Gandhi Jayanti “ಏಕ್ ತಾರಿಕ್ ,ಏಕ್ ಗಂಟಾ ,ಏಕ್ ಸಾಥ್ “-ಈ ಸಂದೇಶದ ಮೂಲಕ ಗಾಂಧಿ ಜಯಂತಿ ಆಚರಣೆಯ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರು ದೇಶದ ಜನತೆಗೆ ಬೃಹತ್ ಸ್ವಚ್ಛತಾ ಆಂದೋಲನಕ್ಕೆ ಕರೆ ನೀಡಿದ್ದರು.ಪ್ರಧಾನಿಯವರ ಈ ವಿನಂತಿಯ ಮೇರೆಗೆ ದೇಶಾದ್ಯಂತ ರಾಜಕಾರಣಿಗಳಿಂದ ವಿದ್ಯಾರ್ಥಿಗಳವರೆಗೆ ಎಲ್ಲ ಕ್ಷೇತ್ರಗಳ ಜನರು ಬೆಳಗ್ಗೆ ಹತ್ತು ಗಂಟೆಯಿಂದ ಒಂದು ಗಂಟೆ ಕಾಲ ಶ್ರಮದಾನದಲ್ಲಿ ತೊಡಗಿದ್ದರು. ಈ ಅಭಿಯಾನದಲ್ಲಿ ನಾನೂ ಪಾಲ್ಗೊಂಡು ಸಾರ್ಥಕಭಾವ ಅನುಭವಿಸಿದೆ ಅನ್ನುವುದು ನನಗೆ ಹೆಮ್ಮೆಯ ಹಾಗೂ ಸಂತೋಷದ ಸಂಗತಿ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Gandhi Jayanti ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಪ್ರಕಾರ ದೇಶಾದ್ಯಂತ 9 ಲಕ್ಷಕ್ಕೂ ಹೆಚ್ಚು ಕಸದ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಗಿದೆ. ಗೃಹ ಸಚಿವ ಅಮಿತ್ ಶಾ,ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್,ಮಹಾರಾಷ್ಟ್ರ ಮುಖ್ಯಮಂತ್ರಿ ಏಕ್ ನಾಥ್ ಶಿಂಧೆ ಸೇರಿದಂತೆ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಗಣ್ಯರು ಮತ್ತು ಕೇಂದ್ರ ಸಚಿವರು ಈ ಆಂದೋಲನದ ನೇತೃತ್ವವನ್ನು ವಹಿಸಿದ್ದರು.
“ಇಂದು ಬೆಳಗ್ಗೆ ಹತ್ತು ಗಂಟೆಗೆ ಈ ಮಹತ್ವದ ಕಾರ್ಯದಲ್ಲಿ ನಾವೆಲ್ಲಾ ಒಂದುಗೂಡಿದ್ದೆವು. ಒಂದು ಸ್ವಚ್ಛ ಭಾರತ ಎಲ್ಲರೂ ಹಂಚಿಕೊಂಡು ನೆರವೇರಿಸುವ ಜವಾಬ್ದಾರಿ. ಇಲ್ಲಿ ಎಲ್ಲರ ಪ್ರಯತ್ನವೂ ಮುಖ್ಯ. ಒಂದು ಸ್ವಚ್ಛವಾದ ಭವಿಷ್ಯಕ್ಕೆ ನಾಂದಿ ಹಾಡಲು ಈ ಪವಿತ್ರ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಿದ್ದಾರೆ “ಎಂದು ಪ್ರಧಾನಿಯವರು ಟ್ವಿಟ್ಟರ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ದೇಶದಲ್ಲಿ ಇಂದು ಒಂದು ಮಹಾನ್ ಕ್ರಾಂತಿ ಆಗುತ್ತಿದೆ.
- ಅದು ಸ್ವಚ್ಚತಾ ಕ್ರಾಂತಿ.
- ಅಶುಚಿತ್ವ ಈ ದೇಶದ ಅತಿ ದೊಡ್ಡ ಸಮಸ್ಯೆಗಳಲ್ಲೊಂದಾಗಿತ್ತು.
- ನಮ್ಮಲ್ಲಿ ಅನಾರೋಗ್ಯಕ್ಕೆ ಅದುವೇ ಬಹು ಮುಖ್ಯವಾದ ಒಂದು ಕಾರಣವಾಗಿತ್ತು.
