Happy Teachers Day ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರ ದ ಸ್ಥಾನವನ್ನು ಗುರುವಿಗೆ ನೀಡುತ್ತಾರೆ. ಉತ್ತಮವಾದ ಶಿಕ್ಷಣ ನೀಡುವುದರ ಜೊತೆಗೆ, ಶಿಕ್ಷಣದ ಅರ್ಥವನ್ನು ತಿಳಿಸುತ್ತಾರೆ. ಇಡೀ ಪ್ರಪಂಚದಲ್ಲಿ ವ್ಯಕ್ತಿಯ ಬದುಕನ್ನ ಬೆಳಗುವವರು ಶಿಕ್ಷಕರೇ ಆಗಿರುತ್ತಾರೆ.
ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಇಡೀ ದೇಶದಾದ್ಯಂತ ಆಚರಿಸಲಾಗುತ್ತದೆ. ಮೊದಲ ಉಪರಾಷ್ಟ್ರಪತಿ ಮತ್ತು ಸ್ವತಂತ್ರ ಭಾರತದ ಎರಡನೇ ರಾಷ್ಟ್ರಪತಿಗಳಾದ ಡಾ. ರಾಧಾಕೃಷ್ಣನ್ ಹುಟ್ಟು ಹಬ್ಬದ ನೆನಪಿಗಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂದರೆ ಆತನ ಹಿಂದೆ ಪ್ರಮುಖ ಪಾತ್ರ ವಹಿಸುವವರು ಗುರುಗಳೇ ಆಗಿರುತ್ತಾರೆ.
ಪ್ರತಿಯೊಬ್ಬರಿಗೂ ಶಿಕ್ಷಣ ಹೇಗೆ ಮುಖ್ಯವೋ ಅದೇ ರೀತಿ ಶಿಕ್ಷಣ ನೀಡುವ ಗುರುಗಳು ಅಷ್ಟೇ ಮುಖ್ಯವಾಗಿರುತ್ತಾರೆ.
ವ್ಯಕ್ತಿಯ ಬದುಕಿನ ದೀಪವಾಗಿರುವ ಶಿಕ್ಷಕರಿಗೆ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನಾಗಿ ಇಡಿ ದೇಶದಾದ್ಯಂತ ಆಚರಿಸಲಾಗುತ್ತದೆ. ದಿನದಂದು ಪ್ರತಿಯೊಬ್ಬರು ತಮ್ಮ ಗುರುಗಳನ್ನು ನೆನೆದು ತಮಗೆ ಶಿಕ್ಷಣ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತಾರೆ.
Happy Teachers Day ಕೆ ಲೈವ್ ನ್ಯೂಸ್ ಚಾನಲ್ ವತಿಯಿಂದ ನಾಡಿನ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು…