Sunday, April 20, 2025
Sunday, April 20, 2025

Rakshabandhan Festival ರಕ್ಷಾ ಬಂಧನ ಕೇವಲ ಆಚರಣೆಯಲ್ಲ. ಸಹೋದರತ್ವದ ಶಾಶ್ವತ ಬಂಧದ ಪ್ರತೀಕ

Date:

Rakshabandhan Festival ರಕ್ಷಾ ಬಂಧನವು ಹಿಂದೂ ಸಮುದಾಯದ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿದೆ.

ಪ್ರತಿ ಹಬ್ಬಕ್ಕೂ ಒಂದೊಂದು ವಿಶೇಷತೆ ಇರುತ್ತದೆ. ಹಬ್ಬಗಳ ಆಚರಣೆಗೆ ಇತಿಹಾಸವೂ ಇರುತ್ತದೆ. ರಾಖಿ ಹಬ್ಬ ಅಂತಲೂ ಕರೆಸಿಕೊಳ್ಳುವ ರಕ್ಷಾಬಂಧನಕ್ಕೆ ತನ್ನದೇ ಆದ ಮಹತ್ವವಿದೆ. ಶ್ರಾವಣ ಮಾಸದ ಹುಣ್ಣಿಮೆಯ ಆಸುಪಾಸಿನಲ್ಲಿ ಈ ಹಬ್ಬ ಬರುತ್ತದೆ.

ಈ ಹಬ್ಬಕ್ಕೆ ಸಂಬಂಧಿಸಿದಂತೆ ಮಹಾಭಾರತದಲ್ಲಿ ಒಂದು ಕಥೆಯೂ ಇದೆ. ಶ್ರೀ ಕೃಷ್ಣನು ಸುದರ್ಶನ ಚಕ್ರವನ್ನ ಬಳಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ತನ್ನ ಬೆರಳನ್ನ ಕತ್ತರಿಸಿಕೊಳ್ಳುತ್ತಾನೆ. ಇದನ್ನು ಕಂಡ ದ್ರೌಪದಿ ತನ್ನ ಸೀರೆಯಿಂದ ಬಟ್ಟೆಯ ತುಂಡನ್ನು ಹರಿದು ಶ್ರೀ ಕೃಷ್ಣನ ಕೈ ಬೆರಳಿಗೆ ಸುತ್ತುತ್ತಾಳೆ. ಇವರ ಈ ಕಾಳಜಿಯ ಕಾರಣಕ್ಕಾಗಿ ಶ್ರೀ ಕೃಷ್ಣ ದ್ರೌಪದಿಯನ್ನ ಸಹೋದರಿಯನ್ನಾಗಿ ಸ್ವೀಕರಿಸಿ, ಆಕೆಯನ್ನು ರಕ್ಷಿಸುವ ಭರವಸೆ ನೀಡಿದನು. ಸಹೋದರ ಸಹೋದರಿಯರ ನಡುವಿನ ಪ್ರೀತಿ ವಾತ್ಸಲ್ಯದ ಪ್ರತೀಕವಾಗಿ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ.

ಸಹೋದರ ಮತ್ತು ಸಹೋದರಿಯ ನಡುವಿನ ಸಂಬಂಧವನ್ನು ಗೌರವಿಸುವ ದಿನವೂ ಇದಾಗಿದೆ. ಇಡೀ ವರ್ಷ ಸಹೋದರ ಸಹೋದರಿಯರೊಂದಿಗೆ ಜಗಳ ಮಾಡುತ್ತಾ, ಒಬ್ಬರ ಮೇಲೆ ಇನ್ನೊಬ್ಬರು ದೂರುಗಳನ್ನು ನೀಡುತ್ತಾ ದಿನ ಕಳೆಯುವ ಸಹೋದರ ಸಹೋದರಿಯರು ಈ ದಿನದಂದು ಸುಂದರವಾದ ಆರತಿತಟ್ಟೆಯನ್ನು ಅಲಂಕರಿಸಿ, ರಾಕಿಯನ್ನು ಸಿದ್ದಪಡಿಸಿ , ತನ್ನ ಪ್ರೀತಿಯ ಸಹೋದರರಿಗೆ ರಾಖಿ ಕಟ್ಟಿ ಸಿಹಿ ತಿನ್ನಿಸಿ ಸಂಭ್ರಮಿಸುತ್ತಾಳೆ. ರಾಕಿ ರಕ್ಷಣೆಯ ಸಂಕೇತ. ಸಹೋದರಿ ರಾಖಿ ಕಟ್ಟುವ ಮೂಲಕ ತನ್ನ ರಕ್ಷೆಯನ್ನು ಮಾಡುವಂತೆ ಸಹೋದರನಲ್ಲಿ ಕೇಳಿಕೊಳ್ಳುತ್ತಾಳೆ. ಹೀಗೆ ರಾಖಿ ಕಟ್ಟಿದ ಸಹೋದರಿಗೆ, ಸಹೋದರನಿಂದ ಉಡುಗೊರೆಯು ದೊರೆಯುತ್ತದೆ.