- ಬಯಲು ಶೌಚಾಲಯದ ಸಮಸ್ಯೆ ಬಗ್ಗೆ ಮಾತನಾಡದಿರುವುದೇ ಕ್ಷೇಮ ಎನ್ನುವ ಪರಿಸ್ಥಿತಿ ಈ ದೇಶದಲ್ಲಿತ್ತು.
- ಬಹುಶ: ಇದನ್ನು ಮನಗಂಡೇ ನಮ್ಮ ಪ್ರಧಾನಿ ಶ್ರೀ ಮೋದಿಜಿಯವರು ಸ್ವಚ್ಛತಾ ಆಂದೋಲನವನ್ನು ತಾವು ಪ್ರಧಾನಿ ಆದ ಕೂಡಲೇ ಜಾರಿಗೇ ತಂದದ್ದು.
*ಈ ಆಂದೋಲನದ ಮೂಲಕ ಈ ದೇಶದಲ್ಲಿ ಸ್ವಚ್ಛತೆಯನ್ನು ಒಂದು ಕ್ರಾಂತಿಯ ರೂಪದಲ್ಲಿ ಜಾರಿಗೊಳಿಸಿದ ಹೆಮ್ಮೆಯ ನಾಯಕ ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರು.
- ನಮ್ಮ ದೇಶದಲ್ಲಿ ಸ್ವಚ್ಛತೆಯ ಬಗ್ಗೆ ಒಂದು ದಿನವನ್ನು ಆಚರಿಸಬೇಕು, ಆ ಮೂಲಕ ಜನಜಾಗೃತಿ ಮೂಡಿಸಬೇಕು ಎನ್ನುವ ಆಲೋಚನೆ ಈ ಆಂದೋಲನದ ಆಂತರ್ಯದಲ್ಲಿರುವುದು.
- ಈಗ ದೇಶಾದ್ಯಂತ ಸ್ವಚ್ಛತಾ ಪಖ್ವಾಡಾ ಆಂದೋಲನ ನಡೆಯುತ್ತಿದೆ.
- ಈ ಮೂಲಕ ನಮ್ಮ ಸಾರ್ವಜನಿಕ ಸ್ಥಳಗಳನ್ನು ಶುಚಿ ಪಡಿಸಿ, ಜನ ಸಾಮಾನ್ಯರಿಗೆ ಸ್ವಚ್ಛತೆಯ ಸಂದೇಶ ನೀಡಲಾಗುತ್ತಿದೆ.
- ಇಂದು ಈ ಆಂದೋಲನದಲ್ಲಿ ತಾವೆಲ್ಲರೂ ಸ್ವಯಂ ಪ್ರೇರಣೆಯಿಂದ ಭಾಗವಹಿಸುತ್ತಿದ್ದೀರಿ.
- ಈ ಶ್ರಮದಾನ ಇಂದಿಗೆ ಮಾತ್ರ ಸೀಮಿತಗೊಳ್ಳಬಾರರದು.
- ಏಕೆಂದರೆ, ಸ್ವಚ್ಛತೆ ಎನ್ನುವುದು ನಮ್ಮ ಬದುಕಿನ ಭಾಗವಾಗಬೇಕು.
- ನಮ್ಮ ಮನೆ, ನಮ್ಮ ಪರಿಸರ, ನಮ್ಮ ಸಮಾಜ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ಧಾರಿ.
- 2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ ಅಭಿಯಾನಕ್ಕೆ ರಾಜಪಥದಲ್ಲಿನಮ್ಮ ಪ್ರಧಾನಿ ಶ್ರೀ ಮೋದಿಜಿಯವರು ಚಾಲನೆ ನೀಡಿದ್ದರು.
- ಆ ಸಂದರ್ಭದಲ್ಲಿ ಖುದ್ದು ಶ್ರೀ ಮೋದಿಜೀಯವರೇ ಮಂದಿರ ಮಾರ್ಗ ಪೊಲೀಸ್ ಠಾಣೆಯಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಿದ್ದರು.
- ಹೀಗೆ ಅಂದು ಆರಂಭವಾದ ಸ್ವಚ್ಛ ಭಾರತ ಅಭಿಯಾನ ಇಂದು ನಮ್ಮಲ್ಲಿ, ನಮ್ಮ ಸಮಾಜದಲ್ಲಿ ಹಲವಾರು ಧನಾತ್ಮಕ ಬದಲಾವಣೆಗಳಿಗೆ ಕಾರಣವಾಗಿದೆ.
- ಈ ಐತಿಹಾಸಿಕ ಆಂದೋಲವನನ್ನು ಮುಂದುವರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮುಂದಿದೆ.