Saturday, December 6, 2025
Saturday, December 6, 2025

Shivamogga Dasara Festival ಜಿಲ್ಲಾ ದಸರಾ‌ ಕ್ರೀಡಾಕೂಟಕ್ಕೆ ತಾಲ್ಲೂಕು‌ ಮಟ್ಟದ ಆಯ್ಕೆ ಸ್ಪರ್ಧಾ ಮಾಹಿತಿ

Date:

Shivamogga Dasara Festival ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2023-24 ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಆಯ್ಕೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ದಿ:3/9/2023 ರಂದು ಸೊರಬ ತಾಲೂಕು ಕ್ರೀಡಾಂಗಣ, ದಿ:7/9/2023 ರಂದು ಹೊಸನಗರ ತಾಲೂಕು ಕ್ರೀಡಾಂಗಣ, ದಿ:10/9/2023 ರಂದು ಭದ್ರಾವತಿ ವಿ.ಐ.ಎಸ್.ಎಲ್ ಕ್ರೀಡಾಂಗಣ ಮತ್ತು ಸಾಗರ ನೆಹರೂ ಮೈದಾನ, ದಿ:22/9/2023 ರಂದು ಶಿವಮೊಗ್ಗ ನೆಹರೂ ಕ್ರೀಡಾಂಗಣ, ದಿ:24/9/2023ರಂದು ಶಿಕಾರಿಪುರ ತಾಲೂಕು ಕ್ರೀಡಾಂಗಣ, ದಿ:30/9/2023 ರಂದು ತೀರ್ಥಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ.

ಅಥ್ಲೇಟಿಕ್ಸ್, ವಾಲಿಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್ ಸ್ಪರ್ಧೆಗಳನ್ನು ಮಾತ್ರ ಏರ್ಪಡಿಸಲಾಗಿದೆ.

ಆಯಾ ತಾಲೂಕಿನ ಕ್ರೀಡಾಪಟುಗಳು ಆಯಾ ತಾಲೂಕಿನ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ. ಭಾಗವಹಿಸುವ ಸಮಯದಲ್ಲಿ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು. ಗುಂಪು ಸ್ಪರ್ಧೆಗಳನ್ನೇರ್ಪಡಿಸಲು ಕನಿಷ್ಠ ೪ ತಂಡಗಳು ಇರಬೇಕು, ಇಲ್ಲದಿದ್ದಲ್ಲಿ ಆಯ್ಕೆ ನಡೆಸಿ ಮುಂದಿನ ಹಂತಕ್ಕೆ ಕಳುಹಿಸಲಾಗುವುದು. ಒಬ್ಬರಿಗೆ ಎರಡು ವೈಯುಕ್ತಿಕ ಹಾಗೂ ಒಂದು ಗುಂಪು ಸ್ಫರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.

Shivamogga Dasara Festival ಆಸಕ್ತ ಕ್ರೀಡಾಪಟುಗಳು ಆಯಾ ದಿನಾಂಕಗಳoದು ಆಯಾ ತಾಲೂಕಿನ ಕ್ರೀಡಾಂಗಣದಲ್ಲಿ ಬೆಳಗ್ಗೆ 10 ರೊಳಗಾಗಿ ಹಾಜರಿದ್ದು, ಸಂಬ0ಧಪಟ್ಟವರಲ್ಲಿ ವರದಿ ಮಾಡಿಕೊಂಡು ಹೆಸರು ನೊಂದಾಯಿಸಿಕೊಳ್ಳುವ0ತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...