World Cup ಅಹಮದಾಬಾದ್ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 7 ವಿಕೆಟ್ಗಳ ಜಯ ದಾಖಲಿಸಿದೆ.
ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡ ತನ್ನ ಜೈತ್ರಯಾತ್ರೆ ಮುಂದುವರೆಸಿದ್ದು ಮಾತ್ರವಲ್ಲದೇ ಅದೇ ತಂಡದ ದಾಖಲೆಯನ್ನೂ ಕೂಡ ಸರಿಗಟ್ಟಿದೆ.
ಇಲ್ಲಿಯವರೆಗೆ ಉಭಯ ತಂಡಗಳೂ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ 8 ಬಾರಿ ಮುಖಾಮುಖಿಯಾಗಿದ್ದು, ಈ ಎಂಟೂ ಬಾರಿಯೂ ಭಾರತ ತಂಡ ಜಯಗಳಿಸಿದೆ. ಆ ಮೂಲಕ ನಿನ್ನೆ ಸೋತ ಅದೇ ಪಾಕಿಸ್ತಾನದ ದಾಖಲೆಯನ್ನು ಭಾರತ ಸರಿಗಟ್ಟಿದೆ.
ಪಾಕಿಸ್ತಾನ ಕೂಡ ಇಂತಹುದೇ ದಾಖಲೆ ಹೊಂದಿದ್ದು ಆ ತಂಡ ಶ್ರೀಲಂಕಾದ ವಿರುದ್ಧ ಈ ವರೆಗೂ 8 ಬಾರಿ ಗೆಲುವು ಸಾಧಿಸಿದೆ. ಉಳಿದಂತೆ ವೆಸ್ಟ್ ಇಂಡೀಸ್ ತಂಡ ಜಿಂಬಾಬ್ವೆ ವಿರುದ್ಧ ಮತ್ತು ನ್ಯೂಜಿಲೆಂಡ್ ತಂಡ ಬಾಂಗ್ಲಾದೇಶದ ವಿರುದ್ಧ ತಲಾ 6 ಸತತ ಗೆಲುವುಗಳನ್ನು ಹೊಂದಿದೆ.
ಗುಜರಾತ್ ನ ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಭರ್ಜರಿ 7 ವಿಕೆಟ್ ಗಳ ಅಂತರದ ಜಯ ಗಳಿಸಿದೆ.
World Cup ಪಾಕಿಸ್ತಾನ ನೀಡಿದ 192 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 30.3 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಜಯ ಗಳಿಸಿತು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಬಾರತ ತಂಡ ಪಾಕಿಸ್ತಾನದ ವಿರುದ್ಧ ತನ್ನ ಅಜೇಯ ಯಾತ್ರೆ ಮುಂದುವರೆಸಿದೆ.