Wednesday, September 16, 2026
Wednesday, September 16, 2026

World Food Day ಶಿವಮೊಗ್ಗದಲ್ಲಿ ಸಿರಿಧಾನ್ಯ ಬಳಸಿ ಅಡುಗೆ ಮಾಡುವ ಸ್ಪರ್ಧೆ

Date:

World Food Day 2023ನೇ ವರ್ಷವನ್ನು ವಿಶ್ವ ಸಿರಿಧಾನ್ಯ ವರ್ಷ ಘೋಷಿಸಿರುವ ಹಿನ್ನೆಲೆಯಲ್ಲಿ ವಿಶ್ವ ಆಹಾರ ದಿನಾಚರಣೆ ಪ್ರಯುಕ್ತ ಅಕ್ಟೋಬರ್ 16ರಂದು ಸೋಮವಾರ ಸಂಜೆ 4.30ಕ್ಕೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸಂಘದ ಸಭಾಂಗಣದಲ್ಲಿ “ಸಿರಿಧಾನ್ಯ ಅಡುಗೆ ಮಾಡುವ ಸ್ಪರ್ಧೆ” ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು, ಸಂಘ ಸಂಸ್ಥೆಗಳು, ಹೊಟೇಲ್ ಹಾಗೂ ಇತರರು ರುಚಿ ಶುಚಿಯಾಗಿ ಸಿರಿಧಾನ್ಯ ಆಹಾರ ತಯಾರಿಸುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

ಆಸಕ್ತ ಸ್ಪರ್ಧಿಗಳು ಸಿರಿಧಾನ್ಯವನ್ನು ಬಳಸಿ ತಯಾರಿಸಿದ ಆಹಾರವನ್ನು ಪ್ರದರ್ಶಿಸಿ ಬಹುಮಾನ ಪಡೆಯಬಹುದು.

ಉತ್ತಮವಾಗಿ ರುಚಿ ಶುಚಿಯಾಗಿ ಆಹಾರ ತಯಾರಿಸಿದವರಿಗೆ ಮೊದಲನೇ ಬಹುಮಾನ 3000 ರೂ.,

ಎರಡನೇ ಬಹುಮಾನ 2 ಸಾವಿರ ರೂ., ಹಾಗೂ

ಮೂರನೇ ಬಹುಮಾನ 1 ಸಾವಿರ ರೂ. ಹಾಗೂ ಪ್ರಮಾಣ ಪತ್ರ ನೀಡಲಾಗುವುದು.

ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಹೊಟೇಲ್ ಹಾಗೂ ಇತರರು ಎಂಬ ಪ್ರತ್ಯೇಕ ವಿಭಾಗಗಳಲ್ಲಿ ಬಹುಮಾನ ನೀಡಲಾಗುವುದು.

World Food Day ಪ್ರತಿ ವಿಭಾಗದಲ್ಲೂ ಮೊದಲ 20 ಸ್ಪರ್ಧಿಗಳಿಗೆ ಅವಕಾಶ ಇದೆ.
ಕಡ್ಡಾಯವಾಗಿ ಸಿರಿಧಾನ್ಯದಿಂದಲೇ ಮನೆಯಲ್ಲಿ ತಯಾರಿ ಮಾಡಿಕೊಂಡು ತರಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮ. ಹೆಚ್ಚಿನ ವಿವರಗಳಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕ ಗಣೇಶ ಎಂ.ಅಂಗಡಿ 9880044040/7019870585 ಸಂಪರ್ಕಿಸಬಹುದಾಗಿದೆ. ಪ್ರವೇಶ ಶುಲ್ಕ 100 ರೂ. ಇರಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...