Asian Games 2023 Updates ಭಾರತದ ಯುವ ಶೂಟರ್ ಗಳು ಏಷ್ಯನ್ ಕ್ರೀಡಾಕೂಟದಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಎರಡು ಚಿನ್ನದ ಪದಕ ಹಾಗೂ ಮೂರು ಬೆಳ್ಳಿ ಪದಕಗಳು ಮುತ್ತಿಕ್ಕಿದ್ದಾರೆ.
ಹಾಂಗ್ ಝೌ ಶೂಟಿಂಗ್ ರೇಂಜ್ ನಲ್ಲಿ ಕಳೆದ ಆರು ದಿನಗಳಲ್ಲಿ ಭಾರತ ಒಟ್ಟು 18 ಪದಗಳನ್ನು ತನ್ನ ಕಿಸುಬಿಗೆ ಹಾಕಿಕೊಂಡಿದೆ. ಏಶಿಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತದ ಶೂಟರ್ ಗಳ ಅತ್ಯುತ್ತಮ ಪ್ರದರ್ಶನ ಇದಾಗಿದೆ. 2006ರ ದೋಹಕೂಟದಲ್ಲಿ 16 ಪದಕಗಳನ್ನ ಜಯಗಳಿಸಿದ್ದು.
Asian Games 2023 Updates ಇಲ್ಲಿಯವರೆಗೆ ಶ್ರೇಷ್ಠ ಸಾಧನೆ ಎನಿಸಿಕೊಂಡಿತ್ತು. ಸೆಪ್ಟೆಂಬರ್ 29ರಂದು ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದ ಸ್ಪರ್ಧೆಯು ಭಾರತದ ಶೂಟರ್ ಗಳ ಪಾರಮ್ಯಕ್ಕೆ ವೇದಿಯೋದಗಿಸಿತು. ಪಲಾಕ್ ಗೂಲಿಯಾ ಮತ್ತು ಇಶಾ ಸಿಂಗ್ ಅವರು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿಯ ಪದಕ ಕೊರಲಿಗೇಸಿಕೊಂಡರು. ಮೊದಲ ಎರಡು ಸ್ಥಾನಗಳಿಗೆ ಭಾರತದ ಇಬ್ಬರು ಪ್ರತಿಭೆಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿತ್ತು. 17 ವರ್ಷದ ಫಲಕ್ ಅಂತಿಮವಾಗಿ 242.1 ಪಾಯಿಂಟ್ ಗಳೊಂದಿಗೆ ಚಿನ್ನ ತಮ್ಮದಾಗಿಸಿಕೊಂಡರು. ಈಶ ಸಿಂಗ್ 239.1ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡರು. ಪಾಕಿಸ್ತಾನದ ಕಿಷ್ಮಲಾ ತಲಾತ್ ಕಂಚು ಗೆದ್ದುಕೊಂಡರು.