Ranebennur Dasara ದಸರಾ ಮಹೋತ್ಸವ ಪ್ರಯುಕ್ತ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ರಾಣೆಬೆನ್ನೂರಿನ ಕೃಷ್ಣಮೃಗ ಘಟಕದ ವತಿಯಿಂದ ರಾಣೆಬೆನ್ನೂರಿನ ಪಿಬಿ ರಸ್ತೆಯಲ್ಲಿರುವ ಓಂ ಪಬ್ಲಿಕ್ ಶಾಲೆ ಆವರಣದಲ್ಲಿ ಅಕ್ಟೋಬರ್ 17ರ ಸಂಜೆ 4ಕ್ಕೆ “ದಾಂಡಿಯಾ ನೈಟ್ ಸಾಂಸ್ಕೃತಿಕ ಸಂಜೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ 15, 16 ಹಾಗೂ 17ರಂದು ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ಕಲಾ ಸಂತೆ ಹಮ್ಮಿಕೊಂಡಿದ್ದು, ಅಕ್ಟೋಬರ್ 15ರ ಸಂಜೆ 4ಕ್ಕೆ ಕಲಾತ್ಮಕ ವಸ್ತುಗಳ ಪ್ರದರ್ಶನ ಇರಲಿದೆ. ರಾಜ್ಯದ ಹಲವಾರು ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ.
ಅಕ್ಟೋಬರ್ 15 ಮತ್ತು 16ರ ಸಂಜೆ 5 ರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ದಸರಾ ಹಬ್ಬದ ಪ್ರಯುಕ್ತ ವಿಶೇಷವಾಗಿ ಕಲಾಸಂತೆ ಹಾಗೂ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಂತರ ಜಿಲ್ಲಾ ದಾಂಡಿಯ ನೃತ್ಯವನ್ನು ಅಕ್ಟೋಬರ್ 17ರ ಸಂಜೆ 4ಕ್ಕೆ ದಾಂಡಿಯಾ ವಿಶೇಷ ನೃತ್ಯ ಆಯೋಜಿಸಲಾಗಿದೆ.
ದಾಂಡಿಯಾ ನೃತ್ಯ ನಮ್ಮ ಪೂರ್ವಜರು ಹಾಕಿ ಕೊಟ್ಟ ಮಾರ್ಗದರ್ಶನ ಆಗಿದ್ದು, ಮಕ್ಕಳಲ್ಲಿ ಯುವಕ ಯುವತಿರಲ್ಲಿ ಸಾಂಸ್ಕೃತಿಕ, ಧಾರ್ಮಿಕ ಭಾವನೆ, ಸ್ನೇಹ ಸಂಬಂಧ ಬೆಳೆಸಲು ಸಹಕಾರಿಯಾಗುತ್ತದೆ. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಖ್ಯಾದ್ಯ ವಸ್ತುಗಳ ಅದ್ದೂರಿ ರಸದೌತಣ ಏರ್ಪಡಿಸಲಾಗಿದೆ.
Ranebennur Dasara ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು. ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9845802364 / 9620623203 ಸಂಪರ್ಕಿಸಬಹುದಾಗಿದೆ.