Wednesday, April 23, 2025
Wednesday, April 23, 2025

Shivamogga Airport ಶಿವಮೊಗ್ಗದಿಂದ ತಿರುಪತಿ, ಗೋವಾ & ಹೈದ್ರಾಬಾದ್ ಗೆಸ್ಟಾರ್ ಏರ್ ವಿಮಾನ ಹಾರಾಟ

Date:

Shivamogga Airport ಶಿವಮೊಗ್ಗದಲ್ಲಿ ವಿಮಾನಯಾನ ಪ್ರಾರಂಭವಾಗಿದ್ದು, ಆರಂಭಿಕ ಹಂತದಲ್ಲಿಯೇ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಈ ಬೆನ್ನಲ್ಲೇ, ಸ್ಟಾರ್ ಏರ್ ನವೆಂಬರ್ 17ರಿಂದ ಮಲೆನಾಡಿನ ನೆಲಕ್ಕೆ ಲಗ್ಗೆ ಇಡಲಿದೆ. ಇದನ್ನು ವಿಮಾನಯಾನ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿಕೊಂಡಿದೆ.

ಶಿವಮೊಗ್ಗ ವಿಮಾನ ನಿಲ್ದಾಣವು ನೆರೆಹೊರೆಯ ಜಿಲ್ಲೆಯವರನ್ನು ತನ್ನತ್ತ ಸೆಳೆಯುತ್ತಿದೆ. ಬೆಂಗಳೂರು- ಶಿವಮೊಗ್ಗ -ಬೆಂಗಳೂರು ವಿಮಾನ ಶೇ.85-90% ರಷ್ಟು ಭರ್ತಿಯಾಗುತ್ತಿದೆ. ಶಿವಮೊಗ್ಗದಿಂದ ಹೈದರಾಬಾದ್ ತಿರುಪತಿ ಗೋವಾ ಗೆ ವಿಮಾನ ಸಂಚರಿಸಲಿದ್ದು, ಈಗಾಗಲೇ ಆಸನಗಳನ್ನು ಕಾಯ್ದೆಯಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ವಾರದ ಆರು ದಿನಗಳ ಕಾಲ ಈ ನಗರಗಳ ನಡುವೆ ವಾಹನ ಸಂಚರಿಸಲಿದೆ.

ಸ್ಟಾರ್ ಏರ್ಲೈನ್ಸ್ ವಿಮಾನಯಾನದ ವೇಳಾಪಟ್ಟಿಯನ್ನು ಜಾರಿಗೊಳಿಸಿದೆ. ವಿಮಾನವು ಹೈದರಾಬಾದ್ ಇಂದ ಬೆಳಗ್ಗೆ 9:30ಕ್ಕೆ ಹೊರಟು ಶಿವಮೊಗ್ಗಕ್ಕೆ ಬೆಳಿಗ್ಗೆ 10:35ಕ್ಕೆ ತಲುಪಲಿದೆ.

Shivamogga Airport ಶಿವಮೊಗ್ಗದಿಂದ ಬೆಳಿಗ್ಗೆ 11ಕ್ಕೆ ವಿಮಾನವು ತಿರುಪತಿಗೆ ಮಧ್ಯಾಹ್ನ 12ಕ್ಕೆ ತಲುಪಲಿದೆ .
ತಿರುಪತಿಯಿಂದ ಮಧ್ಯಾಹ್ನ 12:35ಕ್ಕೆ ಹೊರಟು ವಿಮಾನವು ಶಿವಮೊಗ್ಗಕ್ಕೆ ಮಧ್ಯಾಹ್ನ 1:45ಕ್ಕೆ ತಲುಪಲಿದೆ.

ಶಿವಮೊಗ್ಗದಿಂದ ಮಧ್ಯಾಹ್ನ 01:05ಕ್ಕೆ ಹೊರಟ ವಿಮಾನವು ಗೋವಾ ಮಧ್ಯಾಹ್ನ 2:45ಕ್ಕೆ ತಲುಪಲಿದೆ. ಗೋವಾದಿಂದ ಸಂಜೆ 3:15ಕ್ಕೆ ಹೊರಟ ವಿಮಾನವು ಶಿವಮೊಗ್ಗಕ್ಕೆ ಸಂಜೆ 4:05ಕ್ಕೆ ತಲುಪಲಿದೆ.

ಶಿವಮೊಗ್ಗದಿಂದ ಸಂಜೆ 4:30ಕ್ಕೆ ಹೊರಟ ವಿಮಾನವು ಹೈದರಾಬಾದ್ ಅನ್ನು ಸಂಜೆ 5:30ಕ್ಕೆ ತಲುಪಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...