Asian Games ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಭಾರತ ತಂಡವು ‘ಪದಕಗಳ ಶತಕ’ ಬಾರಿಸಿದೆ.
ಕೂಟದ 14 ನೇ ದಿನವಾದ ಶನಿವಾರದ ಆರಂಭಕ್ಕೆ ಭಾರತ ತಂಡವು ಒಟ್ಟು 100 ಪದಕಗಳನ್ನು ಗಳಿಸಿತು.
2018ರಲ್ಲಿ 70 ಪದಕಗಳನ್ನು ಜಯಿಸಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಈ ಸಾರಿ ಭಾರತದ ಕ್ರೀಡಾಳುಗಳು 25 ಚಿನ್ನ 35 ಬೆಳ್ಳಿ ಹಾಗೂ 40 ಕಂಚಿನ ಪದಕಗಳನ್ನು ಪಡೆದು ಪದಕಗಳ ಪಟ್ಟಿಯಲ್ಲಿ ಶತಕ ಬಾರಿಸಿದರು.
ಪದಕಗಳ ಪಟ್ಟಿಯಲ್ಲಿ ಚೀನಾ 354 ರ ಮೂಲಕ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.ಜಪಾನ್ 169, ರಿಪಬ್ಲಿಕ್ ಆಫ್ ಕೊರಿಯಾ 171, ಭಾರತ 100.
ಫೈನಲ್ ಕಬಡ್ಡಿಯಲ್ಲಿ ಚೈನೀಸ್ ತೈಪೆ ತಂಡವನ್ನು 26–25ರ ರೋಚಕ ಹಣಾಹಣಿಯಲ್ಲಿ ಮಣಿಸಿದ ಭಾರತ ಮಹಿಳೆಯರ ತಂಡ ಚಿನ್ನದ ಪದಕ ಪಡೆಯುವ ಮೂಲಕ ಶತಕದ ಪದರ್ಪಾಣೆಯನ್ನು ಭಾರತ ಮಾಡಿತು.
ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 100 ಪದಕಗಳನ್ನು ಗೆದ್ದಿರುವುದು ಮಹತ್ವದ ಸಾಧನೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
Asian Games ಜಪಾನ್ ತಂಡದ ವಿರುದ್ಧ ಹಾಕಿ ಪಂದ್ಯದಲ್ಲಿ ಭಾರತ
5-1 ಗೋಲುಗಳ ಜಯಸಾಧಿಸಿ ಮತ್ತೊಂದು ಸುವರ್ಣ ಪದಕಕ್ಕೆ ಮುತ್ತಿಕ್ಕಿತು. ಈ ಗೆಲುವಿನಿಂದ ಭಾರತವು ಪ್ಯಾರೀಸ್ ಒಲಂಪಿಕ್ ಹಾಕಿ ಸ್ಪರ್ಧೆಗೆ ನೇರ ಅರ್ಹತೆ ಗಳಿಸಿತು