Sunday, December 14, 2025
Sunday, December 14, 2025

Rovering & Rangering ರೋವರಿಂಗ್& ರೇಂಜರಿಂಗ್ ನಿಂದ ಸದಾ ಕ್ರಿಯಾಶೀಲತೆ-ಪಿ.ಜಿ.ಆರ್.ಸಿಂಧ್ಯಾ

Date:

Rovering & Rangering ಪ್ರತಿನಿತ್ಯದ ಬದುಕಿನಲ್ಲಿ ನಾವು ಎಷ್ಟೆ ಸಾಧನೆ ಮಾಡಿದರು, ರೋವರಿಂಗ್ ಮತ್ತು ರೇಂಜರಿoಗ್‌ನಲ್ಲಿ ತರಬೇತಿ ಪಡೆದರೆ ನಾವುಗಳು ಪರಿಪೂರ್ಣ ವ್ಯಕ್ತಿಯಾಗಿ ನಮ್ಮ ಜೀವನವನ್ನು ಮತ್ತು ಜೀವನ ಶೈಲಿಯನ್ನು ಉತ್ತಮವಾಗಿ ಬದಲಿಸಬಹುದು.

ರೋವರಿಂಗ್ ಮತ್ತು ರೇಂಜರಿoಗ್ ಮಕ್ಕಳಿಗೆ ಮಾತ್ರ ಸೀಮಿತವಾಗಿರದೆ ವಯಸ್ಕರೂ ತಿಳಿದುಕೊಳ್ಳುವ ಅಂಶಗಳು ಸಾಕಷ್ಟಿದೆ. ಸ್ಕೌಟಿಂಗ್ ಮತ್ತು ಗೈಡಿಂಗ್‌ನಲ್ಲಿ ಭಾಗವಹಿಸಿ ಅದರ ಮೌಲ್ಯವನ್ನು ಸರಿಯಾಗಿ ಅರ್ಥೈಸಿಕೊಂಡರೆ ಖಿನ್ನತೆ ದೂರವಾಗುತ್ತದೆ, ಹೊಸ ಹೊಸ ವಿಚಾರಗಳು ತಿಳಿಯುತ್ತದೆ ಮತ್ತು ಸದಾ ಕ್ರಿಯಾಶೀಲರಾಗಿರಬಹುದಾಗಿದೆ. ಆದ್ದರಿಂದ ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿ ತರಬೇತಿ ಪಡೆಯುವುದು ಅತ್ಯಂತ ಅವಶ್ಯಕವೆಂದು ಕರ್ನಾಟಕ ರಾಜ್ಯ ಸಂಸ್ಥೆಯ ಮುಖ್ಯ ಆಯುಕ್ತರಾದ ಮಾನ್ಯ ಶ್ರೀ ಪಿ.ಜಿ.ಆರ್.ಸಿಂಧ್ಯ ರವರು ಡಿಡಿಪಿಯು ಕಚೇರಿಯ ಸಭಾಂಗಣದಲ್ಲಿ ಉಪನ್ಯಾಸಕ/ಕಿಯರಿಗೆ ಆಯೋಜಿಸಿದ ಒಂದು ದಿನದ ರೋವರಿಂಗ ರೇಂಜರಿoಗ್ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾನ್ಯ ಶ್ರೀ ಬಿ. ಕೃಷ್ಣಪ್ಪ ರವರು ಮಾತನಾಡಿ ಇಷ್ಟೊಂದು ಸಂಖ್ಯೆಯಲ್ಲಿ ತಾವೆಲ್ಲ ಬಂದಿರುವುದು ತುಂಬಾ ಖುಷಿಯಾಗುತ್ತಿದೆ ಈ ಶಿಬಿರದ ಲಾಭ ಪಡೆದುಕೊಂಡು ತಮ್ಮ ಕಾಲೇಜಿನ ಮಕ್ಕಳಿಗೆ ಈ ಶಿಕ್ಷಣವನ್ನು ನೀಡುವುದರಿಂದ ಚಂಚಲವಾಗಿರುವoತಹ ಮಕ್ಕಳು ಕಾರ್ಯಪ್ರವೃತ್ತರಾಗುತ್ತಾರೆ ಅಲ್ಲದೆ ಗೆಲುವಿನಿಂದ ಕೂಡಿ ಸೇವಾ ಮನೋಭಾವವನ್ನು ತಮ್ಮಲ್ಲಿ ಆಳವಡಿಸಿಕೊಳ್ಳುತ್ತಾರೆ ಆದ್ದರಿಂದ ಶಿವಮೊಗ್ಗದ ಪ್ರತಿಯೊಂದು ಕಾಲೇಜಿನಲ್ಲಿ ಘಟಕವನ್ನು ಖಡ್ಡಾಯವಾಗಿ ಪ್ರಾರಂಬಿಸಿಬೇಕೆoದು ತಿಳಿಸುತ್ತಾ ಅಬ್ಯರ್ಥಿಗಳನ್ನು ಕಳಿಸಿದಂತಹ ಕಾಲೇಜಿನ ಪ್ರಾಂಶುಪಾಲರಿಗೆ ಧನ್ಯವಾದ ತಿಳಿಸಿದರು. ಇನ್ನೊಬ್ಬ ಅತಿಥಿಯಾಗಿ ಬಂದoತಹ ಎನ್.ಇ.ಎಸ್ ಸಂಸ್ಥೆಯ ಅಕೆಡೆಮಿಕ್ ಆಡ್ವಾಯ್ಸರ್ ಆದ ಶ್ರೀ ಎ.ಎನ್.ರಾಮಚಂದ್ರ ರವರು ಸಹ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಈ ಸಮಾರಂಭದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಸ್ಕೌಟ್ ಆಯುಕ್ತರಾದ ಕೆ.ಪಿ.ಬಿಂದುಕುಮಾರ ರವರು ಮಾತನಾಡುತ್ತಾ ಮಕ್ಕಳಿಗೆ ಅನೇಕ ಲಾಭಗಳು ಸ್ಕೌಟಿಂಗ್ ಗೈಡಿಂಗಿನಿoದ ಸಿಗುತ್ತದೆ ಅಲ್ಲದೆ ಅವರುಗಳು ಶಾರೀರಿಕವಾಗಿ ಮಾನಸಿಕವಾಗಿ ಪಾರಮಾರ್ಥಿಕವಾಗಿ ಬೆಳೆಯುವಲ್ಲಿ ನಾಯಕತ್ವವನ್ನು ತೆಗೆದುಕೊಳ್ಳುವಲ್ಲಿ ಅನುಕೊಲವಾಗುತ್ತದೆ. ಮಕ್ಕಳಿಗೆ ರಾಜ್ಯ ಪಾಲರಿಂದ ರಾಜ್ಯ ಪ್ರಶಸ್ತಿಯು ಸಿಗುತ್ತದೆ ಅಲ್ಲದೆ ರಾಜ್ಯ, ರಾಷ್ಟç, ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಿಗೆ ಭಾಗವಹಿಸಲು ಅವಕಾಶ ದೊರಿಯುತ್ತದೆ ಎಂದು ತಿಳಿಸಿದರು.

