದ್ದರು. ಅವರನ್ನು ತಪಾಸಣೆಗೆ ಒಳಪಡಿಸಿದಾಗ ಅತ್ಯಂತ ಅಪಾಯಕಾರಿಯಾದ ಹೃದಯ ತೊಂದರೆ ಕಂಡು ಬಂದಿದೆ. ಹೃದಯದ ರಕ್ತನಾಳ ಛಿದ್ರಗೊಂಡಿತ್ತು. ಹೀಗೆ ಹೃದಯ ಹರಿದ ತೊಂದರೆಗಳು ತುಂಬಾ ವಿರಳ. ವರ್ಷಕ್ಕೆ ಒಂದೋ ಎರಡೋ ಇರುತ್ತವೆ ಅಷ್ಟೇ. ಈ ರೋಗಿ 30 ನಿಮಿಷ ಬದುಕಲೂ ಕಷ್ಟವಾಗುತ್ತದೆ. ಆದರೆ ಸರಿಯಾದ ಸಮಯಕ್ಕೆ ಅವರು ನಮ್ಮ ಆಸ್ಪತ್ರೆಗೆ ಬಂದರು ಎಂದು ತಿಳಿಸಿದರು.
Shivamogga Narayana Multi Speciality Hospital ಕೊನೆಗೆ ಆಸ್ಪತ್ರೆಯ ವೈದ್ಯರೆಲ್ಲ ಸೇರಿ ಸತತ 12 ಗಂಟೆಗಳ ದೀರ್ಘಕಾಲದ ಶಸ್ತ್ರ ಚಿಕಿತ್ಸೆ ನಡೆಸಿದರು. ನಾಲ್ಕು ದಿನ ಕೃತಕ ಉಸಿರಾಟ ನೀಡಲಾಗಿತ್ತು. ಇದು ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ವೈದ್ಯರ ಸಾಹಸದ ಚಿಕಿತ್ಸೆ. ಇದುವರೆಗೆ ಇಂತಹ ಅಪರೂಪದ ಎಂಟು ಪ್ರಕರಣಗಳು ನಮ್ಮ ಆಸ್ಪತ್ರೆಗೆ ಬಂದಿವೆ. ಅದರಲ್ಲಿ ಮೂವರನ್ನು ಉಳಿಸಲು ಆಗಲಿಲ್ಲ. ಇನ್ನು ಐವರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಜ್ಞ ವೈದ್ಯರಾದ ಬಾಲಸುಬ್ರಮಣ್ಯ ಅವರು ತಿಳಿಸಿದರು.