Saturday, December 6, 2025
Saturday, December 6, 2025

Shivamogga Brilliant Education Society ಅಕ್ಟೋಬರ್ 10 ರಂದು ‌ಜಿಲ್ಲಾಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ವಾಲಿಬಾಲ್ ಪಂದ್ಯಾವಳಿ ಚಾಲನೆ

Date:

Shivamogga Brilliant Education Society ಶಿವಮೊಗ್ಗ ಬ್ರಿಲಿಯಂಟ್ ಎಜುಕೇಶನ್ ಸೊಸೈಟಿ (ರಿ )ಶಿವಮೊಗ್ಗ. ಕಿದ್ವಾಯಿ ಆಂಗ್ಲ ಮಾಧ್ಯಮ ಪ್ರೌಢಶಾಲೆ,ಆರ್. ಎಂ. ಎಲ್. ನಗರ ಶಿವಮೊಗ್ಗ.ಹಾಗೂ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ “ದೈಹಿಕ ಶಿಕ್ಷಣ ಶಿಕ್ಷಕರ ವಾಲಿಬಾಲ್ ಪಂದ್ಯಾವಳಿ 2023 — 24 ” ಪುರುಷರ ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಈ ಕ್ರೀಡಾ ಕೂಟವನ್ನು ಒಂದು ದಿನದ ಮಟ್ಟಿಗೆ ದಿನಾಂಕ : 08/10/2023 ರಂದು ಶಿವಮೊಗ್ಗ ಜಿಲ್ಲೆಯ ಸರ್ಕಾರಿ,ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಿಗೆ ಅಂದು 03 ಗಂಟೆಗೆ ಪಂದ್ಯಾವಳಿ ಪ್ರಾರಂಭವಾಗುವವು.ಪ್ರಥಮ ಬಾರಿಗೆ, ಜಿಲ್ಲೆಯ ದೈಹಿಕ ಶಿಕ್ಷಣ ಮಿತ್ರರಿಗೆ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಏರ್ಪಡಿಸಿರುವುದು ಇನ್ನೊಂದು ವಿಶೇಷವಾಗಿದೆ.

ವಾಲಿಬಾಲ್ ನಲ್ಲಿ ವಿಜೇತ ಕ್ರೀಡಾಪಟುಗಳಿಗೆ , ಪಾರಿತೋಷಕ ದೊಂದಿಗೆ, ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ.

Shivamogga Brilliant Education Society ಪಂದ್ಯಾವಳಿಯು ದಿನಾಂಕ :08/ 10/ 2023 ರಂದು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಲಿದ್ದು, ಆಟಗಾರರ ಅನುಕೂಲಕ್ಕಾಗಿ ಎರಡು ಅಂಕಣಗಳನ್ನು ಸಿದ್ದಪಡಿಸಲಾಗಿದೆ. ನುರಿತ ವಾಲಿಬಾಲ್ ತೀರ್ಪುಗಾರರು ಆಗಮಿಸಲಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಬರುವ ಎಲ್ಲಾ ಕ್ರೀಡಾ ಪಟುಗಳಿಗೂ ಸಂಜೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ನಿಬಂಧನೆಗಳು :1) ತಂಡಗಳು ಕಡ್ಡಾಯವಾಗಿ ಕ್ರೀಡಾ ಸಮವಸ್ತ್ರ ಧರಿಸಿ ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು.
2) ಒಂದು ತಂಡದಲ್ಲಿ 7 ಜನ ಕ್ರೀಡಾ ಪಟುಗಳು ಮತ್ತು ಒಬ್ಬರು ಸಾಮಾನ್ಯ ಶಿಕ್ಷಕರಿಗೆ ಭಾಗವಹಿಸಲು ಅವಕಾಶ ವಿರತ್ತದೆ.
3) ಕಡ್ಡಾಯವಾಗಿ ಶಾಲಾ ಮತ್ತು ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾಗಿರಬೇಕು. ಅಂತವರಿಗೆ ಮಾತ್ರ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ, ಗುರುತಿನ ಚೀಟಿ ತರಬೇಕು.
4) 6.10.2023ರ ಒಳಗಾಗಿ ಹೆಸರು ನೊಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ಕ್ರೀಡಾ ಕೂಟದ ಸಂಚಾಲಕರಾದ ರಘು ಎಲ್. ಎಸ್. ಅವರು ಕೋರಿದ್ದಾರೆ.

ಹೆಚ್ಚಿನ ಮಾಹಿತಿ ಗಾಗಿ, 9902183819 ಗೆ ಸಂಪರ್ಕಿಸಬಹುದಾಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...