Rotary Club Shivamogga ರೋಟರಿ ಕ್ಲಬ್ ಶಿವಮೊಗ್ಗ ರವರ ವತಿಯಿಂದ ಶಿವಮೊಗ್ಗ ನಗರದ ಅಂಬೇಡ್ಕರ್ ಭವನದಲ್ಲಿ ರಸ್ತೆ ಸುರಕ್ಷತೆಯ ಕುರಿತ ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಸದರಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಾಗಾರದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಮಾರ್ಗದರ್ಶನ ನೀಡಿದರು.
*ರಸ್ತೆ ಸುರಕ್ಷತೆಯ ಬಗ್ಗೆ ಅವರು ನೀಡಿದ ಮಾಹಿತಿ ಅಮೂಲ್ಯವಾಗಿದ್ದವು.
1) ರಸ್ತೆ ಅಪಘಾತದಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯೆಲ್ಲಿ ಸಾವಿಗೀಡಾಗುತ್ತಾರೆ ಮತ್ತು ಅಪಘಾತಗಳಿಗೆ ಯುವಕರ ಹುಮ್ಮಸ್ಸು ಮತ್ತು ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಪ್ರಮುಖ ಕಾರಣವಾಗಿರುತ್ತದೆ. ಯಾರೇ ಆಗಲಿ ರಸ್ತೆ ಅಫಘಾತದಲ್ಲಿ ಬಲಿಯಾದಾಗ ಅವರ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ಮತ್ತು ಕುಟುಂಬದ ರಕ್ಷಣೆಯ ದೃಷ್ಠಿಯಿಂದ ಸಂಚಾರ ನಿಯಮಗಳನ್ನು ಪಾಲಿಸಿ ಮತ್ತು ಸುರಕ್ಷಿತವಾಗಿ ವಾಹನ ಚಲಾಯಿಸಿ.
Rotary Club Shivamogga 2) ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಠಿಯಿಂದ ಸಂಚಾರ ಪೊಲೀಸರು ಕೆಲಸ ನಿರ್ವಹಿಸುತ್ತಿದ್ದು, ಪೊಲೀಸರು ವಿಧಿಸುವ ದಂಡದಿಂದ ತಪ್ಪಿಸಿಕೊಳ್ಳಲು ಮಾತ್ರವೇ ಸಂಚಾರ ನಿಯಮಗಳನ್ನು ಪಾಲನೆ ಮಾಡಿ, ನಿಮಗೆ ನೀವೇ ಮೋಸ ಮಾಡಿಕೊಳ್ಳ ಬೇಡಿ, ನಿಮ್ಮ ಸುರಕ್ಷತೆಯ ದೃಷ್ಠಿಯಿಂದ ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಿ.
3) ಶಿವಮೊಗ್ಗ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದಾಗ, ಹೆಚ್ಚಿನ ದ್ವಿ ಚಕ್ರ ವಾಹನ ಸವಾರರು Half Helmet (ಅರ್ಧ ಹೆಲ್ಮೆಟ್) ಗಳನ್ನು ಧರಿಸಿ ವಾಹನ ಚಲಾಯಿಸುತ್ತಿರುವುದು ಕಂಡುಬಂದಿದ್ದು, ಒಂದುವೇಳೆ ಅಫಘಾತ ಸಂಭವಿಸಿದ್ದಲ್ಲಿ, Half Helmet (ಅರ್ಧ ಹೆಲ್ಮೆಟ್) ಗಳಿಂದ ನಿಮ್ಮ ತಲೆಗೆ ಯಾವುದೇ ಸುರಕ್ಷತೆ ಇಲ್ಲದೇ ಹೆಚ್ಚಿನ ಪೆಟ್ಟಾಗುವ ಸಂಭವವಿರುತ್ತದೆ. ಆದ್ದರಿಂದ ಕಡ್ಡಾಯವಾಗಿ ತಲೆಗೆ ಸಂಪೂರ್ಣ ರಕ್ಷಣೆ ನೀಡುವ ಐಎಸ್ಐ ಪ್ರಮಾಣಿತ ಹೆಲ್ಮೆಟ್ ಗಳನ್ನೇ ಧರಿಸಿ ವಾಹನಗಳನ್ನು ಚಲಾಯಿಸಿ.
4) ಸಂಚಾರ ದಟ್ಟಣೆ, ಅಡಚಣೆ ಮತ್ತು ಅಪಘಾತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರಿ ಸಿಗ್ನಲ್ ಲೈಟ್ ಗಳನ್ನು ಅಳವಡಿಸಲಾಗಿರುತ್ತದೆ. ಒಂದು ವೇಳೆ ಸಿಗ್ನಲ್ ಲೈಟ್ ನಿಯಮಗಳನ್ನು ಪಾಲನೇ ಮಾಡದೇ ಇದ್ದಲ್ಲಿ ಅಪಘಾತವಾಗುವ ಸಂಭವ ಹೆಚ್ಚಿರುತ್ತದೆ. ಆದ್ದರಿಂದ ನಿಮ್ಮ ಸುರಕ್ಷತೆಗಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡಿ ಮತ್ತು ನಾವು ನಮ್ಮ ದೇಶ ಹಾಗೂ ನಮ್ಮ ಊರಿನಲ್ಲಿ ಮಾದರಿಯಾಗಿರುವ ನಿಟ್ಟಿನಲ್ಲಿ ಮೂಲಭೂತ ನಾಗರೀಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು.
5) ಶಿವಮೊಗ್ಗ ನಗರದಲ್ಲಿ ಅಳವಡಿಸಲಾದ ಕ್ಯಾಮರಾಗಳ ಸಹಾಯದಿಂದ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ ವಾಹನಗಳ ಮಾಲೀಕರಿಗೆ / ಸವಾರರಿಗೆ ನೋಟೀಸ್ ಗಳನ್ನು ಕಳುಹಿಸಲಾಗುವ ವ್ಯವಸ್ಥೆಯನ್ನು ಅನುಷ್ಠಾನ ಮಾಡಲಾಗಿದ್ದು, ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ್ದಲ್ಲಿ, ಅಂತಹ ವಾಹನಗಳ ಸವಾರ / ಮಾಲೀಕರಿಗೆ ನೋಟೀಸ್ ಗಳನ್ನು ಕಳುಹಿಸಲಾಗುತ್ತಿದೆ. ನಮ್ಮ ಸುರಕ್ಷತೆಗಾಗಿ ಎಲ್ಲರೂ ಸಂಚಾರ ನಿಯಮಗಳನ್ನು ಪಾಲನೆ ಮಾಡೋಣ.ಈ ಸಂದರ್ಭದಲ್ಲಿ ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಸಂತೋಷ್ ಕುಮಾರ್, ಸಿಪಿಐ ಸಂಚಾರ ವೃತ್ತ, ರೋಟರಿ ಕ್ಲಬ್ ನ ಪದಾಧಿಕಾರಿಗಳಾದ ಗೀತಾ, ವಸಂತ್ ಹೋಬ್ಳಿಕರ್, ರವಿ, ರಮೇಶ್, ಕಿರಣ್ ಕುಮಾರ್, ಶಿವರಾಜ್ ಮತ್ತು ಶಿವಮೊಗ್ಗ ನಗರದ ವಿವಿಧ ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳು ಭಾಗವಹಿಸಿದ್ದರು.