Wednesday, April 30, 2025
Wednesday, April 30, 2025

PM Poshan Yojana ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ ಪಿಎಂ ಪೋಷಣ್ ಯೋಜನೆ ಜಾರಿಗೆ

Date:

PM Poshan Yojana ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆ ನಿವಾರಣೆಗಾಗಿ ಜಾರಿಗೆ ತರಲಾಗಿರುವ ಪಿ.ಎಂ.ಪೋಷಣ್ ಮಧ್ಯಾಹ್ನ ಉಪಹಾರ ಯೋಜನೆಯಡಿ 9 ಮತ್ತು 10 ನೇ ತರಗತಿ ಮಕ್ಕಳಿಗೂ ಬೇಯಿಸಿದ ಮೊಟ್ಟೆ, ಮೊಟ್ಟೆ ಸೇವಿಸದವರಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ಇಂದಿನಿಂದ ವಿತರಿಸಲಾಗುತ್ತಿದೆ ಎಂದು ಜಿ.ಪಂ.ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ತಿಳಿಸಿದರು.

ಪಿಳ್ಳಂಗಿರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಿ, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಟ್ಟೆ/ಬಾಳೆಹಣ್ಣು/ಶೇಂಗಾ ಚಿಕ್ಕಿಯನ್ನು ವಿತರಣೆ ಮಾಡಿ ಮಾತನಾಡಿದರು.

ಈ ಹಿಂದೆ 1 ರಿಂದ 8 ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವನ್ನು ವಾರದಲ್ಲಿ ಒಂದು ದಿನ ಮೊಟ್ಟೆ, ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ವರ್ಷದಲ್ಲಿ 46 ದಿನಗಳ ಕಾಲ ವಿತರಸಲಾಗಿತ್ತು.

9 ಮತ್ತು 10 ನೇ ತರಗತಿ ಮಕ್ಕಳಿಗೂ ಕೂಡ ಪೌಷ್ಟಿಕಾಂಶವುಳ್ಳ ಪೂರಕ ಆಹಾರವನ್ನು ನೀಡಬೇಕಂದು ನಿರ್ಧರಿಸಿ ಸರ್ಕಾರ ಪ್ರಸಕ್ತ ಸಾಲಿನ ಇಂದಿನಿಂದ ಈ ಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸಿದೆ. ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಅಗತ್ಯವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವಲ್ಲಿ ಇದು ಸಹಕಾರಿಯಾಗಿದೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಇದು ಸಹಕರಿಸುತ್ತದೆ. ವಿದ್ಯಾರ್ಥಿಗಳ ಇದರ ಸದುಪಯೋಗ ಪಡೆದು ಉತ್ತಮ ವಿದ್ಯಾಭ್ಯಾಸ ಪಡೆದು ಉತ್ತಮ ನಾಗರೀಕರಾಗಬೇಕೆಂದು ಹಾರೈಸಿದರು.

ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಜಿಲ್ಲೆಯಲ್ಲಿ ಒಟ್ಟು 159507 ವಿದ್ಯಾರ್ಥಿಗಳಿದ್ದು ವಾರ್ಷಿಕವಾಗಿ ರೂ.7.65 ಕೋಟಿ ಅನುನಾದ ಈ ಯೋಜನೆಯಡಿ ನಿಗದಿಯಾಗಿದೆ.

ಪಿಳ್ಳಂಗಿರಿ ಪ್ರೌಢಶಾಲೆಯಲ್ಲಿ ಹಾಜರಿದ್ದ 254 ಮಕ್ಕಳ ಪೈಕಿ 224 ಮಕ್ಕಳು ಮೊಟ್ಟೆ, 29 ಮಕ್ಕಳು ಶೇಂಗಾ ಚಿಕ್ಕಿ ಮತ್ತು 01 ಮಗು ಬಾಳೆ ಹಣ್ಣನ್ನು ಸೇವಿಸಿದರು ಎಂದು ತಿಳಿಸಿದರು.

PM Poshan Yojana ಕಾರ್ಯಕ್ರಮದಲ್ಲಿ ಬಿಇಓ ನಾಗರಾಜ್, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ದಾದಾಪೀರ್, ಪ್ರಾಥಮಿಕ ಮತ್ತು ಪ್ರೌಢಶಾಲಾ ಎಸ್‍ಡಿಎಂಸಿ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯಿನಿ ವಿಶಾಲಾಕ್ಷಿ, ಸಹ ಶಿಕ್ಷಕರು, ಶಿಕ್ಷಣ ಸಂಯೋಜನಾಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Yadav School of Chess Institute ಯಾದವ ಸಂಸ್ಥೆಯಿಂದ ಚೆಸ್ ತರಬೇತಿ ಶಿಬಿರ

Yadav School of Chess Institute ರವೀದ್ರನಗರದ ಯಾದವ ಸ್ಕೂಲ್ ಆಫ್...

Shivaganga Yoga Center ನಗರದ ಅತಿದೊಡ್ಡ ಬಾಡಾವಣೆಗಳಿಗೆ ₹140 ಕೋಟಿ ಅನುದಾನದಿಂದ ಅಭಿವೃದ್ಧಿ- ವಿಶ್ವಾಸ್

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ...

Sarva Samriddhi Sadhana Center ರಿಪ್ಪನ್ ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದಲ್ಲಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರ

Sarva Samriddhi Sadhana Center ಹೊಸನಗರದ ರಿಪ್ಪನ್‌ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ...