Monday, June 23, 2025
Monday, June 23, 2025

Hospet Chintamani Mutt ಹೊಸಪೇಟೆ ಚಿಂತಾಮಣಿ ಮಠಕ್ಕೆ ಪ್ರಮುಖ ಅಚಾರ್ಯ ಮತ್ತು ವೇದಾಚಾರ್ಯರ ನೇಮಕ

Date:

Hospet Chintamani Mutt ದಿನಾಂಕ 27 ಆಗಸ್ಟ್ 2023 ರಂದು ಸಾಯಂಕಾಲ 5 ರಿಂದ 6 ಶ್ರೀ ಚಿಂತಾಮಣಿ ಮಠದಲ್ಲಿ ವೇದ ಪಾರಾಯಣ ಮತ್ತಿ 6 ರಿಂದ 8 ದತ್ತ ಭಜನೆ, ನಂತರ ಸದ್ಗುರು ಶ್ರೀಶ್ರೀ ಶಿವಾನಂದ ಭಾರತೀ ಸ್ವಾಮಿಗಳು ಪ್ರವಚನ ಕಾರ್ಯಕ್ರಮ ನೆಡೆಯಿತು. ಈ ಸಂಧರ್ಭದಲ್ಲಿ ಬಾಣಾವರದಿಂದ ಶ್ರೀ ನಾರಾಯಣ ಯೋಗೀಂದ್ರ ಆಶ್ರಮ ದ ಶಿಷ್ಯರು ಶ್ರೀ ಚಿಂತಾಮಣಿ ಮಠಕ್ಕೆ ಆಗಮಿಸಿ ಬಾಣಾವರದಲ್ಲಿ ನಡೆಯುವ ಗುರು ಚರಿತ್ರೆಯ ಪಾರಾಯಣ ಮತ್ತು ಇತರೆ ಕಾರ್ಯಕ್ರಮಗಳ ಸಲುವಾಗಿ “ಭಿಕ್ಷಾ ಕಾಣಿಕೆಯ” ನಿಮಿತ್ತ ದತ್ತ ಜೋಳಿಗೆಯನ್ನು ಭಕ್ತರ ಮುಂದೆ ತಂದಿದ್ದರು.

ಶ್ರೀ ಚಿಂತಾಮಣಿ ಮಠದ ಭಕ್ತರು ದತ್ತ ಭಜನೆಯಾದ ನಂತರ ತಮ್ಮಕೈಲಾದ “ಭಿಕ್ಷಾ ಕಾಣಿಕೆಯನ್ನು” ದತ್ತ ಜೋಳಿಗೆಗೆ ಸಮರ್ಪಿಸಿ ಆಶೀರ್ವಾದ ಪಡೆದರು. ಕಾರ್ಯಕ್ರಮದಲ್ಲಿ ಹೋಸಪೇಟೆ ಬ್ರಾಹ್ಮಣ ಸಮಾಜದ ಸದಸ್ಯರು ಮತ್ತು ಭಜನಾ ಮಂಡಳಿಯ ಮಹಿಳಾ ಸದಸ್ಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಭೆಯ ನಿರ್ಣಾಯಕದಂತೆ ಲೋಕಕಲ್ಯಾಣಕಾಗಿ
ಮುಂಬರುವ ಕರ್ಯಕ್ರಮಗಳನ್ನು ಗಣನೆಗೆ ತೆಗೆದುಕೂಂಡು ಸದ್ಗುರು ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಶ್ರೀ ಚಿಂತಾಮಣಿ ಮಠದ ಭಕ್ತ ಮಂಡಳಿಯ (ಅಧ್ಯಕ್ಷ) ಪ್ರಮುಖ ಅಚಾರ್ಯರನ್ನಾಗಿ ಶ್ರೀಯುತ ಸತ್ಯನಾರಾಯಣ ಜ್ಯೋಶಿ ಯವರನ್ನು ಆಯ್ಕೆ ಮಾಡಿದ್ದಾರೆ.

Hospet Chintamani Mutt ಇವರು ಶ್ರೀಮಠಕ್ಕೂ ಭಕ್ತರಿಗೂ ಸೇತುವೆಯಂತ್ತಿದ್ದು ನಿಷ್ಕಾಮ ಸೇವಾ ಕಾರ್ಯಗಳ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಹಾಗೂ ಶ್ರೀ ಸದ್ಗುರು ಮಹಾಸಂಸ್ಥಾನಮ್ ಶ್ರೀ ಚಿಂತಾಮಣಿ ಮಠದ (ಆಸ್ಥಾನ ವೇದ ವಿದ್ವಾನ್) ವೇದಾಚಾರ್ಯರನ್ನಾಗಿ ಶ್ರೀಯುತ ಗಣೇಶ್ ಗೋಸಾವಿ ಯವರನ್ನು ಆಯ್ಕೆ ಮಾಡಿದ್ದಾರೆ. ಇವರು ಶ್ರೀಮಠದಲ್ಲಿ ನಡೆಯುವ ವೈದಿಕ ಕಾರ್ಯಗಳ ಆಯೋಜನೆ ಮತ್ತು ನೇತೃತ್ವದ ಜವಾಬ್ದಾರಿಯನ್ನು ನಿಷ್ಕಾಮವಾಗಿ ವಹಿಸಲಿದ್ದಾರೆ ಎಂದು ತಿಳಿಸಿದರು‌.

ಇವರೀರ್ವರಿಗೂ ಶ್ರೀ ಮಠದ ಭಕ್ತರು ಶುಭಾಶಯಗಳನ್ನು ಕೋರುತ್ತಾ….ಎಲ್ಲಾ ಸೇವಾಕಾರ್ಯಗಳಿಗೂ ಸಹಕರಿಸಬೇಕೆಂದು ವಿನಂತಿ ಮಾಡಿದರು. ಭಜನೆ ಮತ್ತು ಕಾರ್ಯಕ್ರಮದ ನಂತರ ಶ್ರೀ ಸದ್ಗುರು ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಶ್ರೀ ಚಿಂತಾಮಣಿ ಮಠದ ಭಕ್ತ ಮಂಡಳಿಗೆ ಗುರುವಂದನಾ ಭಕ್ತಿ ಸಂಗೀತ, ಭಜನಾ ಪುಸ್ತಕವನ್ನು ನೀಡಿ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಮುರುಳೀಧರ ನಾಡಿಗೇರ್
ವಿಜಯನಗರ- ಹೊಸಪೇಟೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸುವ ಉದ್ದೇಶವಿದೆ – ಮಧು ಬಂಗಾರಪ್ಪ

Madhu Bangarappa ರಾಜ್ಯದಲ್ಲಿನ ವಿವಿಧ ಜಾತಿ ಜನಾಂಗಗಳ, ಅದರಲ್ಲೂ ಮುಖ್ಯವಾಗಿ ಹಿಂದುಳಿದ...

DK Shivakumar ಎತ್ತಿನಹೊಳೆ ಯೋಜನೆ ಕಾಮಗಾರಿ‌ ಪರಿಶೀಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

DK Shivakumar ಎತ್ತಿನ ಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಬರಪೀಡಿತ...

Royal English Medium School ರಾಯಲ್ ಡೈಮಂಡ್ ಶಾಲೆಯಲ್ಲಿ‌ ನಿತ್ಯ ಯೋಗ ಮಾಡುವ ಸಂಕಲ್ಪ ಸ್ವೀಕಾರ

Royal English Medium School ಶಿವಮೊಗ್ಗ ನಗರದ ಹೆಸರಾಂತ ವಿದ್ಯಾಸಂಸ್ಥೆಯಲ್ಲಿ ಒಂದಾದ...