Friday, April 3, 2026
Friday, April 3, 2026

Sri Ganesh Festival ಪ್ರತಿಷ್ಠಿತ ರಾಮಣ್ಣಶ್ರೇಷ್ಠಿ ಪಾರ್ಕಿನಲ್ಲಿ ಶ್ರೀಗಣೇಶೋತ್ಸವ ಕಾರ್ಯಕ್ರಮಗಳ ಮಾಹಿತಿ

Date:

Sri Ganesh Festival ಶಿವಮೊಗ್ಗ ನಗರದ ರಾಮಣ್ಣ ಶೇಷ್ಠಿ ಪಾರ್ಕ್ ನಲ್ಲಿ ಶ್ರೀ ಸರ್ವಸಿದ್ಧಿ ವಿನಾಯಕ ಸ್ವಾಮಿ ಸೇವಾ ಸಮಿತಿ ವತಿಯಿಂದ 94ನೇ ವರ್ಷದ ಶ್ರೀ ವಿನಾಯಕೋತ್ಸವ ಆಚರಿಸಲಾಗುತ್ತಿದೆ.

ಸೆ. 18ರಂದು ಶ್ರೀ ಸ್ವರ್ಣಗೌರಿ ಅಮ್ಮ ಪ್ರತಿಷ್ಠಾಪಿಸಿದ್ದು. ಆರು ದಿನಗಳ ಪೂಜಾ ಕಾರ್ಯಕ್ರಮದ ನಂತರ ಶ್ರೀ ಸ್ವರ್ಣಗೌರಿ ಅಮ್ಮನನ್ನು ಸೆ. 23ರ ರಾತ್ರಿ 8ಕ್ಕೆ ತುಂಗಾ ನದಿಯಲ್ಲಿ ವಿಸರ್ಜಿಸಲಾಗುವುದು.

ಸೆ. 18ರಂದು ಸಂಜೆ 6ಕ್ಕೆ ಶ್ರೀ ವಿನಾಯಕ ಸ್ವಾಮಿ ಪ್ರತಿಷ್ಠಾಪಿಸಿದ್ದು, ಬೇಲೂರು ಶಿಲ್ಪಕಲಾ ಮಂದಿರದಲ್ಲಿ ಶ್ರೀ ವಿನಾಯಕ ಸ್ವಾಮಿ ವಿಶೇಷ ಅಲಂಕಾರ ಮಾಡಲಾಗಿದೆ. ಶ್ರೀ ವಿನಾಯಕ ಸ್ವಾಮಿ ದೇವಸ್ಥಾನದ ಭವನದಲ್ಲಿ 21 ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನ ಸಂಜೆ ಪ್ರಸಾದ ವಿನಿಯೋಗ ಇರುತ್ತದೆ.
ಪ್ರತಿ ದಿನ ಸಂಜೆ 7.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಅಕ್ಟೋಬರ್ 7ರವರೆಗೂ ಸುಗಮ ಸಂಗೀತ, ಭರತನಾಟ್ಯ, ಜಾನಪದ ನೃತ್ಯ, ಯಕ್ಷಗಾನ, ಹರಿಕಥೆ, ದಾಸವಾಣಿ, ಸವಿನೆನಪು ಹಳೇಯ ಗೀತೆ ಗಾಯನ ಕಾರ್ಯಕ್ರಮ, ಭಕ್ತಿಗೀತೆ, ಕುಚುಪುಡಿ ನೃತ್ಯ, ಭಕ್ತಿಭಾವ ಸಂಗೀತ ಕಾರ್ಯಕ್ರಮವನ್ನು ನಾಡಿನ ಹೆಸರಾಂತ ಕಲಾವಿದರು, ಪ್ರತಿಭಾವಂತರು ನಡೆಸಿಕೊಡಲಿದ್ದಾರೆ.

Sri Ganesh Festival ಅಕ್ಟೋಬರ್ 6 ರಂದು ಬೆಳಗ್ಗೆ 9ಕ್ಕೆ ವಿಶೇಷ ಗಣಹೋಮ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಇರುತ್ತದೆ. ಅ. 7ಕ್ಕೆ ಶನಿವಾರ ಮಧ್ಯಾಹ್ನ ಅನ್ನ ಸಂತರ್ಪಣೆ ಇರುತ್ತದೆ. ಸಂಜೆ 7ಕ್ಕೆ ಶ್ರೀಗುರುಗಳ ಸಾನ್ನಿಧ್ಯದಲ್ಲಿ ಮಹಾಮಂಗಳಾರತಿ ಇರಲಿದೆ. ಅ. 8ರಂದು ಸಂಜೆ 6.30ಕ್ಕೆ ರಾಜಬೀದಿ ಉತ್ಸವ ನಡೆಯಲಿದೆ ಎಂದು ಶ್ರೀ ಸರ್ವಸಿದ್ಧಿ ವಿನಾಯಕ ಸ್ವಾಮಿ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.S. Arun ಸೂಕ್ತ ವಿಲೇವಾರಿಯಾಗದ ಘನತ್ಯಾಜ್ಯ: ಸಾರ್ವಜನಿಕ ಆರೋಗ್ಯ, ಪರಿಸರದ ಮೇಲೆ ಪರಿಣಾಮ- ಡಿ‌.ಎಸ್.ಅರುಣ್

D.S. Arun ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ...

S.N. Channabasappa ಸತ್ತಮೇಲೆಯೂ ಹಗೆತನ ಸಾಧಿಸುವ ವಿಕೃತ ಮನಸ್ಥಿತಿಯನ್ನು ಹಿಂದೂ ಸಮಾಜ‌ ಒಪ್ಪುವುದಿಲ್ಲ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಿವಮೊಗ್ಗ ನಗರದ ಸೂಳೆಬೈಲಿನ ಹಿಂದೂ ರುದ್ರಭೂಮಿಯಲ್ಲಿ ಹತ್ಯೆಯಾದ ಬಾಲಕ...

Karnataka Sahitya Academy ಸಾಹಿತ್ಯ ಅಕಾಡೆಮಿಯಿಂದ ವಿವಿಧ ಪ್ರಕಾರಗಳ ಕೃತಿಗಳ ಪುಸ್ತಕ ಬಹುಮಾನಕ್ಕೆ ಆರ್ಜಿ ಆಹ್ವಾನ

Karnataka Sahitya Academy ಕರ್ನಾಟಕ ಸಾಹಿತ್ಯ ಅಕಾಡೆಮಿಯು 2025 ನೇ ವರ್ಷದಲ್ಲಿ...

Karnataka University ನಾಯಕತ್ವ ಗುಣ ರೂಪುಸುವಲ್ಲಿ ವಿದ್ಯಾರ್ಥಿ ಸಂಸತ್ತು ಸಹಕಾರಿ-ಪ್ರೊ.ಜೆ.ಎಂ.ನಾಗಯ್ಯ

Karnataka University ಪ್ರಜಾಪ್ರಭುತ್ವದ ಸಬಲತೆಗೆ ಸಮರ್ಥ ನಾಯಕತ್ವ ಅಗತ್ಯ. ಪರಿಣಾಮಕಾರಿಯಾಗಿ ವಿಷಯ...