Actor Upendra ದಲಿತ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಚಿತ್ರನಟ ಉಪೇಂದ್ರರಾವ್ ಹಾಗೂ ಸಚಿವ ಮಲ್ಲಿಕಾರ್ಜುನ್‌ರವರ ಅಣುಕು ಶವಯಾತ್ರೆ ನಡೆಸುವ ಮೂಲಕ ದಸಂಸ ಮುಖಂಡರುಗಳು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಚಿಕ್ಕಮಗಳೂರು ತಾಲ್ಲೂಕು ಪ್ರಧಾನ ಸಂಚಾಲಕ ಜೆ.ರಾಮಚಂದ್ರ ಮಾತನಾಡಿ ದಲಿತ ಸಮುದಾಯದ ವಿರುದ್ಧ ಅವಹೇಳನ ಮಾಡಿರುವ ಜಾತಿವಾದಿ ಮತ್ತು ಮನುವಾದಿ ಮನಸ್ಥಿತಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ಚಿತ್ರ ನಟ ಉಪೇಂದ್ರ ಅವರು ಪ್ರಜಾಕೀಯ ಪಕ್ಷದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂವಾದ ನಡೆಸುತ್ತಿರುವ ಸಂದರ್ಭದಲ್ಲಿ ಊರೆಂದರೆ ಹೊಲಗೇರಿ ಇರಲಿದೆ ಎಂಬ ಹೇಳಿಕೆ ನೀಡಿ ಸಮುದಾಯಕ್ಕೆ ನೋ ವುಂಟು ಮಾಡಿದ್ದು ರಾಜ್ಯದ ನಾನಾ ಕಡೆಗಳಲ್ಲಿ ಉಪೇಂದ್ರ ವಿರುದ್ದ ದಲಿತ ದೌರ್ಜನ್ಯ ಕಾಯ್ದೆ ಪ್ರಕರಣ ಗಳು ದಾಖಲಾದರೂ ಬಂಧಿಸುತ್ತಿಲ್ಲ ಎಂದು ದೂರಿದರು.
ರಾಜ್ಯಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಟಿವಿ ಸಂದರ್ಶನವೊoದರಲ್ಲಿ ಅಭಿವೃದ್ದಿ ವಿಚಾರ ಪ್ರಸ್ತಾಪವಾಗುತ್ತಿರುವಾಗ ಹೊಲಗೇರಿಯ ರೀತಿ ಕೆಲಸ ಮಾಡಿ ಹಾಳು ಮಾಡಿಕೊಳ್ಳಬೇಡಿ ಎಂದು ದಲಿತ ಜನಾಂಗಕ್ಕೆ ಅವಹೇಳನ ಮಾಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧವು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಜಾತಿವಾದಿ ಮನಸ್ಥಿತಿಯಿರುವ ಸಚಿವರು ಅಂತಹ ಸ್ಥಾನದಲ್ಲಿರಲು ಸೂಕ್ತವಲ್ಲ. ಕೂಡಲ ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ನಟ ಉಪೇಂದ್ರ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
Actor Upendra ಇದಕ್ಕೂ ಮುನ್ನ ಪಟ್ಟಣದ ಮಹಾತ್ಮಗಾಂಧಿ ಸರ್ಕಲ್‌ನಿಂದ ತಾಲ್ಲೂಕು ಕಚೇರಿವರೆಗೆ ಅಣುಕು ಶವಯಾತ್ರೆ ಮೆರವಣಿಗೆ ನಡೆಸಿ ತಾ.ಪಂ. ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಉಪ ತಹಶೀಲ್ದಾರ್ ವಾಣಿ ಅವರ ಮೂಲಕ ಗೃಹಸಚಿವರಿಗೆ ಮನವಿ ಸಲ್ಲಿಸಲಾಯಿತು.
Actor Upendra ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಮಹೇಂದ್ರಸ್ವಾಮಿ, ತಾಲ್ಲೂಕು ಸಂಘಟನಾ ಸಂಚಾಲಕ ಮೌಂಟ್ ಬ್ಯಾಟನ್, ಅಜ್ಜಂಪುರ ತಾಲ್ಲೂಕು ಸಂಚಾಲಕ ನಾಗರಾಜ್, ಮುಖಂಡರುಗಳಾದ ವಿಕಾಸ್, ರಮೇಶ್, ಮುನಿಯಾ, ಆನಂದ್, ಕಿರಣ್ ಮತ್ತಿತರರು ಹಾಜರಿದ್ದರು.