Rovering & Rangering ಸ್ಕೌಟಿಂಗ್‌ನ ಪ್ರಾರಂಭ, ಇತಿಹಾಸ, ಮೂಲತತ್ವಗಳು, ವಿಭಾಗಗಳು, ಮಕ್ಕಳ ಹಾಗೂ ವಯಸ್ಕರುಗಳ ಪ್ರಗತಿಪರ ಶಿಕ್ಷಣಗಳ ಬಗ್ಗೆ ಮಾಹಿತಿ ನೀಡಲಾಯಿತು. ಈ ಶಿಬಿರದ ನಾಯಕತ್ವವನ್ನು ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭಾರತಿ ಡಾಯಸ ರವರು ನಿರ್ವಹಿಸಿದರು ಸಂಪನ್ಮೂಲ ವ್ಯಕ್ತಿಗಳಾಗಿ ಎಂ.ಗಣಪತಿ, ಹೆಚ್.ಶಿವಶಂಕರ, ಎಂ.ಹೇಮಲತಾ ರವರು ಕಾರ್ಯನಿರ್ವಹಿಸಿದರು. ಜಿಲ್ಲೆಯ ೮೮ ಉಪನ್ಯಾಸಕ ಉಪನ್ಯಾಸಕಿಯರು ಭಾಗವಹಿಸಿದ್ದರು. ಜಿಲ್ಲಾ ಗೈಡ್ ಆಯುಕ್ತರಾದ ಶಕುಂತಲಾ ಚಂದ್ರಶೇಖರ್, ರಾಜ್ಯ ಉಪಾಧ್ಯಕ್ಷರಾದ ಭಾರತಿ ಚಂದ್ರಶೇಖರ್, ಜಿಲ್ಲಾ ಖಜಾಂಚಿ ಚೂಡಾಮಣಿ ಇ ಪವಾರ, ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ್, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ, ಪ್ರಾಚಾರ್ಯರ ಸಂಘದ ಅಧ್ಯಕ್ಷರು, ನಿವೃತ್ತ ಡಿಎಪ್‌ಒ ಮಂಜುನಾಥ, ಮಲ್ಲಿಕಾರ್ಜುನ ಕಾನೂರು ಸೇವಾ ರೋರ‍್ಸ್ ರೇಂರ‍್ಸ್ಗಳು ಹಾಗೂ ಉಳಿದ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...