Monday, April 28, 2025
Monday, April 28, 2025

Rotary Shivamogga East ಯುವ ಉದ್ಯಮಿಗಳಿಗೆ ಸೂಕ್ತ ಮಾರ್ಗದರ್ಶನಗಳನ್ನು ಸಂಘಸಂಸ್ಥೆಗಳು ನೀಡಬೇಕು- ಎ.ಎನ್.ಗೋಪಿನಾಥ್

Date:

Rotary Shivamogga East ಸಂಘ ಸಂಸ್ಥೆಗಳು ಆಸಕ್ತ ವ್ಯಕ್ತಿಗಳಿಗೆ ವೃತ್ತಿ ಮಾರ್ಗದರ್ಶನ ನೀಡುವುದರೊಂದಿಗೆ ಸಮುದಾಯದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ರಾಜೇಂದ್ರ ನಗರದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಸಮುದಾಯಗಳ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಪಾತ್ರ” ಎಂಬ ವಿಚಾರದ ಬಗ್ಗೆ ಮಾತನಾಡಿ, ಸಮುದಾಯದಲ್ಲಿ ಆಸಕ್ತ ಮತ್ತು ಅವಶ್ಯಕತೆ ಇರುವ ಯುವಕರಿಗೆ ಆರಂಭಿಕ ಸಮಯದಲ್ಲಿ ಸೂಕ್ತವಾದ ಆರ್ಥಿಕ, ತಾಂತ್ರಿಕ, ವ್ಯವಹಾರಿಕ ಮತ್ತು ವೃತ್ತಿಪರ ಕೌಶಲ್ಯಗಳ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ಯುವ ಸಮುದಾಯವನ್ನು ಉತ್ತಮ ವ್ಯವಹಾರ ಮಾಡಲು ತಯಾರು ಮಾಡುವುದರ ಮೂಲಕ ಸಮಾಜದಲ್ಲಿ ವಿವಿಧ ಕೈಗಾರಿಕೆ ಮತ್ತು ಉದ್ಯಮಗಳ ಪ್ರಾರಂಭ, ಉತ್ತಮ ನಿರ್ವಹಣೆ ಮಾಡಲು ಅನುಕೂಲಕರವಾದ ಸೂಕ್ತ ಮಾರ್ಗದರ್ಶನವನ್ನು ಸಂಘ ಸಂಸ್ಥೆಗಳು ನೀಡಬೇಕು ಎಂದರು.

ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಜೊತೆಗೆ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸಬೇಕು. ಉದ್ಯಮ ಸ್ನೇಹಿ ವಾತಾವರಣ ಮತ್ತು ಮಾರ್ಗದರ್ಶಕ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ದೇಶದ ಆರ್ಥಿಕ ಮತ್ತು ಸಾಮಾಜಿಕ ಉನ್ನತಿಗೆ ಸಹಕಾರಿ ಆಗಬೇಕಿದೆ. ಈ ವಿಷಯದಲ್ಲಿ ಸಂಘ ಸಂಸ್ಥೆಗಳ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.

Rotary Shivamogga East ಶೈಕ್ಷಣಿಕ ಮತ್ತು ಔದ್ಯೋಗಿಕ ಅವಶ್ಯಕತೆಗಳ ಮಧ್ಯೆ ಇರುವ ಅಂತರವನ್ನು ಪೂರ್ಣ ಮಾಡುವ ಉದ್ದೇಶದಿಂದ

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ವಜ್ರ ಮಹೋತ್ಸವ ವರ್ಷದ ಆಚರಣೆಯ ಸಂದರ್ಭದಲ್ಲಿ “ಅಡ್ವಾನ್ಸ್ಡ್ ಸ್ಕಿಲ್ ಅಕಾಡೆಮಿ” ಸ್ಥಾಪಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಶಿವಮೊಗ್ಗದ ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವಂತಹ ಲ್ಯಾಂಗ್ವೇಜ್ ಲ್ಯಾಬ್, ಸೈಕೋ ಮ್ಯಾಟ್ರಿಕ್ ಅನಾಲಿಸಿಸ್ ಸೆಂಟರ್, ಹಾಗೂ ಸೈಬರ್ ಸೆಕ್ಯೂರಿಟಿ ಕೌಶಲ್ಯಗಳ ತರಬೇತಿಗಳನ್ನು ನೀಡಲಾಗುವುದು ಎಂದರು.

