Wednesday, September 16, 2026
Wednesday, September 16, 2026

Chamber Of commerce Shivamogga ಗಲಭೆ ಪೀಡಿತ ಪ್ರದೇಶಕ್ಕೆಸೆಕ್ಷನ್ 144 ಸೀಮಿತವಾಗಿರಲಿ: ಮಿಕ್ಕೆಡೆ ವ್ಯಾಪಾರಕ್ಕೆ ಅನುವುಮಾಡಿಕೊಡಿ- ಎನ್.ಗೋಪಿನಾಥ್

Date:

Chamber Of commerce Shivamogga ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಪ್ರಕರಣದ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ನಿಷೇಧಾಜ್ಞೆ ವಿಧಿಸಲಾಗಿದೆ‌. ಇದರಿಂದ ಶಿವಮೊಗ್ಗದಲ್ಲಿ ಉದ್ಯಮಕ್ಕೆ ತೊಂದರೆ ಉಂಟಾಗಿದೆ. ನಿಷೇಧಾಜ್ಞೆಯನ್ನು ರಾಗಿಗುಡ್ಡಕ್ಕೆ ಸೀಮಿತಗೊಳಿಸಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು , ನಿಷೇಧಾಜ್ಞೆಯನ್ನು ಇಡೀ ಶಿವಮೊಗ್ಗ ನಗರಕ್ಕೆ ವಿಸ್ತರಿಸಿರುವ ಕ್ರಮ ಸರಿಯಲ್ಲ ಎಂದು ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

Chamber Of commerce Shivamogga ರಾಗಿಗುಡ್ಡದಲ್ಲಿ ಅಹಿತಕರ ಘಟನೆ ಸಂಭವಿಸಿದೆ. ಆದರೆ ಗಾಂಧಿ ಬಜಾರ್ ಸೇರಿದಂತೆ ವಿವಿಧೆಡೆ ಅಂಗಡಿ – ಮುಂಗಟ್ಟು ಬಂದ್ ಮಾಡಿಸಲಾಗಿದೆ. ಇದರಿಂದ ಉದ್ಯೋಗ ಮಾಡುವವರಿಗೆ ಉದ್ಯಮಿಗಳಿಗೆ ತೊಂದರೆ ಎದುರಾಗುತ್ತದೆ. ಈಗಾಗಲೇ ಕಳೆದ ವಾರ ಮೂರ್ನಾಲ್ಕು ದಿನ ವಿವಿಧ ಕಾರಣಕ್ಕೆ ಉದ್ಯಮಗಳಲ್ಲಿ ಸ್ಥಗಿತಗೊಳಿಸಿದ್ದೆವು. ಈಗ ಪುನಃ ವ್ಯವಹಾರ ಸ್ಥಗಿತ ಮಾಡಿದರೆ ಸಮಸ್ಯೆಯಾಗಲಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...