Kannada Sahitya Parishat ಎರಡು ಸಾವಿರ ವರ್ಷದ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯನ್ನು
ಮಾತನಾಡುವ, ವ್ಯವಹರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು
ವಿಷಾದನೀಯ ಸಂಗತಿ. ಕನ್ನಡ ಭಾಷೆ ಉಳಿಸಲು ನಮ್ಮ ಮಕ್ಕಳಿಗೆ ಭಾಷಾಭಿ ಮಾನವನ್ನು
ಇಂದಿನಿಂದಲೇ ಬೆಳಸಬೇಕಾಗಿದೆ ಎಂದು ಶಿಕ್ಷಣ ಇಲಾಖೆಯ ವಿಶ್ರಾಂತ ಜಂಟಿ
ನಿರ್ದೇಶಕರಾದ ಸಿ.ವಿ. ತಿರುಮಲರಾವ್ ಹೇಳಿದರು.
ಅವರು ಶುಕ್ರವಾರ ಚೆನ್ನಗಿರಿ ಪಟ್ಟಣದ ನಿವೃತ್ತ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಕನ್ನಡ
ಸಾಹಿತ್ಯ ಪರಿಷತ್ ಹಾಗೂ ಗಂಗಾ ಪ್ಯಾರ ಮೆಡಿಕಲ್ ಕಾಲೇಜು ಸಂಯುಕ್ತ ಆಶ್ರಯದಲ್ಲಿ
ಹಮ್ಮಿಕೊಂಡಿದ್ದ ಶ್ರಾವಣ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತರೆ
ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ ಮಾತೃಭಾಷೆ ಮರೆಯಬಾರದು.
ಬೆಂಗಳೂರಿನಲ್ಲಿಯೇ ಕನ್ನಡ ಭಾಷೆ ಹುಡುಕುವ ಪರಿಸ್ಥಿತಿ ಇದ್ದು, ಅನ್ಯ ರಾಜ್ಯದವರು ಕನ್ನಡ
ಮಾತನಾಡದೆ ಅವರದ್ದೇ ಭಾಷೆಯಲ್ಲಿ ವ್ಯವಹರಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಿದಾಗ
ಮಾತ್ರ ನಮ್ಮ ಕನ್ನಡಭಾಷೆ ಉಳಿಯಲಿದೆ ಎಂದರು.
ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಯು.ಚನ್ನಬಸಪ್ಪ ಮಾತನಾಡಿ, ಕಸಾಪ
ಶ್ರಾವಣ ಮಾಸದ ಕವಿಗೋಷ್ಠಿ ನಡೆಸುವ ಮೂಲಕ ಯುವ ಕವಿಗಳನ್ನು ಆಹ್ವಾನಿಸಿ ಅವರ
ಕವಿತೆ ಪ್ರಸ್ತುತ ಪಡಿಸಲಾಗುತ್ತಿದೆ ಎಂದರು.
Kannada Sahitya Parishat ತಾಲೂಕು ಕಸಾಪ ಅಧ್ಯಕ್ಷ ಎಲ್.ಜಿ.ಮಧು
ಕುಮಾರ್, ಚನ್ನಗಿರಿ ಕಸಬಾ ಹೋಬಳಿ ಘಟಕದ ಅಧ್ಯಕ್ಷ ಜಿ.ಚಿನ್ನಸ್ವಾಮಿ, ಗಂಗಾ ಪ್ಯಾರಾ
ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಬಸವನಗೌಡ, ಲೋಕೇಶ್ವರಯ್ಯ, ಪ್ರಭಾಕರ್,
ಬಿ.ಈ.ಸಿದ್ದಪ್ಪ ಹಾಜರಿದ್ದರು.