ಕೇವಲ ಒಡಹುಟ್ಟಿದ ಸಹೋದರ ಸಹೋದರಿಯರಲ್ಲದೆ, ಮನಃಪೂರ್ವಕವಾಗಿ ಸಹೋದರ ನೆಂದು ಕರೆಯುವ ಪ್ರತಿಯೊಬ್ಬ ತಂಗಿಯೂ ತನ್ನ ಸಹೋದರನಿಗೆ ರಾಖಿ ಕಟ್ಟುವುದು ಈ ಹಬ್ಬದ ವಿಶೇಷ.

ಈ ಹಬ್ಬವು ಒಡಹುಟ್ಟಿದವರ ನಡುವಿನ ಬಾಂಧವ್ಯವನ್ನು ಬಲಪಡಿಸುವುದು ಮಾತ್ರವಲ್ಲದೆ ಕುಟುಂಬದಲ್ಲಿ ಏಕತೆ, ಪ್ರೀತಿ ಮತ್ತು ಗೌರವದ ಭಾವನೆಯನ್ನು ಬೆಳೆಸುತ್ತದೆ.

ಇದು ಯಾವುದೇ ಸಂಬಂಧದಲ್ಲಿ ಅಗತ್ಯವಾದ ನಿಷ್ಠೆ, ನಂಬಿಕೆ ಮತ್ತು ಬೆಂಬಲದ ಮೌಲ್ಯಗಳ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ.

ಇತ್ತೀಚಿನ ದಿನಗಳಲ್ಲಿ,ಬಾಂಗ್ಲಾದೇಶ ಭಾರತ, ನೇಪಾಳ, , ಮತ್ತು ಪಾಕಿಸ್ತಾನ ಸೇರಿದಂತೆ ಪ್ರಪಂಚದ ಅನೇಕ ಭಾಗಗಳಲ್ಲಿ ರಕ್ಷಾ ಬಂಧನವು ಜನಪ್ರಿಯ ಹಬ್ಬವಾಗಿದೆ. ಸಹೋದರ ಸಹೋದರಿಯರ ನಡುವೆ ಪ್ರೀತಿ ವಾತ್ಸಲ್ಯ ಹಿಮ್ಮಡಿಗೊಳಿಸಲು ಈ ಹಬ್ಬ ಸಹಕಾರಿ.

Rakshabandhan Festival ನಮ್ಮ ದೇಶ ಕಾಯುವ ಸೈನಿಕರಿಗೆ ಗಡಿಯ ಆಸುಪಾಸಿನಲ್ಲಿರುವ ಹೆಣ್ಣು ಮಕ್ಕಳು ರಾಖಿ ಕಟ್ಟಿ ಸಿಹಿ ತಿನ್ನಿಸಿ ನಮ್ಮನ್ನು ಶತ್ರುಗಳಿಂದ ರಕ್ಷಿಸುತ್ತಿರುವ ಸೈನಿಕರಿಗೆ ಹೃದಯಪೂರ್ವಕವಾಗಿ ಅಭಿನಂದಿಸುತ್ತಾರೆ.

