Sunday, December 7, 2025
Sunday, December 7, 2025

Karnataka Rkshana Vedike ಕರವೇ ಕನ್ನಡ ಪರ ಅನೇಕ ಹೋರಾಟಗಳನ್ನ ಮಾಡಿ ಸಫಲವಾಗಿದೆ-ರಮೇಶ್

Date:

Karnataka Rkshana Vedike ಕರ್ನಾಟಕ ರಕ್ಷಣಾ ವೇದಿಕೆಯ ಕಡೂರು ತಾಲ್ಲೂ ಕು ಅಧ್ಯಕ್ಷರಾಗಿ ಎಂ. ಸತೀಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಂ.ಭರತ್ ಅವರನ್ನು ಆಯ್ಕೆ ಮಾಡ ಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ರಮೇಶ್ ಹೇಳಿದರು.

ಕಡೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲ್ಲೂಕು ಪದಾಧಿಕಾರಿಗಳ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಮಾತನಾಡಿದ ಅವರು ಕರವೇ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಹಲವಾರು ವರ್ಷಗಳಿಂದ ನಾಡು, ನುಡಿ ರಕ್ಷಣೆ ಯ ವಿಚಾರದಲ್ಲಿ ಪ್ರತಿಯೊಂದಕ್ಕೂ ಸ್ಪಂದಿಸುವುದಲ್ಲದೇ ಅನೇಕ ಹೋರಾಟಗಳಲ್ಲಿ ಭಾಗಿಯಾಗಿ ಕಾರ್ಯನಿರ್ವ ಹಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದ ಗಡಿಯ ವಿಚಾರದಲ್ಲಿ ಮಹಾರಾಷ್ಟçವನ್ನು ವಿರುದ್ಧ ಹೋರಾಟ ಮಾಡಲಾಗಿದೆ. ಕನ್ನಡಿಗರು ಹಿಂದಿ ಯಲ್ಲಿ ಪರೀಕ್ಷೆ ಎದುರಿಸಬೇಕಿದ್ದ ಸಂದರ್ಭದಲ್ಲಿ ಕರವೇಯು ಸ್ಥಳೀಯ ಭಾಷೆ ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಯನ್ನು ನೀಡುವಂತೆ ಹೋರಾಡಿದ ಪ್ರತಿಫಲ ಇದೀಗ ಕನ್ನಡ ಭಾಷೆಯ ಪ್ರಶ್ನೆ ಪತ್ರಿಕೆಯನ್ನು ಮುದ್ರಿಸಿ ನೀಡಲಾಗುತ್ತಿದೆ ಎಂದರು.

Karnataka Rkshana Vedike ಕಾವೇರು ನೀರು ತಮಿಳುನಾಡಿಗೆ ಹರಿಸುವ ಸಂಬಂಧ ರಾಜ್ಯಾಧ್ಯಕ್ಷ ಪ್ರವೀಣ್‌ಶೆಟ್ಟಿ ಮಾರ್ಗದರ್ಶನದಲ್ಲಿ ಜಿಲ್ಲೆ ಸೇರಿದಂತೆ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆ ಭಾಗಿಯಾಗಿ ರೈತರ ಹಾಗೂ ನಾಡಿನ ಜನತೆಯ ಪರವಾಗಿ ನಿಲ್ಲಲಾಗಿದೆ. ಜೊತೆಗೆ ಕನ್ನಡ ಭಾಷೆಗೆ ಧಕ್ಕೆ ತಂದ ಬೆಳಗಾವಿ ಮೇಯರ್ ವಿಜಯ ಪಾಂಡುರಂಗ ಮುಖಕ್ಕೆ ಕಪ್ಪು ಬಣ್ಣ ಸುರಿದು ನಾಡಿನ ಪರವಾಗಿ ಹೋರಾಟ ನಡೆಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ಕರವೇ ಉಪಾಧ್ಯಕ್ಷರಾಗಿ ಗೋವಿಂದಪ್ಪ, ಸಂಘಟನಾ ಕಾರ್ಯದರ್ಶಿ ನಾಗರಾಜ್, ರೈತ ಘಟಕದ ಅಧ್ಯಕ್ಷ ಹರ್ಷಿತ್, ಕಾರ್ಯದರ್ಶಿ ರವಿಕುಮಾರ್, ಸದಸ್ಯರಾದ ವೈ.ಜೆ.ಪೃಥ್ವಿ, ಲಕ್ಷಿö್ಮÃಶ, ಪೃಥ್ವಿಕ್, ರೋಹಿತ್, ಪುನೀತ್, ಮಂಜುನಾಥ್ ಮತ್ತಿತರರು ಕರವೇ ತಾಲ್ಲೂಕ ಘಟಕಕ್ಕೆ ಆಯ್ಕೆಗೊಳಿಸಲಾಯಿತು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...