Wednesday, September 16, 2026
Wednesday, September 16, 2026

Shimoga Institute of Medical Sciences ಕಿವಿ ಮತ್ತು ಮೂಗಿನ ಶಸ್ತ್ರಚಿಕಿತ್ಸೆಗೆ ಟೆಂಪೊರೆಲ್ ಡಿಸೆಕ್ಷನ್ ಹಾಗೂ ಎಫ್ಇಎಸ್ಎಸ್ ಉಪಕರಣಗಳು ಸಹಕಾರಿ- ಡಾ.ಗಂಗಾಧರ್

Date:

Shimoga Institute of Medical Sciences ಕಿವಿ, ಮೂಗು ಮತ್ತು ಗಂಟಲು ವೈದ್ಯರ ಅಧಿಕೃತ ಶಾಖೆಯಾದ ಮಲ್ನಾಡ್ ಎಒಐ ವತಿಯಿಂದ ಕಿವಿ.ಮೂಗು ಮತ್ತು ಗಂಟಲು ಕ್ಷೇತ್ರದಲ್ಲಿ ಶೈಕ್ಷಣಿಕವಾಗಿ ಕೊಡುಗೆ ನೀಡುವ ಸಲುವಾಗಿ ರೂ.15 ಲಕ್ಷ ವೆಚ್ಚದ ಟೆಂಪೊರಲ್ ಬೋನ್ ಡಿಸೆಕ್ಷನ್ ಯುನಿಟ್ ಮತ್ತು ಎಫ್‍ಇಎಸ್‍ಎಸ್ ಕ್ಯಾಡವೆರಿಕ್ ಡೆಸೆಕ್ಷನ್ ಯುನಿಟ್‍ಗಳನ್ನು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಇಎನ್‍ಟಿ ವಿಭಾಗಕ್ಕೆ ಕೊಡುಗೆಯಾಗಿ ಇಂದು ನೀಡಲಾಯಿತು.

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನರ‍್ದೇಶಕರಾದ ಡಾ.ವಿ.ವಿರೂಪಾಕ್ಷಪ್ಪನವರು ಮಲ್ನಾಡ್ ಎಒಐ ಶಾಖೆಯಿಂದ ಸ್ವೀಕರಿಸಲಾದ ಉಪಕರಣಗಳಿಗೆ ಚಾಲನೆ ನೀಡಿದರು.

ಈ ವೇಳೆ ಡಾ.ಗಂಗಾಧರ್ ಮಾತನಾಡಿ, 2015 ರಲ್ಲಿ ಪ್ರಾರಂಭವಾದ ಮಲ್ನಾಡ್ ಎಒಐ ಶಾಖೆ ಲೈವ್ ರ‍್ಜರಿ ರ‍್ಕ್‍ಶಾಪ್, ಸಿಎಂಇ ಗಳು ಸೇರಿದಂತೆ ಅನೇಕ ಶೈಕ್ಷಣಿಕ ಕರ‍್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಈ ಉಪಕರಣಗಳು ಕಿವಿ ಮತ್ತು ಮೂಗಿನ ಶಸ್ತ್ರಚಿಕಿತ್ಸೆಗಳನ್ನು ಅಭ್ಯಸಿಸಲು ಅತ್ಯಂತ ಪ್ರಯೋಜನಕಾರಿಯಾಗಿದ್ದು, ಇಎನ್‍ಟಿ ವಿಭಾಗದ ಸ್ನಾತಕೋತ್ತರ ವಿದ್ಯರ‍್ಥಿಗಳಿಗೆ ಮತ್ತು ಕಿರಿಯ ಇಎನ್‍ಟಿ ತಜ್ಞರಿಗೆ ಶಸ್ತ್ರಚಿಕಿತ್ಸೆಯಲ್ಲಿ ನೈಪುಣ್ಯತೆ ಪಡೆಯಲು ಉಪಯೋಗವಾಗುತ್ತದೆ ಎಂದರು.

Shimoga Institute of Medical Sciences ಕಾರ‍್ಯಕ್ರಮದಲ್ಲಿ ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಎಸ್, ಜಿಲ್ಲಾ ರ‍್ಜನ್ ಡಾ.ಸಿದ್ದನಗೌಡ ಪಾಟಿಲ್, ಮಲ್ನಾಡ್ ಎಒಐ ಕರ‍್ಯರ‍್ಶಿ ಡಾ.ಲೋಹಿತ್ ಕುಮಾರ್, ಡಾ.ಅರುಣ್, ಡಾ.ಪುರುಷೋತ್ತಮ್, ಇಎನ್‍ಟಿ ತಜ್ಞರು, ವೈದ್ಯರು, ಶುಶ್ರೂಷಕಾಧೀಕ್ಷಕಿ ಅನ್ನಪರ‍್ಣ, ಪಿಜಿ ವಿದ್ಯರ‍್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...