Sunday, December 7, 2025
Sunday, December 7, 2025

Uttaradi Mutt ಮಾತು ಮತ್ತು ಮನಸ್ಸು ಬೆಣ್ಣೆಯಂತಿರಬೇಕು- ಶ್ರೀಸತ್ಯಾತ್ಮ ತೀರ್ಥರು

Date:

Uttaradi Mutt ಇನ್ನೊಬ್ಬರ ದುಃಖವನ್ನು ಸಹಿಸಲಾಗದ ಮತ್ತು ದುಃಖವನ್ನು ಕೊಡದ ವ್ಯಕ್ತಿಗಳ ಮನಸ್ಸು ದೇವರಿಗೆ ಬಹಳ ಪ್ರಿಯಕರ. ಮಾತು ಮತ್ತು ಮನಸ್ಸು ಬೆಣ್ಣೆಯಂತೆ ಇರಬೇಕು ಎಂದು ಉತ್ತರಾದಿ ಮಠಾಧೀಶರಾದ ಶ್ರೀಸತ್ಯಾತ್ಮ ತೀರ್ಥರು ಹೇಳಿದರು.

ಮಂಗಳವಾರ ಸಂಜೆ ತಮ್ಮ 28ನೇ ಚಾತರ‍್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಶ್ರೀಸತ್ಯಾತ್ಮ ತೀರ್ಥರು ಶ್ರೀಪಾದಂಗಳವರ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.

ಕೆನೆ ಮೊಸರನ್ನು ಮಥನ ಮಾಡಿದಾಗ ಬೆಣ್ಣೆ ಬರುತ್ತದೆ. ಅದೇರೀತಿ ವೇದಗಳೆಂಬ ಕ್ಷೀರಸಾಗರವನ್ನು ಮಥನ ಮಾಡಿ ಬ್ರಹ್ಮಸೂತ್ರಗಳನ್ನು ದೇವರು ನಮಗೆ ಕೊಟ್ಟಿದ್ದಾನೆ. ಇಂತಹ ತತ್ವಜ್ಞಾನದಿಂದ ಅನಂತ ಸುಖವಿದೆ. ಆದರೆ ಅದನ್ನೂ ಹೇಗಾದರೂ ಮಾಡಿಕೊಳ್ಳುವುದಿಲ್ಲ. ಎಲ್ಲ ಶಾಸ್ತ್ರಗಳು ಅಮೃತ ಕಲಶಗಳಿದ್ದಂತೆ. ಎಲ್ಲರಿಗೂ ಸುಲಭವಾಗಿರುವುದು ಕಷ್ಟ. ದೇವರು ಹೇಳಿದ ರೀತಿಯಲ್ಲಿ ನಾವು ಮಾಡಿಕೊಳ್ಳಬೇಕು ಎಂದರು.

ಅನೇಕ ಸಂಧರ್ಭಗಳಲ್ಲಿ ದೇವರಲ್ಲಿ ದೋಷವಿದೆ ಎಂಬಂತೆ ಕಾಣುತ್ತದೆ. ಅದನ್ನೇ ಸತ್ಯವೆಂದು ಭಾವಿಸಿಬಿಟ್ಟರೆ ಯಾವ ಪ್ರಯೋಜನ ಇಲ್ಲ. ಅದರಿಂದ ತಮಸ್ಸಾಧನ ಆಗುತ್ತದೆ. ಹೀಗೆ ಆಗಬಾರದು ಎಂದರೆ ಶ್ರೀಮದಾಚರ‍್ಯರ (ಮಧ್ವಾಚರ‍್ಯರು) ಮುಖೇನ ನಾವು ಶಾಸ್ತ್ರಗಳನ್ನು ನೋಡಬೇಕು. ಆಚರ‍್ಯರು ಮಥನ ಮಾಡಿ ನಮಗೆ ಬೆಣ್ಣೆಯಂತೆ ಶುದ್ಧವಾದ, ಸತ್ಯವಾದ ಜ್ಞಾನವನ್ನು ನೀಡಿದ್ದಾರೆ ಎಂದರು.

Uttaradi Mutt ಬೆಂಗಳೂರಿನ ಶ್ರೀ ಜಯತರ‍್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚರ‍್ಯ, ಶ್ರೀಮಠದ ದಿವಾನರಾದ ಶಶಿ ಆಚಾರ್ಯರು ಚಾತರ‍್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚರ್ಯ ಪಂಡಿತರಾದ ನವರತ್ನ ಶ್ರೀನಿವಾಚರ‍್ಯ, ನವರತ್ನ ಪುರುಷೋತ್ತಮಾಚಾರ್ಯ ರಘೂತ್ತಮಾಚರ‍್ಯ ಸಂಡೂರು, ಅನಿಲ್ ರಾಮಧ್ಯಾನಿ, ಮುರಳಿ, ಧೃವಾಚಾರ್, ಗೋಪಿನಾಥ ನಾಡಿಗ್, ಗುರುರಾಜ ಕಟ್ಟಿಘಿ ಮೊದಲಾದವರಿದ್ದರು.

ಚಾತುರ್ಮಾಸ್ಯ ಸಭಾ ಮಂಟಪದಲ್ಲಿ ಮಂಗಳವಾರ ಋಗ್ವೇದ ಹಾಗೂ ಬುಧವಾರ ಯಜರ‍್ವೇದ ನಿತ್ಯ ಮತ್ತು ನೂತನ ಉಪಾರ‍್ಮಗಳು ನೆರವೇರಿದವು. ನೂರಾರು ಜನರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...