Karnataka State Government Employees Association ಅಕ್ಟೋಬರ್ ಮಾಹೆಯನ್ನು ಜಾಗತಿಕ ಮಟ್ಟದಲ್ಲಿ ಸೈಬರ್ ಭದ್ರತೆಯ ಮಾಸವನ್ನಾಗಿ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ, ಶಿವಮೊಗ್ಗ ಹಾಗೂ ಸೈಸೆಕ್- -ಸಹಯೋಗದಲ್ಲಿ ಸೈಬರ್ ಅಪರಾಧಗಳಿಂದ ಹೆಚ್ಚು ಸುರಕ್ಷಿತರಾಗುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತ ಮೂಡಿಸಲು ಖ್ಯಾತ ಹಾಸ್ಯ ಕಲಾವಿದರಿಂದ “ಸೈಬರ್ ಹಾಸ್ಯ ಸಂಜೆ” ಕಾರ್ಯಕ್ರಮವನ್ನು ಅ. 07 ರ ಶನಿವಾರ ಸಂಜೆ 5:00 ಗಂಟೆಗೆ ಸರ್ಕಾರಿ ನೌಕರರ ವಿಕಾಸ ಕೇಂದ್ರ, ಚೌಡಮ್ಮ ದೇವಸ್ಥಾನ ಪಕ್ಕ, ೧ನೇ ತಿರುವು, ಬಸವನಗುಡಿ, ಶಿವಮೊಗ್ಗ ಇಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ, ಖ್ಯಾತ ಹಾಸ್ಯ ಕಲಾವಿದರಾದ, ಗಂಗಾವತಿ ಪ್ರಾಣೇಶ್, ಸುಧಾ ಬರಗೂರು, ವೈ.ವಿ.ಗುಂಡುರಾವ್, ಎಂ.ಎಸ್.ನರಸಿಂಹಮೂರ್ತಿ, ಹೆಚ್.ದುಂಡಿರಾಜ್, ಬಸವರಾಜ ಮಹಾಮನಿರವರು ಭಾಗವಹಿಸಲಿದ್ದು, ಜಿಲ್ಲೆಯ ಅಧಿಕಾರಿಗಳು, ಸರ್ಕಾರಿ ನೌಕರರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿಗಳು ತಿಳಿಸಿದ್ದಾರೆ .
Karnataka State Government Employees Association ಅ.7 ಶನಿವಾರ “ಸೈಬರ್ ಹಾಸ್ಯ ಸಂಜೆ” ಯಲ್ಲಿ ಗಂಗಾವತಿ ಪ್ರಾಣೇಶ್ & ಬಳಗ
Date:
