Morocco Earthquake ಉತ್ತರ ಆಫ್ರಿಕಾದ ದೇಶ ಮೊರಾಕ್ಕೊದಲ್ಲಿ ಸೆಪ್ಟೆಂಬರ್ 8 ರಂದು ಪ್ರಬಲ ಭೂಕಂಪನ ಸಂಭವಿಸಿದೆ. 1200 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. 672 ಜನ ಗಾಯಗೊಂಡಿದ್ದಾರೆ. 205 ಜನರ ಸ್ಥಿತಿ ಚಿಂತಾ ಜನಕವಾಗಿದೆ. ಅಪಾರ ಪ್ರಮಾಣದಲ್ಲಿ ಆಸ್ತಿ ಹಾನಿ ಆಗಿದೆ ಎಂದು ಸರ್ಕಾರಿ ಸ್ವಾಮ್ಯದ ಟಿವಿ ವರದಿ ನೀಡಿದೆ. ಭೀಕರ ಭೂಕಂಪನದಿಂದ ರಾಜಧಾನಿ ರಬತ್, ಮಾರಕೇಶ್, ಕರಾವಳಿಯ ಕಾಸಾ ಬ್ಲಾಂಕಾ ನಗರಗಳಲ್ಲಿ ದೊಡ್ಡ ಮಟ್ಟದಲ್ಲಿ ಹಾನಿಯಾಗಿದೆ. ಅಟ್ಲಾಸ್ ಪರ್ವತ ಶ್ರೇಣಿಯಲ್ಲಿ ರಾತ್ರಿ 11.11 ಕ್ಕೆ ಸಂಭವಿಸಿದ ಈ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪನದಲ್ಲಿ 7.2 ಎಂದು ದಾಖಲಾಗಿದೆ ಎಂದು ಅಮೆರಿಕದ ಭೂ ವಿಜ್ಞಾನ ಸರ್ವೇಕ್ಷಣಾಲಯ ತಿಳಿಸಿದೆ. ಮಾರಕೇಶ್ ಪಟ್ಟಣದಿಂದ ನೈರುತ್ಯಕ್ಕೆ 71 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಗುರುತಿಸಲಾಗಿದೆ.
Morocco Earthquake ಇದು 18.5 ಕಿಲೋಮೀಟರ್ ಕಾಲದಲ್ಲಿ ಇತ್ತು ಎಂದು ಯುಎಸ್ ಜಿಎಸ್ ಹೇಳಿದೆ. ಪ್ರಬಲ ಭೂಕಂಪನ ಸಂಭವಿಸಿದ 19 ನಿಮಿಷಗಳ ಬಳಿಕ ಮರು ಕಂಪನಗಳು ವರದಿಯಾಗಿದೆ. ಇದು 4.9 ತೀವ್ರತೆಯಾದಾಗಿತ್ತು ಎಂದು ಯು ಎಸ್ ಜಿ ಎಸ್ ತಿಳಿಸಿದೆ