Shimoga Dasara Preparations ನಾಡಹಬ್ಬ ದಸರಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ, ಇದರ ಪೂರ್ವಭಾವಿಯಾಗಿ ಅನೇಕ ಸಭೆಗಳು ನಡೆಯುತ್ತಿವೆ.
ಇಂದು ಶಿವಮೊಗ್ಗ ನಗರದ ಶಾಸಕರಾದ ಎಸ್.ಎನ್ ಚನ್ನಬಸಪ್ಪ ಅವರು ಬೆಂಗಳೂರಿನ ವಿಧಾನಸೌಧದಲ್ಲಿ ಹಿಂದುಳಿದ ವರ್ಗದ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದಂತ ಸಚಿವರಾದ ಶ್ರೀ ಶಿವರಾಜ್ ತಂಗಡಗಿ ರವರ ಕಾರ್ಯದರ್ಶಿ ರವರನ್ನು ಭೇಟಿಯಾಗಿ ದಸರಾ ಅನುದಾನದ ಬಗ್ಗೆ ಚರ್ಚೆ ನಡೆಸಿದರು.
ಈ ಚರ್ಚೆಯಲ್ಲಿ ದಸರಾ ಉತ್ಸವಕ್ಕಾಗಿ ಆನೆಗಳಿಗಾಗಿ ಅನುಮತಿಯನ್ನು ಪಡೆದುಕೊಂಡರು.

ಭೇಟಿಯ ಸಮಯದಲ್ಲಿ ಪಾಲಿಕೆಯ ಮಹಾಪೌರರಾದ ಶಿವಕುಮಾರ್, ಉಪಮಹಾಪೌರರಾದ ಲಕ್ಷ್ಮಿ ಶಂಕರ್ ನಾಯಕ್. ಆಡಳಿತ ಪಕ್ಷದ ನಾಯಕರಾದ ಶ್ರೀ ಜ್ಞಾನೇಶ್ವರ್, ಪಾಲಿಕೆಯ ಸದಸ್ಯರಾದ ಪ್ರಭಾಕರ್, ವಿಶ್ವಾಸ್, ಅನಿತಾ ರವಿಶಂಕರ್. ವಿಶ್ವನಾಥ್, ಭಾನುಮತಿ, ವಿನೋದ್ ಉಪಸ್ಥಿತರಿದ್ದರು.
Shimoga Dasara Preparations ನಂತರ ಶಿವಮೊಗ್ಗ ನಗರದ ಶಾಸಕರಾದ ಎಸ್.ಎನ್ ಚನ್ನಬಸಪ್ಪ ಅವರು ಬೆಂಗಳೂರಿನಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಮಧು ಬಂಗಾರಪ್ಪ ರವರನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ದಸರಾ ಹಬ್ಬದ ಕುರಿತು ಚರ್ಚಿಸಿದರು.