Congress State Coordinator CN Akmal ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಸ್ಲೀಂ ಹಾಗೂ ದಲಿತರ ಮತ ಪಡೆದು ಇದೀಗ ಅಧಿಕಾರದ ಆಸೆಗಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲಿಸುತ್ತಿರುವುದು ಸೂಕ್ತವಲ್ಲ ಎಂದು ಕಾಂಗ್ರೆಸ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಆರೋಪಿಸಿದ್ದಾರೆ.
ಈ ಸಂಬoಧ ಬುಧವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು ವಿಧಾನಸಭಾ ಸೇರಿದಂತೆ ಲೋಕಸಭಾದವರೆ ಗೂ ಅತಿಹೆಚ್ಚು ಸಂಖ್ಯೆಯಲ್ಲಿ ದಲಿತರು, ಮುಸ್ಲೀಂ ಸಮುದಾಯ ಜೆಡಿಎಸ್‌ಗೆ ಮತ ನೀಡಿ ಬೆಂಬಲಿಸಿದ ಪರಿಣಾಮ ದೇವೇಗೌಡ, ರಾಮಕೃಷ್ಣಹೆಗ್ಡೆ ಹಾಗೂ ಕುಮಾರಸ್ವಾಮಿ ಸೇರಿದಂತೆ ಅನೇಕ ಮಂದಿ ರಾಜ್ಯದಿಂದ ದೆಹಲಿಯ ವರೆಗೂ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿ ಈದ್ಗಾ ಮೈದಾನ ಸಂಬoಧ ದೇವೇಗೌಡರು ಹಾಗೂ ಇಬ್ರಾಹಿಂ ಅವರು ಜಾಗದ ಸಮಸ್ಯೆ ಬಗೆಹರಿ ಸಲು ಯತ್ನಿಸಿದ ಪರಿಣಾಮ ಮುಸ್ಲೀಂ ಜನಾಂಗ ನೆಮ್ಮದಿಯಿಂದಿದೆ ಎನ್ನುವ ಕುಮಾರಸ್ವಾಮಿ ಅವರು ಆ ನಿಟ್ಟಿನಲ್ಲಿ ಮುಸ್ಲೀಂ ಸಮುದಾಯ ಜೆಡಿಎಸ್‌ಗೆ ಮತ ನೀಡಿ ಕೃತಜ್ಞತೆ ಸಲ್ಲಿಸಿದ್ದರೂ ಇದುವರೆಗೂ ಈದ್ಗಾ ಮೈದಾನವು ಗೊಂದಲದ ಗೂಡಾಗಿಯೇ ಉಳಿದಿದೆ. ಎಂದಿದ್ದಾರೆ.
ಜೆಡಿಎಸ್ ಪಕ್ಷ ದಲಿತರು, ಮುಸ್ಲೀಂ ಸಮುದಾಯ ಆಸ್ತಿ ಎಂದುಕೊoಡಿದ್ದಾರೆಯೇ ಎಂದ ಪ್ರಶ್ನಿಸಿದ ಅವರು ದೇವೇಗೌಡರು ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ದಲಿತ, ಮುಸ್ಲಿಂ ಸಮು ದಾಯಗಳು ಬೆಂಬಲಿಸಿ ಸಹಕರಿಸಿದ್ದು ಇದೀಗ ಅಧಿಕಾರದ ಆಸೆಯಿಂದ ಕುಮಾರಸ್ವಾಮಿ ಬಿಜೆಪಿ ಪಕ್ಷಕ್ಕೆ ಬೆಂಬಲಿ ಸಲು ಹೊರಟಿರುವುದು ಖಂಡನೀಯ ಎಂದಿದ್ದಾರೆ.
ಕುಮಾರಸ್ವಾಮಿಯವರು ರಾಜಕೀಯ ದುರುದ್ದೇಶದಿಂದ ಸಮುದಾಯದ ಮತ ಪಡೆದು ಇದೀಗ ದ್ರೋಹ ವೆಸಗುವುದು ಸರಿಯಲ್ಲ. ಪ್ರಸ್ತುತ ಮಾಜಿ ಪ್ರಧಾನಿ ದೇವೇಗೌಡ ಹೆಸರು ಹಾಗೂ ಪಕ್ಷ ನಿರ್ನಾಮಕ್ಕೆ ಕುಮಾರಸ್ವಾಮಿ ಯವರೇ ನೇರ ಕಾರಣವಾಗಿದ್ದು ಕೂಡಲೇ ಅಧಿಕಾರಕ್ಕಾಗಿ ಬಿಜೆಪಿ ಪಕ್ಷ ಸೇರುವ ಬದಲು ಮತ ನೀಡಿದಂತಹ ಸಮುದಾಯಕ್ಕೆ ಪ್ರಾಮಾಣಿಕವಾಗಿರಿ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮುಂದಿನ ಜನ್ಮದಲ್ಲಿ ಮುಸ್ಲೀಂ ಜನಾಂಗದ ವ್ಯಕ್ತಿಯಾಗಿ ಹುಟ್ಟುವೇ ಎಂಬ ಮಾತುಗಳನ್ನಾಡಿದ್ದರು.
Congress State Coordinator CN Akmal ಇದನ್ನು ಕುಮಾರಸ್ವಾಮಿ ತಿಳಿದಿಲ್ಲವೇ. ಇಷ್ಟೆಲ್ಲಾ ಮುಸ್ಲೀಂ ಹಾಗೂ ದಲಿತ ಸಮು ದಾಯವು ಜೆಡಿಎಸ್‌ಗೆ ಬೆಂಬಲಿಸಿದ್ದರೂ ಇದೀಗ ಮುಖ್ಯಮಂತ್ರಿಯಾಗಬೇಕೆನ್ನುವ ಕನಸನ್ನು ಹೊತ್ತುಕೊಂಡು ಬಿಜೆ ಪಿಗೆ ಬೆಂಬಲಿಸಿ ರಾಜಕೀಯ ಬೆಳೆ ಬೇಯಿಸಿಕೊಳ್ಳಲಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.