VISL BhadravathiSAIL-VISL ವತಿಯಿಂದ ಗಿISಐ ಆಸ್ಪತ್ರೆ, ಸಹ್ಯಾದ್ರಿ ನಾರಾಯಣಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರುಗಳ ಸಹಯೋಗದಲ್ಲಿ ದಿನಾಂಕ 19-10-2023 ರಂದು ಭದ್ರಾವತಿ ತಾಲ್ಲೂಕಿನ ಮೈದೊಳಲು ಗ್ರಾಮದಲ್ಲಿ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಸಾಮಾನ್ಯ ಆರೋಗ್ಯ, ಹೃದಯ, ಕಣ್ಣಿನ, ಮೂಳೆ, ದಂತ ಚಿಕಿತ್ಸೆಯ ತಪಾಸಣೆಯನ್ನು ಮತ್ತು ಉಚಿತ ಔಷಧಿಯ ವಿತರಣೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು SAIL -VISL ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಹಾಗೂ ಶ್ರೀಮತಿ ಗೀತಮ್ಮ, ಅಧ್ಯಕ್ಷರು, ಮೈದೊಳಲು ಗ್ರಾಮ ಪಂಚಾಯಿತಿ ಉದ್ಘಾಟಿಸಿದರು, ಈ ಸಂದರ್ಭದಲ್ಲಿ VISL ನ ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ), ಡಾ. ಎಮ್.ವೈ.ಸುರೇಶ್, ಮುಖ್ಯ ವೈಧ್ಯಾಧಿಕಾರಿ, ಶ್ರೀ ಎಸ್.ಎನ್. ಸುರೇಶ್, ವೈಧ್ಯಾಧಿಕಾರಿಗಳು, ಶ್ರೀಮತಿ ಕೆ.ಎಸ್. ಶೋಭ, ಸಹಾಯಕ ಪ್ರಬಂಧಕರು (ಸಿಬ್ಬಂದಿ), ಸಹ್ಯಾದ್ರಿ ನಾರಾಯಣ ಹೃದಯಾಲಯದ ಹಾಗೂ ಶಂಕರ ಕಣ್ಣಿನ ಆಸ್ಪತ್ರೆಯ ವೈಧ್ಯಕೀಯ ತಂಡ, ಮೈದೊಳಲು ಗ್ರಾಮಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದರು.
VISL ಆಸ್ಪತ್ರೆಯ ತಜ್ಞರಾದ ಡಾ. ಎಮ್.ವೈ.ಸುರೇಶ್ ಮತ್ತು ಡಾ. ಎಸ್.ಎನ್. ಸುರೇಶ್, ಸಾಮಾನ್ಯ ಆರೋಗ್ಯ, ಮೂಳೆ ಮತ್ತು ದಂತ ಸಮಸ್ಯೆಗಳ ಬಗ್ಗೆ ತಜ್ಞರ ಸಲಹೆಯನ್ನು ನೀಡಿದರು. ಶ್ರೀಮತಿ ಅಪರ್ಣ, ಶ್ರೀ ಟಿ.ಎನ್. ಕೃಷ್ಣ, ಶ್ರೀ ಅಲೆನ್ ಜುಡೊ ಪಿಂಟೊ, ಶ್ರೀ ಮಧುಕರ್, ಶ್ರೀಮತಿ ತುಳಸಿ, ಮತ್ತು ಶ್ರೀ ಆರ್. ಮಂಜುನಾಥ್ ಸಹಕರಿಸಿದರು.
ಶಂಕರ ಕಣ್ಣಿನ ಆಸ್ಪತ್ರೆಯ ತಜ್ಞರಾದ ಡಾ. ಅಮೃತ ಮಧು, ಶ್ರೀಮತಿ ಜುಮನ, ಕು. ಕಾವ್ಯ ಮತ್ತು ಕು.ಚಂದನ ಮತ್ತು ಶ್ರೀ ಮಹೇಶ್ ರಾಯ್ಕರ್ ನೇತ್ರ ಪರೀಕ್ಷೆಗಳನ್ನು ನಡೆಸಿ ನೇತ್ರ ಆರೈಕೆಯ ಬಗ್ಗೆ ತಜ್ಞರ ಸಲಹೆಯನ್ನು ನೀಡಿದರು.
ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞರಾದ ಡಾ. ಜೀನಾ, ಡಾ. ಹಂಸಲೇಖ, ಶ್ರೀಮತಿ ತಾಸಿನಾ, ಶ್ರೀಮತಿ ಪೂಜಾ, ಶ್ರೀಮತಿ ಅತುಲ್ಯ ಮತ್ತು ಶ್ರೀ ಗಣೇಶ್ ಅವರು ಹೃದಯ ಸಂಬoಧಿ, 2D ECHO ಹಾಗೂ ECG ಪರೀಕ್ಷೆಗಳನ್ನು ನಡೆಸಿ, ಹೃದ್ರೋಗ ಆರೈಕೆಯ ಬಗ್ಗೆ ತಜ್ಞರ ಸಲಹೆಯನ್ನು ನೀಡಿದರು.
VISL Bhadravathi 254 ಗ್ರಾಮಸ್ಥರು ಈ ಶಿಬಿರದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮವನ್ನು VISL ಆಸ್ಪತ್ರೆ, ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೈದೊಳಲು ಗ್ರಾಮಪಂಚಾಯಿತಿಯವರ ಸಹಯೋಗದೊಂದಿಗೆ ಸಂಯೋಜಿಸಲಾಯಿತು.