ಮುಂದಿನ ಪೀಳಿಗೆಯ ವೃತ್ತಿಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡಿ ಶಿವಮೊಗ್ಗ ನಗರಕ್ಕೆ ನವ ಉದ್ಯಮಗಳನ್ನ ಬರುವಂತೆ ಮಾಡಿ ನಗರದ ಆರ್ಥಿಕ, ಸಾಮಾಜಿಕ ಮತ್ತು ಔದ್ಯೋಗಿಕ ಉನ್ನತೀಕರಣಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಡಿಸೆಂಬರ್ ನಲ್ಲಿ ಶಿವಮೊಗ್ಗ ಜಿಲ್ಲೆಯನ್ನು ರಾಜ್ಯಾದ್ಯಂತ ಉತ್ತಮ ರೀತಿಯಲ್ಲಿ ಪ್ರಚಾರಪಡಿಸುವಲ್ಲಿ ಶಿವಮೊಗ್ಗ ಹಬ್ಬ ನಡೆಸುತ್ತಿದ್ದು, ಶಿವಮೊಗ್ಗದ ಇತಿಹಾಸ, ಸಂಸ್ಕೃತಿ, ಜೀವನ, ಶೈಕ್ಷಣಿಕ ಮತ್ತು ವೈದ್ಯಕೀಯ ಸವಲತ್ತುಗಳು, ಪ್ರವಾಸೋದ್ಯಮ ಅವಕಾಶಗಳು, ಮಲೆನಾಡಿನ ವಿಶೇಷತೆಗಳು ಬಗ್ಗೆ ಕನ್ನಡ ನಾಡಿನ ಜನರಿಗೆ ತಿಳಿಸುವುದಕ್ಕಾಗಿ ಹಾಗೂ ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ ಎಂಬ ಧೇಯ ವಾಕ್ಯ ದೊಂದಿಗೆ ಆಚರಿಸುವ ಉದ್ದೇಶವನ್ನು ಹೊಂದಿದೆ. ಶಿವಮೊಗ್ಗದ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ನಾಗರೀಕರು ಶಿವಮೊಗ್ಗದ ಹಿರಿಮೆಯನ್ನ ಹೆಚ್ಚಿಸಲು ಕೈಜೋಡಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಪ್ರಸ್ತುತ ಸಮಯದಲ್ಲಿ ಉದ್ಯಮ ಆಸಕ್ತರಿಗೆ ಸರಿಯಾದ ಮಾರ್ಗದರ್ಶನ ಅವಶ್ಯಕತೆ ಇದೆ. ರೋಟರಿ ಸಂಸ್ಥೆಗಳಲ್ಲಿ ಹೆಚ್ಚು ಹೆಚ್ಚು ಜನ ವ್ಯಾಪಾರಸ್ಥರು ಉದ್ಯಮಿಗಳು ಇದ್ದಾರೆ. ಎಲ್ಲರೂ ಶಿವಮೊಗ್ಗ ಜಿಲ್ಲೆ ಮತ್ತು ಕೈಗಾರಿಕಾ ಸಂಘದ ಸದಸ್ಯರಾಗಿ ಸಂಸ್ಥೆಯನ್ನು ಬಲಪಡಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಎನ್.ಗೋಪಿನಾಥ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ ಕುಮಾರ್, ವಸಂತ ಹೋಬಳಿದಾರ್, ಚಂದ್ರಹಾಸ ರಾಯ್ಕರ್, ಡಾ. ಗುಡದಪ್ಪ ಕಸಬಿ, ಕಡಿದಾಳ್ ಗೋಪಾಲ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್ ಕುಮಾರ್, ಪ್ರದೀಪ್ ವಿ.ಎಲಿ, ಮಾಜಿ ಅಧ್ಯಕ್ಷರು, ಇನ್ನರ್‌ವ್ಹೀಲ್ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chanakya Chess School ಮೇ 2 ರಿಂದ ಮುಕ್ತ ಚೆಸ್ ತರಬೇತಿ ಶಿಬಿರ

Chanakya Chess School ಚಾಣಕ್ಯ ಚೆಸ್ ಸ್ಕೂಲ್ ವತಿಯಿಂದ ಶಿವಮೊಗ್ಗ ನಗರದ...