ಇನ್ನು ಪ್ರತಿ ರಾಜ್ಯದಲ್ಲಿಯೂ ಈ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ರಾಜಸ್ಥಾನ ಮಹಾರಾಷ್ಟ್ರ ರಾಜ್ಯಗಳಲ್ಲಿ ಸಹೋದರಿಯರು ಒಬ್ಬರಿಗೊಬ್ಬರು ರಾಖಿ ಕಟ್ಟುವ ಮೂಲಕ ತಮ್ಮವರ ರಕ್ಷಣೆ ಮಾಡುವುದಾಗಿ ಪ್ರತಿಜ್ಞೆ ಮಾಡುತ್ತಾರೆ.

ಇನ್ನೂ ಕೆಲವೆಡೆ ಸಹೋದರರಿಗೆ ತಿಲಕವನ್ನಿಟ್ಟು, ಅವರಿಗೆ ಆರತಿ ಬೆಳಗಿ ರಾಖಿ ಕಟ್ಟಿ ಸಿಹಿ ತಿನ್ನಿಸುತ್ತಾರೆ. ಸಹೋದರರು ತಮ್ಮ ಸಹೋದರಿಯರಿಗೆ ರಕ್ಷಣೆಯ ಪ್ರತೀಕವಾಗಿ ರಾಖಿ ಕಟ್ಟುತ್ತಾರೆ.

ಅಣ್ಣ ತಂಗಿ, ಅಕ್ಕ ತಮ್ಮ ಸಂಬಂಧವೇ ವಿಶೇಷ. ಎಷ್ಟೇ ಭಿನಾಭಿಪ್ರಾಯಗಳಿದ್ದರೂ, ಒಬ್ಬರು ಇನ್ನೊಬ್ಬರೊಂದಿಗೆ ಜಗಳವಾಡಿದರೂ, ಮೂರನೇಯವರು ತಮ್ಮವರಿಗೆ ಏನಾದರೂ ತೊಂದರೆ ನೀಡಿದರೆ ಸಹಿಸಿಕೊಳ್ಳುವುದಿಲ್ಲ.

ರಕ್ಷಾ ಬಂಧನ ಕೇವಲ ಆಚರಣೆಯಲ್ಲ; ಇದು ಅವಿರಮಿತ ಪ್ರೀತಿ, ಹಂಚಿಕೊಂಡ ನೆನಪುಗಳು ಮತ್ತು ಒಡಹುಟ್ಟಿದವರ ನಡುವಿನ ಶಾಶ್ವತ ಬಂಧದ ಪ್ರತೀಕ.

ಈ ರಕ್ಷಾ ಬಂಧನದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Chidambara Mahaswami ಗುಬ್ಬಿ ಚಿದಂಬರಾಶ್ರಮದಲ್ಲಿಎಲೆಕ್ಟ್ರಿಷಿಯನ್ ವೃತ್ತಿ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Sri Chidambara Mahaswami ಶ್ರೀ ಶ್ರೀ ಚಿದಂಬರ ಮಹಾಸ್ವಾಮಿಗಳು ಶ್ರೀ ಚಿದಂಬರಾಶ್ರಮವನ್ನು...

CM Siddharamaih ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸುವ ಕಾರ್ಯ ನಡೆಯುತ್ತಿದೆ- ಸಿದ್ಧರಾಮಯ್ಯ

CM Siddharamaih ಎಲ್ಲಾ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ.ಈಗಾಗಲೇ...

DC Shivamogga ಪರೀಕ್ಷಾರ್ಥಿಯ ಜನಿವಾರ ತೆಗೆಸಿದ ಪ್ರಕರಣ, ಈರ್ವರು ಗೃಹ ರಕ್ಷಕ ದಳ ಸಿಬ್ಬಂದಿ ಅಮಾನತು-ಗುರುದತ್ತ‌ ಹೆಗಡೆ

DC Shivamogga ಶಿವಮೊಗ್ಗ ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಇತ್ತೀಚಿಗೆ...

Mental health ಮಾನಸಿಕ ಸಮಸ್ಯೆಗಳು‌‌ ಮತ್ತು‌ ಸೂಕ್ತ ಪರಿಹಾರಗಳು ...

Mental health ಮಾನಸಿಕ ಖಾಯಿಲೆಗಳು ಯಾರಿಗಾದರೂ ಬರಬಹುದು : ಸೂಕ್ತ...